ಈಚೆಗೆ ಮುಗಿದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೆಲವು ಕ್ರಿಕೆಟಿಗರು ವಯಸ್ಸು ಕೇವಲ ನಂಬರ್ ಅಷ್ಟೇ, ಆಟದ ಪ್ರದರ್ಶನದ ಮೇಲೆ ಯಾವುದೇ ವ್ಯತ್ಯಾಸ ಮಾಡುವುದಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ.
ಕಿಂಗ್ ಕೊಹ್ಲಿ ಹಾಗೂ ೧೫ ವರ್ಷದ ವೈಭವ್ ಸೂರ್ಯವಂಶಿ ಈ ಹಲವು ಕ್ರಿಕೆಟಿಗರಲ್ಲಿ ಪ್ರಮುಖರು. ವೈಭವ್ ಸೂರ್ಯವಂಶಿ ಅವರಿಗೆ ಕೇವಲ ೧೫ ವರ್ಷ. ಅವರ ಸಾಧನೆ ಮಾತ್ರ ಕ್ರಿಕೆಟ್ ಜಗತ್ತೇ ಮೆಚ್ಚುವಂತಹದ್ದು.
ವಿರಾಟ್ ಕೊಹ್ಲಿ ೩೫ ವರ್ಷಕ್ಕೂ ವಯಸ್ಸಿನ ಹಿರಿಯ ಆಟಗಾರ. ಆದರೆ ಅವರು ಐಪಿಎಲ್‌ನಲ್ಲಿ ತೋರಿದ ಸಾಧನೆ ಮಾತ್ರ ೨೦ ರ ಹುಡುಗನಂತಿತ್ತು. ವೈಭವ್ ಸೂರ್ಯವಂಶಿ ೧೫ ರ ಎಳೆಯ ಕ್ರಿಕೆಟಿಗನಾಗಿದ್ದರೂ ಅವರು ತೋರಿದ ಸಾಧನೆ ೨೪-೨೫ ರ ಹುಡುಗನನ್ನು ನಾಚಿಸುವಂತಿತ್ತು. ಇನ್ನು ಭುವನೇಶ್ವರ ಕುಮಾರ್, ಜೋಶ್ ಹೆಜಲವುಡ್ ಹಾಗೂ ಕೃನಾಲ ಪಾಂಡ್ಯಾ ಎಲ್ಲರೂ ೩೫ ವರ್ಷ ಮೀರಿದ ಕ್ರಿಕೆಟಿಗರು ಇವರ ಪ್ರದರ್ಶನ ಕೂಡ ಐಪಿಎಲ್‌ನಲ್ಲಿ ಎಷ್ಟು ಪರಿಣಾಮಕಾರಿಯಾಗಿತ್ತು ಎಂಬುದನ್ನು ನೀವೇ ನೋಡಿದ್ದೀರಿ.

