ಬಾಗಲಕೋಟೆ :- ಹುನಗುಂದ ತಾಲೂಕಿನ ಬಿಸಲದಿನ್ನಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ನೂತನ ಕಟ್ಟಡವನ್ನ ಶ್ರೀಗಳ ಸಾನಿಧ್ಯ ದಲ್ಲಿ ಉದ್ಘಾಟಿಸಿದರು.

ಉದ್ಘಾಟಿಸಿದ ಶಾಸಕ ಕಾಶಪ್ಪನವರು ಮಾತನಾಡಿ ಸರ್ಕಾರದಿಂದ ಅನುದಾನ ಕೊಡುವಲ್ಲಿ ನಾವು ಸಫಲರಾಗಿದ್ದೇವೆ ಹೊರತು ವಿಫಲರಾಗಿಲ್ಲ ಸರ್ಕಾರದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಹೇಗೆ ಕಾರ್ಯರೂಪಕ್ಕೆ ತಂದಿವೊ ಅದೇ ರೀತಿ ಅಭಿವೃದ್ಧಿ ಕೆಲಸದಲ್ಲಿ ಕೂಡ ಯಾವುದೇ ಹಿಂದೇಟು ಹಾಕುವುದಿಲ್ಲ.
ಕೂಡಲೇ ಕೂಡಲಸಂಗಮ ಮತ್ತು ಅಡಿವಾಳ ಬ್ರಿಡ್ಜ್ ಉದ್ಘಾಟನೆ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು ಇದೇ ಸಂದರ್ಭದಲ್ಲಿ ಹನುಗುಂದ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಯುತ ಗಂಗಾಧರ್ ದೊಡ್ಮನಿ. ತಾಲೂಕ್ ಪಂಚಾಯತ್ ಕಾರ್ಯನಿರ್ವಾಹಕ ಮುರಳಿಧರ್ ದೇಶಪಾಂಡೆ. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪಾರ್ವತಿವ್ವ ಕಾಮಣ್ಣ ಹಿರೇಗೌಡರ್. ಉಪಾಧ್ಯಕ್ಷರಾದ ಯಮನಪ್ಪ ದೊಡ್ಡಮನಿ. ಭೀಮಣ್ಣ ಯರ್ಜರಿ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಹನುಮಂತ ವಕ್ರ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ:- ನಿಂಗರಾಜ ಬೆನಾಳ್




