ಶಿವಮೊಗ್ಗ: ಒಂದು ವರ್ಷದಲ್ಲಿ ಮೂರನೇ ಸಿಎಂ ಬಂದರು ಬರಬಹುದು, ನನ್ನ ಮಾತನ್ನ ಯಾರೂ ಕೂಡ ಹಗುರವಾಗಿ ಪರಿಗಣಿಸಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಹೇಳಿದ್ದಾರೆ.
ಶಿವಮೊಗ್ಗದ ಹೊಸನಗರದಲ್ಲಿ ಮಾತನಾಡಿರುವ ಬಿ.ವೈ.ವಿಜಯೇಂದ್ರ ಅವರು, ಇನ್ನು ಒಂದು ವರ್ಷದಲ್ಲಿ ಮೂರನೇ ಸಿಎಂ ಬಂದರು ಬರಬಹುದು, ಇದು ಉಡಾಫೆ ಅಂತ ಅನಿಸಬಹುದು, ಆದ್ರೆ, ಯಾರು ಕೂಡ ಹಗುರವಾಗಿ ತೆಗೆದುಕೊಳ್ಳಬಾರದು.
ಕಾಂಗ್ರೆಸ್ ಪಕ್ಷದ ಆಂತರಿಕ ಗೊಂದಲ ಸೃಷ್ಟಿಯಾಗಿದೆ. ಷಡ್ಯಂತ್ರದ ಬಗ್ಗೆ ಸತ್ಯಸತ್ಯತೆ ಸದ್ಯದಲ್ಲೇ ಹೊರಬರುತ್ತದೆ ಎಂದು ಹೇಳಿದರು.
ಮೂರನೇ ಸಿಎಂ ಬಂದರೂ ಆಶ್ಚರ್ಯ ಇಲ್ಲ, ಇದನ್ನ ಹಗುರವಾಗಿ ತೆಗೆದುಕೊಳ್ಳಬೇಡಿ, ಸರ್ಕಾರ ಯಾವ ಹಂತಕ್ಕೆ ಬರುತ್ತದೆ ಕಾದು ನೋಡಬೇಕು. ಇನ್ನು ಒಂದು ವರ್ಷ ಇವರೇ ಇರಲಿ, ಈಗಾಗಲೇ ಸಾಕಷ್ಟು ಜನ ಕಾಂಗ್ರೆಸ್ ನಾಯಕರು ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.


