ಮುಂಬೈ: ವೇಗಿಗಳಾದ ಪ್ರಸಿದ್ದ ಕೃಷ್ಣ ಹಾಗೂ ಹರ್ಷಿತ್ ರಾಣಾ ಫಿಟ್ನೆಸ್ ಗಾಗಿ ಕಾಯುತಿರುವ ಭಾರತ ಕ್ರಿಕೆಟ್ ತಂಡದ ಆಯ್ಕೆದಾರರು ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಸರಣಿಗಾಗಿ ಏಕದಿನ ಹಾಗೂ ಟೆಸ್ಟ್ ತಂಡಗಳನ್ನು ಆಯ್ಕೆ ಮಾಡಬೇಕಿದೆ.
ಈ ಇಬ್ಬುರು ವೇಗಿಗಳ ಜೊತೆ ವಿಕೆಟ್ ಕೀಪರ್ ರಿಷಬ್ ಪಂತ್ ಫಿಟ್ನೆಸ್ ಗಾಗಿಯೂ ಕಾಯಲಾಗುತ್ತಿದ್ದು, ಸಾಧ್ಯ ಇದ್ದಸ್ಟು ಕಾಯ್ದು ನೋಡಿ ಟೆಸ್ಟ್ ಹಾಗೂ ಏಕದಿನ ತಂಡ ಪ್ರಕಟಿಸುವ ನಿರ್ಧಾರಕ್ಕೆ ಆಯ್ಕೆ ದಾರರು ಬಂದಿದ್ದಾರೆ.


