Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

14,000 ಅಡಿ ಎತ್ತರದಲ್ಲಿ ಐಟಿಬಿಪಿ ಯೋಧರ ಯೋಗಾಸನ 

Advertisement

ಕೊಲ್ಕತ್ತಾ: ವಿಶ್ವದಾದ್ಯಂತ 12ನೇ ವರ್ಷದ ಅಂತರರಾಷ್ಟ್ರೀಯ ಯೋಗ (Yoga) ದಿನದ ಸಂಭ್ರಮ ಮನೆಮಾಡಿದೆ.

 ಪ್ರಧಾನಿ ನರೇಂದ್ರ ಮೋದಿ (Pm Modi) ಅವರು ಪಶ್ಚಿಮ ಬಂಗಾಳದ ಕೋಲ್ಕತ್ತಾದ (Kolkatta) ರೆಡ್ ರೋಡ್ ಮೈದಾನದಿಂದ ಯೋಗ ದಿನಾಚರಣೆಯ ನೇತೃತ್ವ ವಹಿಸಿ ದೇಶಬಾಂಧವರೊಂದಿಗೆ ಯೋಗಾಭ್ಯಾಸ ನಡೆಸಿದ್ದಾರೆ.

ಈ ವರ್ಷದ ಯೋಗ ದಿನಾಚರಣೆಯನ್ನು 'ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ' (Yoga for Healthy Ageing) ಎಂಬ ವಿಶೇಷ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದ್ದು, ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಯಲ್ಲಿ ಯೋಗದ ಮಹತ್ವವನ್ನು ಸಾರಲಾಗುತ್ತಿದೆ.

ಯೋಗ ದಿನದ ಅಂಗವಾಗಿ ದೇಶದ ಗಡಿ ಕಾಯುವ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಯೋಧರು ಲಡಾಖ್‌ನ ಲೇಹ್‌ನಲ್ಲಿ ಅತಿ ಎತ್ತರದ ಪ್ರದೇಶದಲ್ಲಿ ಯೋಗ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ.

ಸುಮಾರು 14,000 ಅಡಿ ಎತ್ತರದಲ್ಲಿರುವ ಪಾಂಗಾಂಗ್ ತ್ಸೋ ಸರೋವರದ ತಟದಲ್ಲಿರುವ ಧನ್ ಸಿಂಗ್ ಥಾಪಾ ಮತ್ತು ಚಾರ್ಟ್ಸೆ ಗಡಿ ಚೌಕಿಗಳಲ್ಲಿ ಐಟಿಬಿಪಿಯ 47ನೇ ಬೆಟಾಲಿಯನ್ ಯೋಧರು ಅತ್ಯಂತ ಉತ್ಸಾಹದಿಂದ ವಿವಿಧ ಆಸನಗಳನ್ನು ಪ್ರದರ್ಶಿಸಿದ್ದು, ಇದಕ್ಕೆ ಸಂಬಂಧಿಸಿದ ಮನಮೋಹಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇತ್ತ ಕೋಲ್ಕತ್ತಾದ ಪ್ರಸಿದ್ಧ ಹೌರಾ ಸೇತುವೆಯ ಹಿನ್ನೆಲೆಯಲ್ಲಿ ಗಂಗಾ ನದಿಯ ವಿವಾಡಾ ಕ್ರೂಸ್‌ನಲ್ಲಿಯೂ ವಿಶೇಷ ಯೋಗ ದಿನದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಯೋಗ ದಿನಾಚರಣೆಯ ಪ್ರಯುಕ್ತ ಬೃಹತ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜಾಗತಿಕವಾಗಿ ಯೋಗ ದಿನದ ಭಾಗವಹಿಸುವಿಕೆ ದುಪ್ಪಟ್ಟಾಗಿದೆ.

ಯೋಗ ದಿನವು ಈಗ ಜಗತ್ತಿನ ಅತಿ ದೊಡ್ಡ ಹಬ್ಬವಾಗಿ ಮಾರ್ಪಟ್ಟಿದ್ದು, ವಿಶ್ವದ ಮೂಲೆ ಮೂಲೆಗಳಿಂದ ಯೋಗದ ಸುಂದರ ದೃಶ್ಯಗಳು ಮೂಡಿಬರುತ್ತಿವೆ ಎಂದರು.

ಜೂನ್ 21 ವರ್ಷದ ಸುದೀರ್ಘ ದಿನವಾಗಿದ್ದು, ಅಂತರರಾಷ್ಟ್ರೀಯ ಯೋಗ ದಿನದಿಂದಾಗಿ ಈ ದಿನಕ್ಕೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ದೊಡ್ಡ ಒಕ್ಕೂಟ ಆಚರಣೆಯ ಹೆಗ್ಗುರುತು ಸಿಕ್ಕಿದೆ ಎಂದು ಪ್ರಧಾನಿ ಬಣ್ಣಿಸಿದರು.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಮಂಡಿಸಿದ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕ ನಂತರ, 2015 ರಲ್ಲಿ ಮೊದಲ ಬಾರಿಗೆ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗಿತ್ತು.

 ಅಂದಿನಿಂದ ಇಂದಿನವರೆಗೆ ಪ್ರತಿ ವರ್ಷವೂ ಪ್ರಧಾನಿ ಮೋದಿ ಅವರು ದೇಶ ಹಾಗೂ ವಿದೇಶಗಳ ವಿವಿಧ ಐತಿಹಾಸಿಕ ಸ್ಥಳಗಳಿಂದ ಈ ಆಚರಣೆಯ ನೇತೃತ್ವ ವಹಿಸುತ್ತಾ ಬಂದಿದ್ದಾರೆ.

ಸದ್ಯ ವಿಶ್ವದಾದ್ಯಂತ ಸುಮಾರು 2,500 ಕ್ಕೂ ಹೆಚ್ಚು ಸ್ಥಳಗಳಲ್ಲಿ ಹಾಗೂ 210 ಕ್ಕೂ ಅಧಿಕ ಭಾರತೀಯ ರಾಯಭಾರ ಕಚೇರಿಗಳ ನೇತೃತ್ವದಲ್ಲಿ ಯೋಗ ದಿನಾಚರಣೆಯನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿದೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST