ಐಗಳಿ : ಸಮೀಪದ ಬಿಳೂರ ಗ್ರಾಮದ ಪ ಪೂ ಶ್ರೀ ಮನಿಪ್ರ ರಾಜಯೋಗಿ ಗುರುಬಸವ ಮಹಾಶಿವಯೋಗಿಗಳವರ ಜಾತ್ರೆಯು ಶ್ರೀ ಮಠದ ಪೀಠಾಧಿಪತಿಗಳಾಗಿರುವ ಪಪೂ ಶ್ರೀ ಮನಿಪ್ರ ಗುರುಚನ್ನಬಸವ ಮಹಾಸ್ವಾಮಿಗಳ ಜಾತ್ರೆಯ ಪ್ರಚಾರ ಸಾಮಗ್ರಿ ಬಿಡುಗಡೆ ಮಾಡಿದರು.
ನಂತರ ಮಾತನಾಡಿ, ಗುರುಬಸವ ಮಹಾಶಿವಯೋಗಿಗಳು ಕುಸ್ತಿ ಪಟುವಾಗಿ ಅಲ್ಲದೇ ಕೃಷಿ ಚಟುವಟಿಕೆ ತೊಡಗಿಸಿಕೊಂಡು ಈ ನಾಡಿನಲ್ಲಿ ಗುರುತಿಸಿಕೊಂಡಿದ್ದರು, ಅವರು ಮಾಡಿದ ಅನೇಕ ಪವಾಡಗಳು ಇಂದಿಗೂ ಎಲ್ಲರಿಗೂ ಮಾದರಿಯಾಗಿವೆ. ಇದೇ ಏಪ್ರಿಲ್ ದಿ ೨೧ ರಿಂದ ಮೇ ೪ ರವರೆಗೆ ಭವ್ಯ ರಥೋತ್ಸವ, ದನಗಳ ಜಾತ್ರೆ ಹಾಗೂ ವಿಶೇಷ ಕಾರ್ಯಕ್ರಮಗಳು ಜರುಗಲಿವೆ. ಮಂಗಳವಾರ ಏಪ್ರಿಲ್ ದಿ ೨೧ ರಿಂದ ೨೯ ರವರೆಗೆ ಪ್ರತಿದಿನ ಸಾಯಂಕಾಲ ೭ ಗಂಟೆಗೆ ಪ್ರವಚನ ಇರುತ್ತದೆ. ಚಿಕ್ಕೊಟ್ನೆಕಲ್ ಗ್ರಾಮದ ಸಂಗೀತ ಬಳಗದವರು ಭಾಗವಹಿಸುವರು. ಶುಕ್ರವಾರ ದಿ ೨೪ ರಂದು ಮುಂ ೭ ಗಂಟೆಗೆ ಪಪೂ ಮನಿಪ್ರ ರಾಜಯೋಗಿ ಗುರುಬಸವ ಮಹಾಶಿವಯೋಗಿಗಳವರ ನೂತನ ಶಿಲಾಮೂರ್ತಿಯು ಕುಂಭಮೇಳದೊAದಿಗೆ ಪುರಪ್ರವೇಶ ಮಾಡುವದು.

ಬುಧವಾರ ದಿ ೨೯ ರಂದು ಗ್ರಾಮದ ಮಹಿಳೆಯರಿಂದ ಹೋಳಿಗೆ ಜಾತ್ರೆ ನಡೆಯಲಿದೆ. ಗುರುವಾರ ದಿ ೩೦ ರಂದು ಸಾಯಂಕಾಲ ೭ ಕ್ಕೆ ಶ್ರೀ “ಗುರುಬಸವ ಗೀತಾಮೃತ” ಗ್ರಂಥ ಬಿಡುಗಡೆ ನಿವೃತ್ತ ನ್ಯಾಯಾದೀಶರಾದ ಅರವಿಂದ ಪಾಶ್ಚಾಪುರೆ ಇವರಿಂದ ಹಾಗೂ ಅನೇಕ ಪೂಜ್ಯರಿಂದ ನಡೆಯಲಿದೆ. ಶುಕ್ರವಾರ ಮೇ ೧ ರಂದು ಸಾಯಂಕಾಲ ೭ ಕ್ಕೆ ಶ್ರೀ ಗುರುಬಸವ ಮಹಾಶಿವಯೋಗಿಗಳವರ ಕುರಿತಾದ ೮ ಭಕ್ತಿಗೀತೆಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಶನಿವಾರ ಮೇ ದಿ ೨ ರಂದು ಮುಂ ೮ ಕ್ಕೆ ಮುತೈದೆಯರ ಉಡಿ ತುಂಬುವ ತವರೂರಿನ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ೧೨ ಕ್ಕೆ ಮಹಾಪ್ರಸಾದ, ಸಂಜೆ ೭ ಕ್ಕೆ ಭಕ್ತಿ ಸಂಗೀತ ಕಾರ್ಯಕ್ರಮ, ರಾತ್ರಿ ಶ್ರೀ ಕೃಷ್ಣ ಪಾರಿಜಾತ ಬೈಲಾಟ ಜರುಗಲಿದೆ. ರವಿವಾರ ದಿ ೩ ರಂದು ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಗುರುಬಸವ ಶಿವಯೋಗಿಗಳ ನೂತನ ಶಿಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಜರುಗುವದು. ಮುಂ ೮ ಕ್ಕೆ ಭವ್ಯ ರಥೋತ್ಸವ ವಿವಿಧ ವಾದ್ಯಗಳ ಮೂಲಕ ಜರುಗಲಿದೆ. ಸಂಜೆ ೪ ಕ್ಕೆ ಜಂಗಿ ನಿಕಾಲಿ ಕುಸ್ತಿಗಳು ಜರುಗಲಿವೆ.
ಸೋಮವಾರ ದಿ ೪ ರಂದು ತರಬಂಡಿ ಸ್ಪರ್ಧೆಗಳ ನಡೆಯಲಿವೆ ಎಂದರು. ಈ ಎಲ್ಲ ಜಾತ್ರೆಯ ಕಾರ್ಯಕ್ರಮಗಳು ಯಶಸ್ವಿಯಾಗಿ ಮಾಡಲು ಹಿರಿಯರಾದ ಭೀಮಣ್ಣ ಶಿ ಗೆಜ್ಜಿ, ಮಹಾದೇವ ಸಿ ಕಾಯಪುರೆ, ಬಸಗೊಂಡ ಬಿ ಜಾಬಗೊಂಡ, ಶಂಕರ ನಿಂ ಜೀವಣ್ಣವರ, ರಾಯಣ್ಣ ಗು ಗೆಜ್ಜಿ, ಭೀಮು ಗು ಆಜೂರ, ಸದಾಶಿವ ಅ ಜಾರಿ, ಮಾದೇವ ನಿಂ ಜಟಗೊಂಡ ಸೇರಿದಂತೆ ಅನೇಕರು ಇದ್ದರು.
ವರದಿ : ಆಕಾಶ ಎಮ್ ಐಗಳಿ




