LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಲೈಂಗಿಕ ಕಿರುಕುಳ ಆರೋಪ : ಶಾಲಾ ಸ್ನೇಹಿತನೊಂದಿಗೆ ವ್ಯಕ್ತಿಯ ಹತ್ಯೆಗೈದ ಮಹಿಳೆ 

Advertisement

ಬೆಳಗಾವಿ: ಲೈಂಗಿಕ ಕಿರುಕುಳದಿಂದ ಬೇಸತ್ತ ಮಹಿಳೆಯೊಬ್ಬಳು ತನ್ನ ಶಾಲಾ ಸ್ನೇಹಿತನೊಂದಿಗೆ ಸೇರಿ ಕಾಟ ನೀಡುತ್ತಿದ್ದ ವ್ಯಕ್ತಿಯನ್ನು ಭೀಕರವಾಗಿ ಹತ್ಯೆ ಮಾಡಿರುವ (Crime) ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ನಡೆದಿದೆ.

ಕಿರುಕುಳವೇ ಕೊಲೆಗೆ ಅಂತಿಮ ಕಾರಣ

ಬಳ್ಳಿಗೇರಿ ನಿವಾಸಿ ರಣವೀರ ರಜಪೂತ ಎಂಬಾತ, ಸ್ಥಳೀಯ ಮಹಿಳೆ ಶ್ರೀದೇವಿ ರಜಪೂತ ಎಂಬಾಕೆಗೆ ಸತತವಾಗಿ ಲೈಂಗಿಕ ಕಿರುಕುಳ ನೀಡುತ್ತಾ ಮಾನಸಿಕ ಹಿಂಸೆ ನೀಡುತ್ತಿದ್ದನು ಎನ್ನಲಾಗಿದೆ. 

ಈ ಕಿರುಕುಳದಿಂದ ಬೇಸತ್ತ ಮಹಿಳೆ, ಹೇಗಾದರೂ ಮಾಡಿ ಈ ಕಾಟದಿಂದ ಮುಕ್ತಿ ಪಡೆಯಲು ನಿರ್ಧರಿಸಿದ್ದಾಳೆ.

 ಕೊನೆಗೆ ತನ್ನ ಶಾಲೆಯ ದಿನಗಳ ಗೆಳೆಯನಾದ ಬೈರು ಪವಾರ್ ಬಳಿ ತನ್ನ ಅಳಲು ತೋಡಿಕೊಂಡಿದ್ದು, ಇಬ್ಬರೂ ಸೇರಿ ರಣವೀರನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾರೆ.

ಬೈಕ್ ರಿಪೇರಿ ನೆಪದಲ್ಲಿ ಕರೆಸಿ ಸಂಚು

ಪ್ಲಾನ್ ಪ್ರಕಾರ, ಸೆಪ್ಟೆಂಬರ್ 21ರ ರಾತ್ರಿ ಬೈರು ಪವಾರ್, ರಣವೀರನಿಗೆ ಕರೆ ಮಾಡಿ ತನ್ನ ಬೈಕ್ ಕೆಟ್ಟು ನಿಂತಿದೆ ಎಂದು ನಂಬಿಸಿ ಏಕಾಂತ ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಇದನ್ನು ನಂಬಿ ಸ್ಥಳಕ್ಕೆ ತೆರಳಿದ ರಣವೀರನ ಕುತ್ತಿಗೆ ಹಿಸುಕಿ ಪ್ರಾಣ ತೆಗೆದಿದ್ದಾರೆ. 

ಕೃತ್ಯ ಮುಗಿದ ಕೂಡಲೇ ಬೈರು ನೇರವಾಗಿ ಶ್ರೀದೇವಿಗೆ ಫೋನ್ ಮಾಡಿ ಕೆಲಸ ಮುಗಿದಿದ್ದರ ಬಗ್ಗೆ ಮಾಹಿತಿ ನೀಡಿದ್ದನು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಈ ರೋಚಕ ಕೊಲೆ ಪ್ರಕರಣದ ಜಾಡು ಹಿಡಿದು ಹೊರಟ ಅಥಣಿ ಠಾಣೆಯ ಪೊಲೀಸರು, ವೈಜ್ಞಾನಿಕ ತನಿಖೆ ಹಾಗೂ ಮಾಹಿತಿ ಕಲೆಹಾಕಿ ಕೊಲೆಗಡುಕರಾದ ಶ್ರೀದೇವಿ ರಜಪೂತ ಮತ್ತು ಬೈರು ಪವಾರ್ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ತನಿಖೆಯನ್ನು ತೀವ್ರಗೊಳಿಸಿದ್ದು ಮುಂದಿನ ಕಾನೂನು ಕ್ರಮ ಜರುಗಿಸುತ್ತಿದ್ದಾರೆ.ಈ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯ:ಗೆಲುವಿನತ್ತ ಭಾರತಮತ್ತೆ 50 ತಾಲೂಕುಗಳು ಬರ ಪೀಡಿತ ಎಂದು ಘೋಷಣೆ : ಡಾ.ಜಿ.ಪರಮೇಶ್ವರ್ ಲೈಂಗಿಕ ಕಿರುಕುಳ ಆರೋಪ : ಶಾಲಾ ಸ್ನೇಹಿತನೊಂದಿಗೆ ವ್ಯಕ್ತಿಯ ಹತ್ಯೆಗೈದ ಮಹಿಳೆ ಪತ್ನಿಯ ಅಕ್ರಮ ಸಂಬಂಧ :ಲೈವ್ ವೀಡಿಯೋದಲ್ಲೇ ವಿಷ ಸೇವಿಸಿ ಪತಿ ಆತ್ಮಹತ್ಯೆಉತ್ತರ ಪತ್ರಿಕೆಯಲ್ಲಿ 'ಜಯ ಶ್ರೀರಾಮ' ಬರಹ : ಮುಖ್ಯ ಪರೀಕ್ಷೆಯಿಂದ ಅಭ್ಯರ್ಥಿ ರದ್ದುಅ.1ರಿಂದಲೇ ಹಾಲಿನ ದರ 10 ರೂಪಾಯಿ ಏರಿಕೆ ಸಾಧ್ಯತೆ'EVM' ತಂದಿದ್ದು ನಿಮ್ಮಪ್ಪ, ನಿಮ್ಮಪ್ಪನ ಹೆಸರೇ ಮರೆತೋಯ್ತಾ? : ಆರ್.ಅಶೋಕ್ ಮೆಚ್ಚಿನ ಶಿಕ್ಷಕನಿಗೆ ಮಕ್ಕಳ ಕಣ್ಣೀರಿನ ವಿದಾಯ: ಶಾಲಾ ಆವರಣದಲ್ಲಿ ಪಾರ್ಥಿವ ಶರೀರಕ್ಕೆ ಪುಷ್ಪವೃಷ್ಠಿಬಾದಾಮಿ ಪೊಲೀಸರ ಕಾರ್ಯಾಚರಣೆ : ಕಳ್ಳತನದ 19 ಮೊಬೈಲ್‌ಗಳ ವಶ, ಇಬ್ಬರು ಆರೋಪಿಗಳ ಬಂಧನಜೀವಂತವಾಗಿದ್ದರೂ ದಾಖಲೆಯಲ್ಲಿ ಮೃತನಾದ ವ್ಯಕ್ತಿ: ಅಧಿಕಾರಿಗಳ ಯಡವಟ್ಟಿಗೆ ವ್ಯಕ್ತಿ ಕಂಗಾಲು