Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜೈಲಿನಲ್ಲಿ ನಟ ದರ್ಶನ್ ಯೋಗಾಸನ : ಫೋಟೋ ವೈರಲ್ 

Advertisement

ಬೆಂಗಳೂರು : ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಇಂದು ನಡೆದ ಅಂತಾರಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ (Yoga day 2026) ನಟ ದರ್ಶನ್ (Actor Darshan) ಭಾಗಿಯಾಗಿದ್ದಾರೆ. 

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್‌ ಸಹ ಕೈದಿಗಳೊಂದಿಗೆ ಯೋಗಾಭ್ಯಾಸದಲ್ಲಿ ತೊಡಗಿಕೊಂಡರು.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಭಾನುವಾರ ಎಲ್ಲಾ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಎಲ್ಲಾ ಕೈದಿಗಳಿಂದ ಯೋಗಭ್ಯಾಸ ಮಾಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ನಟ ದರ್ಶನ್‌ ರಿಗೂ ಸಹ ಭಾಗವಹಿಸಲು ಸೂಚಿಸಲಾಗಿತ್ತು. 

ಬೆನ್ನು ನೋವಿನ ಸಮಸ್ಯೆ ಹೇಳಿ ಯೋಗ ದಿನಾಚರಣೆಯಲ್ಲಿ ಭಾಗಿಯಾಗಲು ನಟ ದರ್ಶನ್‌ ನಿರಾಕರಿಸಿದ್ದರು. 

ಈ ವೇಳೆ ಕಚೇರಿಗೆ ಕರೆಸಿಕೊಂಡ ಡಿಜಿ ಅಲೋಕ್ ಕುಮಾರ್ ಯೋಗ ಮಾಡಲು ಸಲಹೆ ನೀಡಿದ್ದರು. ಬೆನ್ನು ನೋವಿದ್ರೆ ಯೋಗ ಮಾಡಿದರೆ ಒಳ್ಳೆಯದು ಎಂದು ಕಿವಿಮಾತು ಹೇಳಿದ್ದರು.

ಬಳಿಕ ಜೈಲಿನ ಕಾರಿಡಾರ್ ನಲ್ಲಿ ನಟ ದರ್ಶನ್ ಮತ್ತು ರೇಣುಕಾಸ್ವಾಮಿ ಕೊಲೆಯ ಎಲ್ಲಾ ಆರೋಪಿಗಳೂ ಭಾಗಿಯಾದರು. ಸಾಮೂಹಿಕ ಯೋಗದಲ್ಲಿ ಎ1 ಆರೋಪಿ ಪವಿತ್ರಾ ಗೌಡ ಕೂಡಾ ಭಾಗಿಯಾಗಿದ್ದರು.

ಒಂದು ಗಂಟೆಯ ಕಾಲ ಯೋಗದಲ್ಲಿ ಭಾಗಿಯಾಗಿದ್ದ ದರ್ಶನ್‌ ಪ್ರಾಣಯಾಮ, ದೀರ್ಘದಂಡ ನಮಸ್ಕಾರ, ಶವಾಸನಗಳನ್ನು ಮಾಡಿದರು.

 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST