ಕೊಲಂಬೋ: ಶ್ರೀಲಂಕಾ ಪ್ರವಾಸ ಕೈಗೊಂಡಿರುವ ಭಾರತ ಕ್ರಿಕೆಟ್ ತಂಡದ ಆಟಗಾರರ ಪೈಕಿ ಯಶಸ್ವಿ ಜೈಸ್ವಾಲ್ ಹಾಗೂ ಕೆ.ಎಲ್.ರಾಹುಲ್ ಸ್ಪಿನ್ ಬೌಲರುಗಳನ್ನು ಎದುರಿಸಲು ವಿಶೇಷ ಅಭ್ಯಾಸ ಮಾಡುತ್ತಿದ್ದಾರೆ.
ಶ್ರೀಲಂಕಾ ಪ್ರವಾಸದಲ್ಲಿ ಭಾರತಕ್ಕೆ ಸ್ಪಿನ್ನ ಬೌಲರುಗಳನ್ನು ಎದುರಿಸುವುದೇ ಕಷ್ಟಕರವಾಗಿದ್ದು, ಆ ಕಾರಣಕ್ಕೆ ಆರಂಭ ಬ್ಯಾಟುಗಾರರಾದ ಕೆ.ಎಲ್. ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ನೆಟ್ಸ್ನಲ್ಲಿ ಸ್ಪಿನ್ನ ಬೌಲರುಗಳನ್ನು ಹೆಚ್ಚಾಗಿ ಎದುರಿಸಿ ಅಭ್ಯಾಸ ಮಾಡುತ್ತಿದ್ದಾರೆ.
ಸ್ಪಿನ್ನ ಬೌಲರುಗಳಾದ ಹರ್ಷ ದುಬೈ ಹಾಗೂ ಕೋಟ್ಯಾನ್ ನೆಟ್ಸ್ನಲ್ಲಿ ಈ ಬ್ಯಾಟುಗಾರರಿಗೆ ಬೌಲ್ ಮಾಡುವ ಸಲುವಾಗಿ ಶ್ರೀಲಂಕಾಗೆ ತೆರಳಿದ್ದಾರೆ ಎಂದು ಕ್ರಿಕ್‌ಬಜ್ ಕ್ರಿಕೆಟ್ ಸುದ್ದಿ ಸಂಸ್ಥೆ ವರದಿ ಮಾಡಿದೆ.


