ರೋಣ: ಹಸಿವು ಮುಕ್ತ ಕರ್ನಾಟಕ ಹಾಗೂ ಗುಣಮಟ್ಟದ ಆಹಾರ ನೀಡುವ ಉದ್ದೇಶದಿಂದ ಜಾರಿಗೆ ತಂದಿರುವ ಇಂದಿರಾ ಕ್ಯಾಂಟೀನ್ ಮಹತ್ವಕಾಂಕ್ಷಿ ಯೋಜನೆಯಿಂದ ಬಡವರಿಗೆ ಬಹಳ ಅನಕೂಲವಾಗಲಿದೆ ಎಂದು ಶಾಸಕ ಹಾಗೂ ಖನಿಜ ಅಭಿವೃದಿ ನಿಗಮದ ಅದ್ಯಕ್ಷ ಜಿ. ಎಸ್. ಪಾಟೀಲ ಹೇಳಿದರು.
ಅವರು ರೋಣ ನಗರದ ಲೋಕೂಪಯೋಗಿ ಇಲಾಖೆಯ ಆವರಣದಲ್ಲಿ ನೂತನ ಇಂದಿರಾ ಕ್ಯಾಂಟೀನ್ ಉಧ್ಘಾಟಿಸಿ ಮಾತನಾಡಿದರು.
5 ರೂಪಾಯಿಗೆ 3 ಇಡ್ಲಿ, ಚಟ್ನಿ, 10 ರೂಪಾಯಿಗೆ ಹೊಟ್ಟೆ ತುಂಬ ಅನ್ನ ಸಾಂಬರ್ ಹಾಗೂ 10 ರೂಪಾಯಿಗೆ ಚಪಾತಿ ಪಲ್ಯ ಸೇರಿದಂತೆ ಪ್ರತಿದಿನ ಬೇರೆ ಬೇರೆ ರೀತಿಯ ಪದಾರ್ಥಗಳನ್ನು ಒದಗಿಸಲಾಗುವುದು.
ಇಂದಿರಾ ಕ್ಯಾಂಟೀನ್ ನಲಿ ಶುದ್ಧವಾದ ಉಪಹಾರ ಊಟ ತಯಾರಿಸಲಾಗುವುದು.
ಕಡಿಮೆ ದರದಲ್ಲಿ ಹೊಟ್ಟೆ ತುಂಬ ಊಟ ಮಾಡಬಹುದು ಇದರಿಂದ ಬಡವರು ಕೂಲಿ ಕಾರ್ಮಿಕರು ಬೇರೆ ಊರುಗಳಿಂದ ಬಂದ ಜನರಿಗೆ ಇದು ತುಂಬಾ ಅನಕೂಲವಾಗಲಿದೆ.
ಹಸಿದ ಜನರ ಹೊಟ್ಟೆ ತುಂಬಿಸುವ ಕೇಲಸ ಇಂದಿರಾ ಕ್ಯಾಂಟೀನ್ ನಿಂದ ಆಗಲಿದೆ ಎಂದರು.
ಗುಲಗಂಜಿ ಮಠದ ಗುರುಪಾದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಿದ್ದರು.
ರೋಣ ತಾಲೂಕ ಗ್ಯಾರಂಟಿ ಸಮಿತಿ ಅದ್ಯಕ್ಷ ಮಿಥುನ ಪಾಟೀಲ.
ಪುರಸಭೆ ಅದ್ಯಕ್ಷೆ ಗೀತಾ ಮಾಡಲಗೇರಿ.
ಉಪಾಧ್ಯಕ್ಷ ದುರಗಪ್ಪ ಹಿರೇಮನಿ.
ಐ. ಎಸ್. ಪಾಟೀಲ.
ಅಕ್ಷಯ ಪಾಟೀಲ.
ವಿ. ಆರ್. ಗುಡಿಸಾಗರ.
ಯೂಸಪ್ ಇಟಗಿ.
ಪಿ. ಎಲ್. ಡಿ ಬ್ಯಾಂಕ್ ನಿರ್ದೇಶಕ ಬಸವರಾಜ ನವಲಗುಂದ.
ಮುಖ್ಯಧಿಕಾರಿ ರಮೇಶ್ ಹೂಸಮನಿ.
ಬಾವಾಸಾಬ್ ಬೆಟಗೇರಿ.
ಮಲಯ್ಯ ಮಹಾಪುರಷಮಠ.
ಸಂಗಪ್ಪ ಜಿಡ್ಡಿಬಾಗಿಲ.
ನಾಜ್ ಬೆಗಂ ಯಲಿಗಾರ.
ಲಕ್ಷ್ಮಿ ಗಡಗಿ.
ಸೇರಿದಂತೆ ಪುರಸಭೆ ಸರ್ವ ಸದಸ್ಯರು ಹಾಗೂ ಸಿಬ್ಬಂದಿಗಳು ಇದ್ದರು.