LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

20.00 ಕೋಟಿ ರೂ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ

Advertisement
ರಾಮದುರ್ಗ :ಇಂದಿರಾ ಕ್ಯಾಂಟೀನ್ ಉದ್ಘಾಟನೆ ಹಾಗೂ ಶಾಸಕರ ಎಸ್.ಎಫ್.ಸಿ ವಿಶೇಷ ಅಭಿವೃದ್ಧಿ ಅನುದಾನದ 20.00 ಕೋಟಿ ರೂ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ ಭೂಮಿ ಪೂಜೆ ನೆರವೇರಿಸಿದರು.

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ 27 ವಾರ್ಡ್ ಗಳಿಗೆ ಸನ್ 2024-25 ನೇ ಸಾಲಿನಲ್ಲಿ ಶಾಸಕರ ಎಸ್.ಎಫ್.ಸಿ ವಿಶೇಷ ಅಭಿವೃದ್ಧಿ ಅನುದಾನದ 20.00 ಕೋಟಿ ರೂ ವೆಚ್ಚದ ವಿವಿಧ ಕಾಮಗಾರಿಗಳಿಗೆ ಸೋಮವಾರ ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ರಾಮದುರ್ಗ ಪುರಸಭೆಯಲ್ಲಿ ಇದ್ದಂತಹ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಎನ್ನದೆ ಪಟ್ಟಣದ 27 ವಾರ್ಡುಗಳಿಗೆ ಅಭಿವೃದ್ಧಿ ತಾರತಮ್ಯ ಮಾಡದೆ ಎಲ್ಲ ವಾರ್ಡಗಳಿಗೆ ನಾವು ಕೆಲಸ ಹಾಕಿದ್ದೇವೆ ನಮಗೆ ರಾಜಕೀಯ ಮುಖ್ಯವಲ್ಲ ರಾಮದುರ್ಗ ಪಟ್ಟಣವನ್ನು ಬೆಂಗಳೂರು ಸಿಟಿಯನ್ನಾಗಿ ಅಭಿವೃದ್ಧಿಪಡಿಸುವುದು ಮುಖ್ಯ ಎಂದು ಹೇಳಿದರು.

1490.00 ಲಕ್ಷ ರೂ ದಲ್ಲಿ ರಾಮದುರ್ಗ ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡುವುದು.

150.00 ಲಕ್ಷ ರೂ ವೆಚ್ಚದಲ್ಲಿ ಉದ್ಯಾನವನ ಅಭಿವೃದ್ಧಿಪಡಿಸುವದು. 10.00 ಲಕ್ಷ ರೂ ವೆಚ್ಚದಲ್ಲಿ ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡಗಳಲ್ಲಿ ಹೈಮಾಸ್ಟ್ ಅಳವಡಿಸುವದು. 50.00 ಲಕ್ಷ ರೂ ವೆಚ್ಚದಲ್ಲಿ ಪಟ್ಟಣದಲ್ಲಿ ಸ್ವಾಗತ ಕಮಾನ ನಿರ್ಮಾಣ ಮಾಡುವುದು. 100.00 ಲಕ್ಷ ರೂ ವೆಚ್ಚದಲ್ಲಿ ವಿವಿಧ ವಾರ್ಡಗಳಲ್ಲಿ ಸಾರ್ವಜನಿಕರಿಗೆ
ಹೈಟೆಕ್ ಶೌಚಾಲಯ ನಿರ್ಮಾಣ ಮಾಡುವದು. 50.00 ಲಕ್ಷ ರೂ ವೆಚ್ಚದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣ ಮಾಡುದು. 50.00 ಲಕ್ಷ ರೂ ವೆಚ್ಚದಲ್ಲಿ ಪುರಸಭೆಯ ಸಾಂಸ್ಕೃತಿಕ ಭವನ ಅಭಿವೃದ್ಧಿಪಡಿಸುವದು. 100.00 ಲಕ್ಷ ರೂ ವೆಚ್ಚದಲ್ಲಿ ಪಟ್ಟಣದ ವೀರಶೈವ ಸಮಾಜದ ಸ್ಮಶಾನ ಹಾಗೂ ಮುಕ್ತಿಧಾಮ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು .



ಶಾಸಕ ಅಶೋಕ್ ಪಟ್ಟಣ ಅವರು ರಾಮದುರ್ಗ ಪಟ್ಟಣವನ್ನು ಅಭಿವೃದ್ಧಿಪಡಿಸಲು 20 ಕೋಟಿ ಅನುದಾನದ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿ ಪಟ್ಟಣದ ವಿವಿಧ ವಾರ್ಡ್ ಗಳಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರು ಲಕ್ಷ್ಮಿ ಜ. ಕಡಕೋಳ, ಉಪಾಧ್ಯಕ್ಷರು ಸರಿತಾ ಜಿ. ದೂತ, ಸ್ಥಾಯಿ ಸಮಿತಿ ಚೇರ್ಮನ್ ರಾಜು ಎಸ್ ಬೆಂಬಳಗಿ, ಯೋಜನಾ ನಿರ್ದೇಶಕರು ಜಿ. ನ. ಕೋ ಬೆಳಗಾವಿ ಮಲ್ಲಿಕಾರ್ಜುನ ಕಲಾದಗಿ, ಕಾರ್ಯ ಪಾಲಕ ಅಭಿಯಂತರರು ಜಿ. ನ. ಕೋ ಬೆಳಗಾವಿ ವಿ ಎಸ್ ತಡಸಲೂರು, ಸಹಾಯಕ ಕಾರ್ಯ ಪಾಲಕ ಅಭಿಯಂತರರು ಜಿ. ನ. ಕೋ ಬೆಳಗಾವಿ ಎ.ಬಿ ರಜಪೂತ ಪುರಸಭೆ ಮುಖ್ಯಾಧಿಕಾರಿ ಈರಣ್ಣ ಕೆ ಗುಡದಾರಿ,
ಪುರಸಭೆ ಸದಸ್ಯರಾದ ರಾಘವೇಂದ್ರ ರಾ. ದೊಡಮನಿ, ನಾಗರಾಜ ಎಸ್.ಕಟ್ಟಿಮನಿ, ಸಂಗೀತಾ ಸಿ ರಾಯಬಾಗ, ಮಾಬುಸಾಬ ಗೌ ತೋರಗಲ್ಲ, ರಘುನಾಥ ಜಿ. ರೇಣಕೆ, ಸುನಿತಾ ಆರ್. ಬೀಳಗಿ, ರೇಶ್ಯಾಬಿ ಆರ್. ಮುದಕವಿ, ಶಂಕರಪ್ಪ ಮ. ಬೆನ್ನೂರ, ರಾಣಿ ಎಸ್. ಬೋಕರೆ, ಶಾರವ್ವ ಶಿ. ಶಿರಿಯಣ್ಣವರ, ಲಕ್ಷ್ಮೀಬಾಯಿ ಸಿ. ಹಂಚಾಟೆ
ಹುಸೇನಸಾಬ ಎಸ್. ಐನಾಪೂರ, ಸಲೀಮಾ ಇ. ಚೂರಿಖಾನ, ಲಕ್ಷ್ಮೀ ಪಿ. ಬರ್ಗೆ, ಪಾರ್ವತಿ ರ. ನಾಯಕ, ಪದ್ಮಾವತಿ ಎಸ್. ಶಿಲ್ಲಿಂಗಪ್ಪನವರ, ಮಂಜುನಾಥ ಎಸ್‌. ರಾವಳ, ರಾಜೇಶ್ವರಿ ಅ. ಮೆಟಗುಡ್ಡ, ಇಮಾಮಸಾಬ ಎಮ್. ಕಲಾದಗಿ, ದುರಗಪ್ಪ ಕೆ. ಬಂಡಿವಡ್ಡರ, ಶಾನೂರ ಇ. ಯಾದವಾಡ, ಶಂಕರಪ್ಪ ರೇ. ಸೊಳೆಬಾಂವಿ, ಪ್ರಲ್ಲಾದ ಎಮ್. ಬಡಿಗೇರ, ಗೀತಾ ಎಲ್‌. ದೊಡಮನಿ, ನಾಮ ನಿರ್ದೇಶಿತ ಸದ್ಯಸರು ಸುರೇಶ ಆರ್. ಫತ್ತೇಪೂರ ನವೀನ ಬ. ಗದಗ, ಚಿದಾನಂದ ಎಸ್. ದೊಡಮನಿ, ಗಾಯತ್ರಿ ದೇವಾಂಗಮಠ,ಎಮ್. ಎಚ್. ನದಾಫ, ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

ವರದಿ: ಮಂಜುನಾಥ ಕಲಾದಗಿ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ