ಲಕ್ನೋ: ಭಾರತ ಹಾಗೂ ಅಪಘಾನಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯ ಇಂದು ನಡೆಯಲಿದ್ದು, ಭಾರತ ಇಂದೇ ಸರಣಿ ಗೆಲ್ಲುವದರತ್ತ ಗಮನ ಹರಿಸಿ ಕಣಕ್ಕೆ ಇಳಿಯಲಿದೆ.
ಇಲ್ಲಿನ ಭಾರತ ರತ್ನ ಶ್ರೀ ಆಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಪಂದ್ಯ ಮಧ್ಯಾಹ್ನ ೧:೩೦ ಕ್ಕೆ ಆರಂಭವಾಗಲಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯವನ್ನು ಸುಲಭವಾಗಿ ಗೆದ್ದಿರುವ ಭಾರತ ಇಂದು ಆತ್ಮವಿಶ್ವಾಸದಿಂದಲೇ ಕಣಕ್ಕೆ ಇಳಿಯುತ್ತಿದೆ.
ಮೊದಲ ಪಂದ್ಯ ಮಳೆಯ ಕಾರಣ ೨೫ ಓವರ್‌ಗೆ ಸೀಮಿತಗೊಂಡಿತ್ತು. ಇಂದು ಪೂರ್ಣ ೫೦ ಓವರುಗಳ ಆಟ ನಡೆದರೆ ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ಉತ್ತಮ ಅಭ್ಯಾಸ ದೊರಕುವ ನಿರೀಕ್ಷೆ ಇದೆ. ಅಪಘಾನಿಸ್ತಾನ್ ತಂಡವು ಮೊದಲ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಉತ್ತಮ ಸಾಧನೆ ತೋರಿತ್ತು.


