ಮುಂಬೈ: ದೇಶಾದ್ಯಂತ ಒಟ್ಟು ೨೨.೮ ಲಕ್ಷ ವಿದ್ಯಾರ್ಥಿಗಳು ಇಂದು ನಡೆಯಲಿರುವ ನೀಟ್(ಯುಜಿ) ಮೆಡಿಕಲ್ ಪ್ರವೇಶ ಮರು ಪರೀಕ್ಷೆ ಬರೆಯಲಿದ್ದಾರೆ.
ಈಗಾಗಲೇ ಈ ಪರೀಕ್ಷಾರ್ಥಿಗಳಿಗೆ ಹಾಲ್ ಟೀಕೆಟ್ ನೀಡಲಾಗಿದೆ. ರಾಷ್ಟಿçÃಯ ಪರೀಕ್ಷೆ ಮಂಡಳಿಯ ಅಂಕಿ ಸಂಖ್ಯೆಗಳ ಪ್ರಕಾರ ಸುಮಾರು ಶೇ. ೮೧ ರಷ್ಟು ಅಭ್ಯರ್ಥಿಗಳು ೧೭ ರಿಂದ ೨೦ ವರ್ಷ ವಯಸ್ಸಿನವರಾಗಿದ್ದಾರೆ.
ಇನ್ನು ಶೇ. ೧೭ ರಷ್ಟು ಅಭ್ಯರ್ಥಿಗಳು ೨೧ ರಿಂದ ೨೪ ವರ್ಷ ವಯಸ್ಸಿನವರಾಗಿದ್ದಾರೆ. ೩೫ ವರ್ಷಕ್ಕೂ ಮೇಲ್ಪಟ್ಟ ಅಭ್ಯರ್ಥಿಗಳು ಕೂಡ ಪರೀಕ್ಷೆ ಬರೆಯುತ್ತಿದ್ದು, ಇವರ ಸಂಖ್ಯೆ ೪,೧೩೩ ಆಗಿದೆ. ೧೩.೩ ಲಕ್ಷ ಮಹಿಳಾ ವಿದ್ಯಾರ್ಥಿಗಳು ಹಾಗೂ ೯.೫ ಲಕ್ಷ ಪುರುಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.


