Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಳೆಯ ವಿದ್ಯಾರ್ಥಿಗಳ  ಗುರುವಂದನಾ ಸಮಾರಂಭ 

Advertisement

ಬೈಲಹೊಂಗಲ :ಮಕ್ಕಳಿಗೆ ಶಿಕ್ಷಣ ನೀಡುವ ಮಹತ್ಕಾರ್ಯವನ್ನು ಭಕ್ತಿಯಿಂದ ಮಾಡುವ ಮೂಲಕ ನಾಡಿನ ಭವಿಷ್ಯವನ್ನು ಗಟ್ಟಿಗೊಳಿಸುತ್ತಿರುವ
ಶಿಕ್ಷಕರ ಸೇವೆ ಸದಾ ಸ್ಮರಣೀಯ ಎಂದು ನಿವೃತ್ತ ಹಿರಿಯ ಶಿಕ್ಷಕ ಜಗದೇವಯ್ಯ ವಿ.ಕೊರಿಕೊಪ್ಪ ಹಿರೇಮಠ ಹೇಳಿದರು.

ಸಮೀಪದ ತಿರುಳ್ಗನ್ನಡ ನಾಡು ಒಕ್ಕುಂದ ಗ್ರಾಮದ ಸಂಘಟಿಕೊಪ್ಪ ಬಸವೇಶ್ವರ ದೇವಸ್ಥಾನದಲ್ಲಿ ರವಿವಾರ 2001 ರಿಂದ 2006 ನೇ ಸಾಲಿನ ಪ್ರಾಥಮಿಕ, ಪ್ರೌಢಶಾಲೆ, ಪಿಯುಸಿ ಹಾಗೂ ಜೆಒಡಿಸಿ ವಿದ್ಯಾಥರ್ಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ವಿನಯಶೀಲತೆಯಿಂದ ಕಲಿತು 25 ವರ್ಷಗಳ ನಂತರ ಹಳೆಯ ವಿದ್ಯಾಥರ್ಿಗಳೆಲ್ಲ ಸೇರಿ ಗುರುವಂದನೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶಿಕ್ಷಕ ಬಳಗದಲ್ಲಿ ವಿದ್ಯಾಥರ್ಿಗಳ ಬಗ್ಗೆ ಅಭಿಮಾನವನ್ನು ಹೆಚ್ಚಿಸುವ ಮೂಲಕ ಇತರರಿಗೂ ಮಾದರಿಯಾಗಿದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಈಶ್ವರ ಹೋಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾಥರ್ಿಗಳಿಗೆ ಸರಳ ವಿಧಾನಗಳ ಮೂಲಕ ಕಲಿಸುವುದರ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಸೇವಾ ಮನೋಭಾವನೆ ಜತೆಗೆ ಭಕ್ತಿಯಿಂದ ಮಾಡಿದ ಪ್ರತಿಯೊಂದು ಕಾರ್ಯ ಸಾರ್ಥಕತೆ ಪಡೆಯುತ್ತದೆ ಎಂದರು. 
news_1780385322_0_646.webp

 

ಕಲಾವಿದ ಸಿ.ಕೆ.ಮೆಕ್ಕೇದ ಮುಖ್ಯ ಅತಿಥಿಯಾಗಿ ಮಾತನಾಡಿ, ತಪ್ಪುಗಳನ್ನು ತಿದ್ದಿ, ಬುದ್ದಿ ಹೇಳಿ ಬದುಕಿಗೆ ದಾರಿ ತೋರಿದ ಗುರುಗಳನ್ನು ಗೌರವಿಸುತ್ತಿರುವುದು ವಿದ್ಯಾಥರ್ಿಗಳ ಸಂಸ್ಕಾರಕ್ಕೆ ಸಾಕ್ಷಿಯಾಗಿದೆ ಎಂದರು.
ರಾಜ್ಯ ಸರಕಾರದ ಮುಜರಾಯಿ ಇಲಾಖೆಯ ಸದಸ್ಯ ಡಾ.ಮಹಾಂತಯ್ಯ ಆರಾದ್ರಿಮಠ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. 

ಈ ಸಂದರ್ಭದಲ್ಲಿ ಪ್ರಾಥಮಿಕ, ಪ್ರೌಢಶಾಲೆ, ಪಿಯುಸಿ ಹಾಗೂ ಜೆಒಡಿಸಿ ವಿಭಾಗದಲ್ಲಿ ಸೇವೆ ಸಲ್ಲಿಸಿದ ಶಿಕ್ಷಕ ಬಳಗವನ್ನು ಆದರದಿಂದ ಸನ್ಮಾನಿಸಿ, ನಮಸ್ಕರಿಸಿ ಗುರುವಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ವಿಭಾಗದ ಶಿಕ್ಷಕರಾದ ವ್ಹಿ.ಎಂ.ಹಣಬರಟ್ಟಿ, ಆರ್.ಕೆ.ಮೂಲಿಮನಿ, ಎಸ್.ಐ.ಮಿರ್ಜನ್ನವರ, ಎಸ್.ಐ.ಹೊಸಮನಿ, ಎನ್.ಎಫ್.ಹೊಳಿ, ಎಸ್.ಬಿ.ಯಕ್ಕುಂಡಿ, ಆರ್.ಬಿ.ಮಾಲಿನಮನಿ, ಜಿ.ವೈ.ಬಾಗಲೆ, ವ್ಹಿ.ಸಿ.ಮುರಗೋಡ, ಹೊನ್ನಳ್ಳಿ, ಆರ್.ಸಿ.ಚಿನ್ನಯ್ಯನವರ, ಕುಂದನಾಯ್ಕ, ಎಸ್.ಪಿ.ಬೆಟಗೇರಿ, ಬೋಳತ್ತಿನ, ಎಫ್.ವ್ಹಿ.ಪತ್ತಾರ, ಹರಗೋಲಿ, ಬಿ.ಬಿ.ಶಿಂಧೆ, ಪ್ರೌಢಶಾಲಾ ಶಿಕ್ಷಕರಾದ ಆರ್.ಆರ್.ಕೊನ್ನೂರ, ಎನ್.ಯು.ಶರಣಪ್ಪನವರ, ಎಸ್.ಬಿ.ಸಂಕಣ್ಣವರ, ಆರ್.ಎಸ್.ಕೋರಿಕೊಪ್ಪಮಠ, ಎಸ್.ಸಿ.ದಂಡಾವತಿಮಠ, ಬಿ.ವಿ.ಪೊಲೀಸ್ಪಾಟೀಲ, ಎಂ.ಸಿ.ಅಗಸಗಿ, ಎ.ಜಿ.ಚಿತ್ರಗಾರ, ಎಂ.ವೈ.ರಾವಳ, ಪಿ.ಜಿ.ಖೋತ, ಎ.ಎಸ್.ಪತ್ತಾರ, ಹೆಚ್.ಸಂಕಣ್ಣವರ, ಎಂ.ಆರ್.ಹುತಮಲ್ಲನ್ನವರ, ಜೆ.ಬಿ.ಕಬ್ಬೆರಹಳ್ಳಿ, ಪಿ.ಬಿ.ಕುತ್ತೆ, ಆರ್.ಎಸ್.ಚವ್ಹಾಣ, ಎ.ಎಸ್.ಮೇಲಿನಮನಿ, ರೂಪೇಶ ಕಾಂಬಳೆ, ಕಾಲೇಜು ವಿಭಾಗದ ಉಪನ್ಯಾಸಕರಾದ ಸಿ.ಬಿ.ಭೂತಿ, ಕಟ್ಟಿ, ಎಂ.ಬಿ.ಹುಕ್ಕೇರಿಕರ, ಎಸ್.ಬಿ.ನಲವಡೆ, ಆರ್.ಕೆ.ಪಾಟೀಲ, ಎಸ್.ಪಿ.ಮಣ್ಣೂರಮಠ, ವ್ಹಿ.ಎಸ್.ರಾವಳ, ಬಿ.ಎಫ್.ಬುಡರಕಟ್ಟಿ ಉಪಸ್ಥಿತರಿದ್ದರು. ಇದೇ ವೇಳೆ ಅಗಲಿದ ಶಿಕ್ಷಕರಿಗೆ ಹಾಗೂ ಹಳೆಯ ವಿದ್ಯಾಥರ್ಿಗಳ ನೆನೆದು, ಮೌನಾಚರಣೆ ಮಾಡಿ ಸ್ಮರಿಸಿದರು. ಪ್ರಾರ್ಥನೆ, ನಾಡಗೀತೆ ಹಾಗೂ ರಾಷ್ಟ್ರಗೀತೆ ಹಾಡುವ ಮೂಲಕ ಶಾಲಾ ದಿನಗಳನ್ನು ನೆನಪಿಸಿಕೊಂಡು ಹರ್ಷ ವ್ಯಕ್ತಪಡಿಸಿದರು. ಗಂಗಮ್ಮ ಗಣಾಚಾರಿ ಸ್ವಾಗತಿಸಿದರು. ವಿಜಯಲಕ್ಷ್ಮೀ ಫಕ್ಕೀರನವರ ನಿರೂಪಿಸಿದರು. 

ವರದಿ : ದುಂಡಪ್ಪ ಹೂಲಿ  

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಖಾನಾಪುರದಲ್ಲಿ ಕಂಟ್ರಿ ಪಿಸ್ತೂಲ್ ತಯಾರಿಕೆ : 13 ಆರೋಪಿಗಳು ಅರೆಸ್ಟ್ BIG NEWS : ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಅಣ್ಣಾಮಲೈ ರಾಜೀನಾಮೆ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ ಟೌನ್ ಹಾಗೂ ಮಹಾರಾಷ್ಟ್ರ ಮಂಡಲ ವತಿಯಿಂದ ಟೇಬಲ್ ಟೆನಿಸ್ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಹಳೆಯ ವಿದ್ಯಾರ್ಥಿಗಳ  ಗುರುವಂದನಾ ಸಮಾರಂಭ ಕೈಕಾಲು ಕತ್ತರಿಸುವ ಶಿಕ್ಷೆ ಇದ್ದರಷ್ಟೇ ಜನರು ಕಾನೂನು ಪಾಲಿಸುತ್ತಾರೆನೋ : ಹೈಕೋರ್ಟ್ ನ್ಯಾಯಮೂರ್ತಿ ನಟಿ ರುಕ್ಮಿಣಿ ವಸಂತ್‌ ವಿರುದ್ಧ ನಕಲಿ ವಿಡಿಯೋ : 29 ಸಮಾಜಿಕ ಜಾಲತಾಣದ ಖಾತೆಗಳ ವಿರುದ್ಧ ಎಫ್‌ಐಆರ್ಭೀಕರ ರಸ್ತೆ ಅಪಘಾತ : ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿಸಂತೋಷ್ ಲಾಡ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು : ದಾದಾ ಮಹಾರಾಜ್ ನಗರಕರ್ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ರಾವಸಾಬ ಐಹೊಳೆ ದಂಪತಿ ಜನ್ಮದಿನಾಚರಣೆ