ಬೆಂಗಳೂರು : ಇಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ 93ನೇ ವರ್ಷದ ಹುಟ್ಟುಹಬ್ಬ. ರಾಜ್ಯದ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿರುವ, ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಹಲವು ಉತ್ತಾನ ಹುದ್ದೆಗಳನ್ನು ನಿಭಾಯಿಸಿರುವ ದೇವೇಗೌಡರಿಗೆ ಪಕ್ಷಾತೀತವಾಗಿ ಜನ್ಮದಿನದ ಶುಭಾಶಯಗಳು ಹರಿದುಬಂದಿದೆ.
ಈ ಮಧ್ಯೆ ಜೆಡಿಎಸ್ ಪಕ್ಷದ ವತಿಯಿಂದ ಕೂಡ ಅದ್ಧೂರಿಯಾಗಿ ಮಾಜಿ ಪ್ರಧಾನಿ ದೇವೇಗೌಡರ ಜನ್ಮದಿನವನ್ನು ಆಚರಿಸಲಾಗಿದ್ದು,ಈ ಕುರಿತು ಜೆಡಿಎಸ್ ಟ್ವೀಟ್ ಮಾಡಿದೆ.ರಾಷ್ಟ್ರ ಮೆಚ್ಚಿದ ಧೀಮಂತ ರಾಜಕಾರಣಿ, ಮಣ್ಣಿನ ಮಗ, ಜನತಾದಳ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಗೌರವಾನ್ವಿತ ಮಾಜಿ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ದೇವೇಗೌಡರ 93ನೇ ಹುಟ್ಟುಹಬ್ಬವನ್ನು ಜೆ.ಪಿ. ಭವನದಲ್ಲಿ ಪಕ್ಷದ ವತಿಯಿಂದ ಆಚರಿಸಲಾಗಿದೆ ಎಂದು ಜೆಡಿಎಸ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.