ಕಲಬುರಗಿ: ಇನ್ನೇನು ಕೋರ್ಟ್ ಗೆ ಹೋಗಬೇಕಿದ್ದ ಜಡ್ಜ್ ಒಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.
ಕಲಬುರಗಿ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ವಿಶ್ವನಾಥ ಮೂಗತಿ ಹೃದಯಾಘಾತದಿಂದ ಸಾವನ್ನಪ್ಪಿದ ನಾಯಾಧೀಶರಾಗಿದ್ದಾರೆ.ಕಳೆದ ವಾರ ಕಲಬುರಗಿ ಕೋರ್ಟ್ ಗೆ ವರ್ಗಾವಣೆಗೊಂಡು ಕರ್ತವ್ಯಕ್ಕೆ ವಿಶ್ವನಾಥ ಸೇರಿದ್ದರು.
ವಿಶ್ವನಾಥ ಬಾಗಲಕೋಟೆ ಜಿಲ್ಲೆಯ ರಬಕವಿಯ ಬನಹಟ್ಟಿಯವರು. ಅವರು ಹೃದಯಾಘಾತದಿಂದ ತೀವ್ರ ಅಸ್ವಸ್ಥಗೊಂಡ ಹಿನ್ನೆಲೆ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಜಡ್ಜ್ ವಿಶ್ವನಾಥ ಕೊನೆಯುಸಿರೆಳೆದಿದ್ದಾರೆ.
ಇನ್ನೇನು ವಿಶ್ವನಾಥ ಅವರು ಕೋರ್ಟಗೆ ಹೋಗಲು ರೆಡಿಯಾಗುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಕುಟುಂಬಸ್ಥರಿಗೆ ತೀವ್ರ ಆಘಾತ ಮೂಡಿಸಿದೆ.