ಬೆಳಗಾವಿ : ಜನವರಿ 14 ರಂದು ಬೆಳಗ್ಗಿನ ಜಾವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತಕ್ಕೀಡಾಗಿ ಫ್ರಾಕ್ಚರ್ ಗೆ ಒಳಗಾಗಿರುವ ಸಚಿವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಒಡೆಯುತ್ತಿದ್ದಾರೆ. ಬೆನ್ನು ಮೂಳೆಯಲ್ಲಿ L4 L6 ಗೆ ಪೆಟ್ಟು ಬಿದ್ದಿದೆ ಎಂದು ವೈದ್ಯರು ಹೇಳಿದ್ದು ಅಗತ್ಯ ಚಿಕಿತ್ಸೆಯನ್ನು ಒದಗಿಸಲಾಗಿದೆ.
ಈ ನಡುವೆ ಇಂದು ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಸತೀಶ್ ಜಾರಕಿಹೊಳಿ,ಲಕ್ಷ್ಮಿ ಹೆಬ್ಬಾಳ್ಕರ್ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಈ ವೇಳೆ ಮಾತಮಾಡಿದ ಸಚಿವ ಸತೀಶ್ ಜಾರಕಿಹೋಳಿ, ಸಚಿವೆ ಗುಣಮುಖರಾಗುತ್ತಿದ್ದಾರೆ. ಆದಷ್ಟು ಬೇಗ ರಿಕವರ್ ಆಗಲಿ ಎಂದು ಹಾರೈಸಿದ್ದಾರೆ.
ಬೆಳಗಾವಿ ರಾಜಕಾರಣದಲ್ಲಿ ಈ ಹಿಂದಿನಿಂದಲೂ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಹಗ್ಗ ಜಗ್ಗಾಟ ನಡೆಯುತ್ತಿದ್ದು, ಇದೇ ವಿಚಾರಕ್ಕೆ ಮೊನ್ನೆಯ CLP ಸಭೆಯಲ್ಲಿ ಕೂಡ ಡಿಕೆಶಿ ಮತ್ತು ಜಾರಕಿಹೊಳಿ ನಡುವೆ ವಾಗ್ವಾದ ಏರ್ಪಟ್ಟಿತ್ತು. ಇದೀಗ ರಾಜಕೀಯ ವೈಮನಸ್ಸನ್ನು ಪಕ್ಕಕಿಟ್ಟು ಸತೀಶ್ ಜಾರಕಿಹೊಳಿ ಆಸ್ಪತ್ರೆಗೆ ಭೇಟಿ ನೀಡಿ ಲಕ್ಷ್ಮೀ ಹೆಬ್ಬಾಳ್ಕರ್ ಯೋಗಕ್ಷೇಮ ವಿಚಾರಿಸಿದ್ದಾರೆ.