LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
International News

ಇರಾನ್‌ನಲ್ಲಿ 19 ವರ್ಷದ ಗರ್ಭಿಣಿ ಮಗಳ ಮರ್ಯಾದೆ ಹತ್ಯೆ

Advertisement

ಇರಾನ್,: ಇರಾನ್‌ನಲ್ಲಿ 19 ವರ್ಷದ ಗರ್ಭಿಣಿ ಮಗಳನ್ನು ಆಕೆಯ ಪೋಷಕರೇ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಯುವಕನೊಂದಿಗಿನ ಸಂಬಂಧದ ಬಗ್ಗೆ ತಿಳಿದ ನಂತರ ಕುಟುಂಬದವರು ಆಕೆಯ ಮೇಲೆ ಹಲ್ಲೆ ನಡೆಸಿ, ಮಾತ್ರೆಗಳನ್ನು ಬಲವಂತವಾಗಿ ನುಂಗಿಸಿ, ಬಳಿಕ ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ದಾರೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಆರೋಪಿಸಿವೆ.ಈ ಘಟನೆಯನ್ನು 'ಮರ್ಯಾದಾ ಹತ್ಯೆ' ಎಂದು ಕರೆಯಲಾಗಿದೆ.

ಏನಿದು ಘಟನೆ?

ಹೆಲಿಯಾ ಫತ್ತಾಹಿ ಎಂಬ 19 ವರ್ಷದ ಯುವತಿ ಎರಡು ತಿಂಗಳ ಗರ್ಭಿಣಿಯಾಗಿದ್ದಳು. ಯುವಕನೊಂದಿಗಿನ ತನ್ನ ಸಂಬಂಧದ ಬಗ್ಗೆ ಆಕೆ ಕಳೆದ ವಾರ ಕುಟುಂಬದವರಿಗೆ ತಿಳಿಸಿದ್ದಳು. ಇದರಿಂದ ಕೋಪಗೊಂಡ ಪೋಷಕರು ಆಕೆಯ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.

ನವೆಂಬರ್ 21ರಂದು ಪೋಷಕರು ನ್ಯಾಯಾಲಯಕ್ಕೆ ತೆರಳಿ ಮಗಳ ವಿರುದ್ಧ ದೂರು ದಾಖಲಿಸಲು ಪ್ರಯತ್ನಿಸಿದ್ದರು. ಮನೆಗೆ ಹಿಂದಿರುಗಿದ ಬಳಿಕ ಆಕೆಗೆ ಸುಮಾರು 30 ಮಾತ್ರೆಗಳನ್ನು ಬಲವಂತವಾಗಿ ನುಂಗಿಸಿದ್ದಾರೆ.

ಇದರಿಂದಲೂ ಆಕೆ ಮೃತಪಟ್ಟಿಲ್ಲ ಎಂದು ತಿಳಿದಾಗ ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ದಾರೆ ಎಂದು ಹೆಂಗಾವ್ ಮಾನವ ಹಕ್ಕುಗಳ ಸಂಘಟನೆ ತಿಳಿಸಿದೆ.

ಹತ್ಯೆ ಆರೋಪದ ಮೇಲೆ ತಂದೆ ವೊರಿಯಾ ಫತ್ತಾಹಿ ಮತ್ತು ತಾಯಿ ಲೀಲಾ ವೀಸ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ವಿಚಾರಣೆ ವೇಳೆ ಇಬ್ಬರೂ ತಮ್ಮ ಮಗಳ ಸಾವಿಗೆ ತಾವೇ ಕಾರಣ ಎಂದು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.ಪೋಷಕರೇ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ

ಇರಾನ್‌ನ ಪೊಲೀಸ್ ಅಧಿಕಾರಿಗಳ ಪ್ರಕಾರ, ಮನೆಯೊಂದರಲ್ಲಿ ಅನುಮಾನಾಸ್ಪದ ಸಾವು ಸಂಭವಿಸಿರುವ ಬಗ್ಗೆ ಮಾಹಿತಿ ಬಂದಿತ್ತು. ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸಿದಾಗ ಹತ್ಯೆ ನಡೆದಿರುವುದು ತಿಳಿದುಬಂದಿದೆ. 

ಬಳಿಕ ಯುವತಿಯ ಪೋಷಕರನ್ನು ಬಂಧಿಸಿ, ಪ್ರಕರಣವನ್ನು ನ್ಯಾಯಾಂಗ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ ಎಂದು ಇರಾನ್‌ವೈರ್ ವರದಿ ಮಾಡಿದೆ. ಆದರೆ, ಹತ್ಯೆ ನಡೆದ ರೀತಿ ಮತ್ತು ಗರ್ಭಿಣಿಯಾಗಿದ್ದ ವಿಚಾರವನ್ನು ಪೊಲೀಸರು ಅಧಿಕೃತವಾಗಿ ದೃಢಪಡಿಸಿಲ್ಲ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ವಿನಯ್ ಕುಲಕರ್ಣಿ ಜಾಮೀನು ರದ್ದು 2 ವಾರದೊಳಗೆ ಶರಣಾಗಲು ಸುಪ್ರೀಂಕೋರ್ಟ್ಇರಾನ್‌ನಲ್ಲಿ 19 ವರ್ಷದ ಗರ್ಭಿಣಿ ಮಗಳ ಮರ್ಯಾದೆ ಹತ್ಯೆ ದೊಡವಾಡ ಗ್ರಾಮ ಪಂಚಾಯತಿಯಲ್ಲಿ VGPP ಗ್ರಾಮ ಸಭೆ ಯಶಸ್ವಿ.ರೈತರ ಜಮೀನಿಗೆ ಅರಣ್ಯ ಇಲಾಖೆ ಬೇಲಿ! ಜಮೀನಿನಲ್ಲೇ ರೈತರ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ ನೇತೃತ್ವದಲ್ಲಿ  ಬೃಹತ್ ಪ್ರತಿಭಟನೆ!ಇಂಗ್ಲೆಂಡ್ ಗೆ 8 ವಿಕೆಟ್ ಗಳ ಸುಲಭ ಗೆಲುವು ದ. ಆಪ್ರಿಕಾ ತಂಡಕ್ಕೆ ಮೊದಲ ಇನ್ನಿಂಗ್ಸ್ ನ ದೊಡ್ಡ ಮುನ್ನಡೆ ಹೈಕೋರ್ಟ್‌ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಎಂ.ಎಸ್. ರಾಮಚಂದ್ರ ರಾವ್ ನೇಮಕಕ್ಕೆ ಶಿಫಾರಸುಕೆಲಸ ಕೊಡಿಸಿ, 50 ಸಾವಿರ ಪಡೆಯಿರಿ : ಯುವಕನ ವಿಭಿನ್ನ ಆಫರ್ ವೈರಲ್! ವಿನಯ್ ಕುಲಕರ್ಣಿಗೆ ಜೈಲಾ..? ಬೇಲಾ..? : ಇಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟ250 ರನ್ ಗಳ ಗುರಿಯನ್ನು 14.2 ಓವರ್ ಗಳಲ್ಲೇ ತಲುಪಿದ ಭಾರತ ರೈಸಿಂಗ್ ಸ್ಟಾರ್ ತಂಡ