Ad imageAd image

ಮಹಾತ್ಮಾ ಗಾಂಧಿ ಮರಿಮೊಮ್ಮಗಳಿಗೆ 7 ವರ್ಷ ಜೈಲು ಶಿಕ್ಷೆ 

Bharath Vaibhav
ಮಹಾತ್ಮಾ ಗಾಂಧಿ ಮರಿಮೊಮ್ಮಗಳಿಗೆ 7 ವರ್ಷ ಜೈಲು ಶಿಕ್ಷೆ 
WhatsApp Group Join Now
Telegram Group Join Now

ದಕ್ಷಿಣ ಆಫ್ರಿಕಾ : ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಹಾತ್ಮಾ ಗಾಂಧಿ ಮರಿಮೊಮ್ಮಗಳಾದ ಲತಾ ರಾಮ್‌ಗೊಬಿನ್‌ (56) ಗೆ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಇದಕ್ಕೂ ಮುನ್ನ 50 ಸಾವಿರ ರಾಂಡ್‌ ಮೌಲ್ಯದ ಜಾಮೀನಿನ ಮೇಲೆ ಆಕೆಯನ್ನು ಬಿಡುಗಡೆ ಮಾಡಲಾಗಿತ್ತು.ಈಗ ಆರೋಪ ಖಚಿತಗೊಂಡ ಬಳಿಕ ಜೈಲು ಶಿಕ್ಷೆ ಪ್ರಕಟವಾಗಿದೆ.

ಉದ್ಯಮಿ ಎಸ್‌.ಆರ್‌. ಮಹಾರಾಜ್‌ ಎಂಬುವವರಿಗೆ ಸುಮಾರು 3.2 ಕೋಟಿ ರೂ. ವಂಚಿಸಿದ ಹಾಗೂ ಪೋರ್ಜರಿ ಪ್ರಕರಣದಲ್ಲಿ ಲತಾ ಆರೋಪಿಯಾಗಿದ್ದರು.

ದಕ್ಷಿಣ ಆಫ್ರಿಕಾದ ಆಸ್ಪತ್ರೆಗಳಿಗೆ ಪೂರೈಸಲು ಮೂರು ಕಂಟೇನರ್‌ ಲಿನೆನ್‌ ಖರೀದಿಸಿದ್ದ ಉದ್ಯಮಿ, ಅದಕ್ಕೆ ಮುಂಗಡವನ್ನೂ ಪಾವತಿಸಿದ್ದರು. ಆದರೆ ಸುಂಕ ಮತ್ತಿತರ ವೆಚ್ಚಗಳ ನೆಪದಲ್ಲಿ ಲತಾ ಉದ್ಯಮಿಯಿಂದ ಮತ್ತಷ್ಟು ಹಣ ವಸೂಲಿ ಮಾಡಿದ್ದರು.

ಆದರೆ ಸರಕನ್ನೂ ಕೊಡದೆ ಹಣವನ್ನೂ ವಾಪಸ್‌ ಮಾಡಿರಲಿಲ್ಲ. ಬಳಿಕ ನಕಲಿ ಕಾಗದ ಪತ್ರಗಳನ್ನು ಸೃಷ್ಟಿಸಿ ಹೂಡಿಕೆದಾರರ ದಾರಿ ತಪ್ಪಿಸಲು ಯತ್ನಿಸಿದ್ದರು.

ಲತಾ ಅವರ ಪೋಷಕರಾದ ಎಲಾ ಗಾಂಧಿ ಮತ್ತು ಮೇವಾ ರಾಮ್‌ ಗೋಬಿನ್‌ ಮಾನವ ಹಕ್ಕುಗಳ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದರು.

WhatsApp Group Join Now
Telegram Group Join Now
Share This Article
error: Content is protected !!