ಹುಕ್ಕೇರಿ:- ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವದ
ಶ್ರೀ. ಷ. ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ್ ಹುಕ್ಕೇರಿ ಇವರ ನೇತೃತ್ವದಲ್ಲಿ ದೀಪ ಬೆಳಗುವುದರ ಮುಖಾಂತರ ಅದ್ದೂರಿಯಾಗಿ ಕಾರ್ಯಕ್ರಮವನ್ನು ನಡೆಸಲಾಯಿತು ಹಾಗೂ ಗಣ್ಯ ವ್ಯಕ್ತಿಗಳಿಗೆ ಹಾಗೂ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ನಡೆಸಲಾಯಿತು.
ಹುಕ್ಕೇರಿಯ ಅಡವಿಸಿದ್ದೇಶ್ವರ ಮಠ ( ಹಳ್ಳದಕೇರಿ ) ದಿಂದ ಹುಕ್ಕೇರಿ ಸರ್ಕಲ್ ವರೆಗೆ ಅತೀ ವಿಜೃಂಭಣೆಯಿಂದ ಮೆರವಣಿಗೆ ನಡೆಸಲಾಗುವುದು. ಈ ಸಂದರ್ಭದಲ್ಲಿ
ಇಂಚಿಗಿರಿ ಮಠ ಹುಕ್ಕೇರಿ ಅಭಿನವ ಮಂಜುನಾಥ್ ಮಹಾಸ್ವಾಮಿಗಳು,
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರು ದೀಪಕ ಗುಡಗನಟ್ಟಿ,
ಮಹಾವಿರ ನೀಲಜಗಿ( ಅಧ್ಯಕ್ಷರು ಶ್ರೀ ಮಹಾವಿರ ಉದ್ಯೋಗ ಸಮೂಹ ಸಂಸ್ಥೆ ಹುಕ್ಕೇರಿ )
ಬಾಲಚಂದ್ರ ಇನಾಮದಾರ ( ಸಮಾಜ ಸೇವಕರು ),
ಬಸವರಾಜ್ ತಳವಾರ( ಸಮಾಜ ಸೇವಕರು ),
ಮಹಾದೇವ ತಳವಾರ, ಪ್ರಮೋದ್ ಕೊಗೆ , ಸುನೀಲ್ ಭೈರಣ್ಣವರ, ಅಕಪ್ಪಾ ಯಶವಂತ ರಣವ್ವಗೋಳ, ವಿನಯ ಪಾಟೀಲ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರು ಉಪಸ್ಥಿತರಿದ್ದರು.
ವರದಿ:-ಶಿವಾಜಿ ಎನ್ ಬಾಲೇಶಗೋಳ