Ad imageAd image

ನನ್ನಾಸೆ

Bharath Vaibhav
ನನ್ನಾಸೆ
WhatsApp Group Join Now
Telegram Group Join Now

ನಗುವ ಗುಲಾಬಿಯ ನಡುವೆ ದುಂಬಿಯಾಗುವಾಸೆ
ಹುಣ್ಣಿಮೆ ಚಂದ್ರನ ನಡುವೆ ತಾರೆಯಾಗುವಾಸೆ
ಕೃಷ್ಣನ ಕೈಯಲ್ಲಿ ಕೊಳಲಾಗುವಾಸೆ
ಸರಸ್ವತಿ ಕೈಯಲ್ಲಿ ವೀಣೆಯಾಗುವಾಸೆ…..

ಎಲ್ಲರೂ ಮುದ್ದಾಡುವ ಬೊಂಬೆಯಾಗುವಾಸೆ
ಕನ್ನಡಾಂಬೆಯ ಮಡಿಲ ಮಗುವಾಗುವಾಸೆ
ಮುದ್ದು ಮಗುವಿನ ನಗುವಾಗುವಾಸೆ
ಎಲ್ಲರ ಬಾಯಲ್ಲಿ ಸಿಹಿ ಮಾತಾಗುವಾಸೆ…

ದುಃಖದಲ್ಲಿದ್ದವರಿಗೆ ಖುಷಿ ನೀಡುವಾಸೆ
ಕಷ್ಟದಲ್ಲಿದ್ದವರಿಗೆ ಸುಖ ನೀಡುವಾಸೆ
ಕವಿಗಳ ಹಾಡಿನ ಸಾಲಾಗುವಾಸೆ
ಲೇಖಕರ ಕೈಯಲ್ಲಿ ಲೇಖನಿಯಾಗುವಾಸೆ…

ಆಗಸದಲ್ಲಿ ಹಕ್ಕಿಯಂತೆ ಹಾರುವಸೆ
ರೈತನ ಶ್ರಮದ ಫಲವಾಗುವಾಸೆ
ಎಲ್ಲರಲ್ಲಿ ಒಂದಾಗಿ ಬಾಳುವಾಸೆ
ಏಳೇಳು ಜನ್ಮದಲ್ಲೂ ಭಾರತದ ಭೂಮಿಯಲ್ಲೇ ಹುಟ್ಟುವಾಸೆ…

ವರ್ಷಾ ಕುರಹಟ್ಟಿ
-ವಿದ್ಯಾರ್ಥಿನಿ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ವಿದ್ಯಾನಗರ, ಹುಬ್ಬಳ್ಳಿ

ವರ್ಷಾ ಕುರಹಟ್ಟಿ
-ವಿದ್ಯಾರ್ಥಿನಿ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ವಿದ್ಯಾನಗರ, ಹುಬ್ಬಳ್ಳಿ

WhatsApp Group Join Now
Telegram Group Join Now
Share This Article
error: Content is protected !!