ಸೇಡಂ : ತಾಲೂಕಿನ ಮೋತಕಪಲ್ಲಿ ಗ್ರಾಮದಲ್ಲಿ ಸರಕಾರಿ ಪ್ರೌಡ ಶಾಲೆಯಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಹಾಗೂ ತಾಲೂಕು ಘಟಕ ವತಿಯಿಂದ ಕನ್ನಡ ಜಾಗೃತಿ ಮುನ್ನುಡಿ ಮತ್ತು ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯಂಕು ನಾಯಕ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಗುರುಗಳಾದ ಬಸಿರೋದಿನ್ ಅವರು ವಹಿಸಿಕೊಂಡಿದ್ದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾದ ವರದ ಸ್ವಾಮಿ ಬಿ ಹಿರೇಮಠ, ಎಸ್ಡಿಎಂಸಿ ಅಧ್ಯಕ್ಷರಾದ ಬಿಚ್ಚಪ್ಪ ಪೂಜಾರಿ, ತಾಲೂಕ ಪ್ರಧಾನ ಕಾರ್ಯದರ್ಶಿ ಉಮೇಶ್ ದೇವರಹಳ್ಳಿ, ತಾಲೂಕ ಸಂಚಾಲಕರಾದ ವೆಂಕಟರೆಡ್ಡಿ ನೀಲಂ, ಗ್ರಾಮ ಘಟಕ ಅಧ್ಯಕ್ಷರಾದ ರಾಜು ರಾಸೂರ್, ಮುಚೆಂದರ್ ರೆಡ್ಡಿ, ವಿಜಯ್ ಕುಮಾರ್ ಹೂಗಾರ ಅವರು ಅತಿಥಿ ಸ್ಥಾನ ವಹಿಸಿದರು.
ಈ ಕಾರ್ಯಕ್ರಮದ ನಿರ್ವಹಣೆಯನ್ನು ಸಹ ಶಿಕ್ಷಕರು ಮಹಾದೇವಪ್ಪ ಬಿ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ನಿರ್ಮಲ ಬಿ, ಚನ್ನವೀರಯ್ಯ, ವಿ,ವೆಂಕಟೇಶ್, ಶರಣಕುಮಾರ್, ರಾಮಪ್ಪ, ಭಿಮಮ್ಮ, ಪ್ರಿಯಾಂಕ, ವಿಶಾಲಾಕ್ಷಿ, ಹಾಗೂ ಜಯ ಕರ್ನಾಟಕ ಜನಪರ ವೇದಿಕೆ ಪದಾಧಿಕಾರಿಗಳು ವೆಂಕಟರೆಡ್ಡಿ, ಮಹಾದೇವ, ದೇವೇಂದ್ರಪ್ಪ, ಕೇಶವ ರೆಡ್ಡಿ, ರಾಜು ಯಾದವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್