Ad imageAd image

ಪುರಸಭೆಯ ನೂತನ ಉಪಾಧ್ಯಕ್ಷರಾಗಿ ಮಲೀನಾ ತಾಜ್ ಅವಿರೋದ ಆಯ್ಕೆ

Bharath Vaibhav
ಪುರಸಭೆಯ ನೂತನ ಉಪಾಧ್ಯಕ್ಷರಾಗಿ ಮಲೀನಾ ತಾಜ್ ಅವಿರೋದ ಆಯ್ಕೆ
WhatsApp Group Join Now
Telegram Group Join Now

ಪಾವಗಡ  : ತುಮಕೂರು ಜಿಲ್ಲೆ ಪಾವಗಡ ತಾಲೂಕು ದಿನಾಂಕ, 4/06/2025 ಬುಧವಾರ ರಂದು ಪಾವಗಡ ಪಟ್ಟಣದ ಪುರಸಭೆಯ ಉಪಾಧ್ಯಕ್ಷ ಸ್ಥಾನಕ್ಕೆ ಗೀತಾ ಹನುಮಂತರಾಯಪ್ಪ ರವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶ ದೊಂದಿಗೆ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಅಧಿಕಾರಿಯಾಗಿ ವರದರಾಜ ತಹಸಿಲ್ದಾರ್ ಮುಂದಲತ್ವ ವಹಿಸಿಕೊಂಡರು ಚುನಾವಣೆ ನಡೆಸಿದರು ಈ ಚುನಾವಣೆಯಲ್ಲಿ ಮಲೀನಾ ತಾಜ್ ರವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರು ಆದ್ದರಿಂದ ಚುನಾವಣಾಧಿಕಾರಿಗಳು ಅವಿರೋಧ ಆಯ್ಕೆಯನ್ನು ತಿಳಿಸಿದರು

ಮಲೀನಾ ತಾಜ್ ರವರು ಮಾತನಾಡಿ ಪಟ್ಟಣದಲ್ಲಿ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಬೀದಿ ದೀಪದ ವ್ಯವಸ್ಥೆ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸಮಸ್ಯೆಗಳು ಕಂಡುಬಂದಲ್ಲಿ ಅಧ್ಯಕ್ಷರೊಂದಿಗೆ ಚರ್ಚೆ ಮಾಡಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆಂದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷ ಸುದೇಶ್ ಬಾಬು. ಮಾಜಿ ಅಧ್ಯಕ್ಷ ರಾಜೇಶ್ ಪುರಸಭೆಯ ಸದಸ್ಯರುಗಳಾದ ತೆಂಗಿನಕಾಯ ರವಿ, ರಾಮಾಂಜಿನಪ್ಪ, ವೇಲುರಾಜ್, ಇಮ್ರಾನ್ ಉಲ್ಲಾ, ವಿಜಯ್ ಕುಮಾರ್, ಲಕ್ಷ್ಮೀದೇವಿ, ಪುರಸಭಾಮುಖ್ಯಅಧಿಕಾರಿ ಜಾಫರ್ ಷರೀಫ್ ಖಾನ್, ಆರೋಗ್ಯ ಅಧಿಕಾರಿ ಇನ್ನು ಮುಂತಾದ ಸದಸ್ಯರುಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ವರದಿ : ಶಿವಾನಂದ 

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!