LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಚುಟುಕು ಕ್ರಿಕೆಟ್ ಸರಣಿ: ಕಾಂಗರೂಗಳಿಗೆ 5-0 ಕ್ಲೀನ್ ಸ್ವೀಪ್ ಗೌರವ

Advertisement
ಬಸ್ಸೇಟೆರ್ರೆ, ಸೆಂಟ್ ಕಿಟ್ಸ್ ( ವೆಸ್ಟ್ ಇಂಡೀಸ್): ಪ್ರವಾಸಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಐದು ಪಂದ್ಯಗಳ ಟ್ವೆಂಟಿ-20 ಸರಣಿಯನ್ನು 5-0 ರಿಂದ ಗೆದ್ದುಕೊಂಡು ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.

ಇಲ್ಲಿನ ವಾರ್ನರ್ ಪಾರ್ಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 19.4 ಓವರುಗಳಲ್ಲಿ 170 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಪ್ರತಿಯಾಗಿ ಆಡಿದ ಆಸ್ಟ್ರೇಲಿಯಾ 17 ಓವರುಗಳಲ್ಲೇ 7 ವಿಕೆಟ್ ಗಳ ನಷ್ಟಕ್ಕೆ 173 ರನ್ ಗಳಿಸಿ ಸುಲಭ ಗೆಲುವು ಪಡೆಯಿತು.



ಪಂದ್ಯದ ನಂತರ ಮಾತನಾಡಿದ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್  ಈ ಚುಟುಕು ಸರಣಿಯ ಆರಂಭದಲ್ಲಿ ನಾವು ಸರಣಿಯನ್ನು 5-0 ರಿಂದ ಗೆಲ್ಲುತ್ತೇವೆ ಎಂದು ನಂಬಿರಲಿಲ್ಲ. ನಿಜಕ್ಕೂ  ನಮ್ಮ ತಂಡದ ಆಟಗಾರರು ಉನ್ನತ ಮಟ್ಟದ ಕ್ರಿಕೆಟ್ ಆಡಿದರು ಎಂದರು.

ಯುವ ಪ್ರತಿಭೆಗಳಿಂದ ಕೂಡಿದ  ವೆಸ್ಟ್ ಇಂಡೀಸ್ ವಿಶೇಷವಾಗಿ ಬ್ಯಾಟಿಂಗ್ ವಿಭಾಗದಲ್ಲಿ ಉತ್ತಮವಾಗಿಯೇ ಆಡಿದೆ. ಆದರೆ ಉನ್ನತ ಮಟ್ಟದ ಕ್ರಿಕೆಟ್ ಆಡಲು ಆ ಆಟಗಾರರಲ್ಲಿ ಇನ್ನು ಅನುಭವದ ಕೊರತೆ ಎದ್ದು ಕಾಣುತ್ತಿದೆ  ಎಂಬುದು ಸರಣಿಯ ಫಲಿತಾಂಶದಿಂದ ಕಂಡು ಬಂತ್ತು.

ಸ್ಕೋರ್ ವಿವರ

ವೆಸ್ಟ್ ಇಂಡೀಸ್ 19.4 ಓವರುಗಳಲ್ಲಿ 170

ಶೆರಫೆನ್ ರೋದರಪೋರ್ಡ್ 35 ( 17 ಎಸೆತ, 6 ಬೌಂಡರಿ, 1 ಸಿಕ್ಸರ್), ಹೆಟ್ಮೆರ್ 52 ( 31 ಎಸೆತ, 3 ಬೌಂಡರಿ, 3 ಸಿಕ್ಸರ್)

ಡ್ವಾರ್ ಶ್ವೂಸ್  41 ಕ್ಕೆ 3,

ಆಸ್ಟ್ರೇಲಿಯಾ 17 ಓವರುಗಳಲ್ಲಿ 7 ವಿಕೆಟ್ ಗೆ 173

ಕ್ಯಾಮರೂನ್ ಗ್ರೀನ್ 32 ( 18 ಎಸೆತ, 5 ಬೌಂಡರಿ), ಟಿಮ್ ಡೆವಿಡ್ 30 ( 12 ಎಸೆತ, 1 ಬೌಂಡರಿ, 4 ಸಿಕ್ಸರ್)

ಮಿಚೆಲ್ ಓವೆನ್ 37 ( 17 ಎಸೆತ, 3 ಬೌಂಡರಿ, 3 ಸಿಕ್ಸರ್) ಅಲ್ಜಾರಿ ಜೋಸೆಫ್  21 ಕ್ಕೆ 2, ಜೇಸನ್ ಹೋಲ್ಡರ್ 36 ಕ್ಕೆ 2,  ಅಕಿಲ್ ಹುಸೇನ್ 17 ಕ್ಕೆ 3)

-------------------------------------------------ಪಂದ್ಯದ ಫಲಿತಾಂಶ: ಆಸ್ಟ್ರೇಲಿಯಾಗೆ 3 ವಿಕೆಟ್ ಗಳ ಜಯ

-------------------------------------------------ಆಸ್ಟ್ರೇಲಿಯಾಗೆ 5-0 ರಿಂದ ಸರಣಿಯ ಜಯ

------------------------------------------ಪಂದ್ಯ ಶ್ರೇಷ್ಠ: ಡ್ವಾರ್ ಶ್ವೂಸ್ , ಸರಣಿ ಶ್ರೇಷ್ಠ: ಕೆಮರೂನ್ ಗ್ರೀನ್ ಸರಣಿ ಶ್ರೇಷ್ಠ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ