ದಂಬುಲಾ: ಕ್ರಿಕೆಟ್‌ನಲ್ಲಿ ಎಲ್ಲ ದಾಖಲೆಗಳನ್ನು ಮುರಿಯಲೆಂದೇ ಹುಟ್ಟಿದ್ದಾರೆಯೇ ಈ ಸೂರ್ಯವಂಶಿ ಎನ್ನುವಷ್ಟರ ಮಟ್ಟಿಗೆ ೧೫ ವರ್ಷದ ಕ್ರಿಕೆಟಿಗ ಪ್ರಭಾವ ಬೀರಿದ್ದಾರೆ.
ಇಲ್ಲಿನ ದಂಬುಲಾ ಅಂತಾರಾಷ್ಟಿçÃಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ಭಾರತ ಎ, ಹಾಗೂ ಶ್ರೀಲಂಕಾ ಎ, ತಂಡಗಳ ನಡುವೆ ಎ, ತಂಡಗಳ ತ್ರಿಕೋನ ಕ್ರಿಕೆಟ್ ಸರಣಿಯ ಫೈನಲ್ ನಡೆಯುತ್ತಿದೆ. ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ ಎ, ಪರ ಇನ್ನಿಂಗ್ಸ್ ಆರಂಭಿಸಿರುವ ವೈಭವ್ ಸೂರ್ಯವಂಶಿ ಕೇವಲ ೧೧ ಎಸೆತಗಳಲ್ಲಿ ಅರ್ಧ ಶತಕ ಗಳಿಸಿದರು.
ತದನಂತರ ಇನ್ನೆನೂ ಅತಿ ವೇಗದ ಶತಕವನ್ನೂ ಪೂರೈಸುತ್ತಾರೆ ಎನ್ನುವಷ್ಟರಲ್ಲಿ ವೈಭವ್ ಸೂರ್ಯವಂಶಿ ೯೪ ರನ್‌ಗಳಿಸಿ ನಿರ್ಗಮಿಸಿ ಮತ್ತೊಂದು ದಾಖಲೆಯ ಹೊಸ್ತಿಲಲ್ಲಿ ಎಡವಿದರು.
ವೈಭವ್ ಸೂರ್ಯವಂಶಿ ಕೇವಲ ೨೯ ಎಸೆತಗಳಲ್ಲಿ ೧೦ ಬೌಂಡರಿ, ೮ ಸಿಕ್ಸರ್ ನೆರವಿನಿಂದ ೯೪ ರನ್‌ಗಳಿಸಿದರು.


