Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೇವನೂರು ಗ್ರಾಮದ ಅಮೋಘಸಿದ್ದೇಶ್ವರ ಜಾತ್ರಾ ಮಹೋತ್ಸವ

Advertisement

ಅಥಣಿ : ತಾಲೂಕಿನ ಮಲಾಬಾದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬೇವನೂರು ಗ್ರಾಮದ ಭಂಡಾರ ದೇವರು ಎಂದು  ಪ್ರಖ್ಯಾತಿ ಹೊಂದಿರುವ ಶ್ರೀ ಅಮೋಘಸಿದ್ದೇಶ್ವರ ಜಾತ್ರೆಯು ಬಹಳ ಮಹತ್ವಪೂರ್ಣವಾಗಿ ಜಾತ್ರಾ ಮಹೋತ್ಸವ ಅತ್ಯಂತ ಅದ್ದೂರಿಯಾಗಿ ಜರುಗಿತು.

ಜಾತ್ರಾ ಕಮಿಟಿಯ ಯುವ ನಾಯಕರಾದ ಅಶೋಕ್ ಜಾದವ್ ಅವರು  ಮಾತನಾಡಿ ಪ್ರತಿ ವರ್ಷದಂತೆ  ಈ ವರ್ಷವೂ ನಮ್ಮ ಗ್ರಾಮದ ದೇವರಾದ ಶ್ರೀ ಅಮೋಘಸಿದ್ದೇಶ್ವರ ಜಾತ್ರೆಯು ಸತತ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ  ಅತ್ಯಂತ ವಿಜೃಂಭಣೆಯಿಂದ ಜಾತ್ರೆಯು ಜರುಗಿತು. ಈ ಕಾರ್ಯಕ್ರಮದ ಮೂರನೇ ದಿನದ ವಿಶೇಷವೇನೆಂದರೆ ದೇವರ ಗುಡಿಯಿಂದ ಗದ್ದೆಯ ವರಿಗೆ ವಿವಿಧ ವಾದ್ಯ ಮೇಳ ಹಾಗೂ ಡೊಳ್ಳು ಕುಣಿತ ದೊಂದಿಗೆ ಹಾಗೂ ಭಕ್ತರು ಭಂಡಾರ ಹಾರಿಸುವ ಮೂಲಕ ಜಾತ್ರೆಯು ಅದ್ದೂರಿಯಾಗಿ ಆಚರಣೆ ಮಾಡಿದರು. 

ನಂತರ ಲಕ್ಷ್ಮಣ್ ಕುಂಬಾರ್ ಅವರು ಮಾತನಾಡಿ ಭಂಡಾರ ದೇವರು ಎಂದು ಪ್ರಸಿದ್ಧವಾದ ಶ್ರೀ ಅಮೋಘಸಿದ್ದೇಶ್ವರ ಜಾತ್ರೆಯಲ್ಲಿ ಬೇರೆ ಬೇರೆ ಊರುಗಳಿಂದ ಹಾಗೂ ಮಹಾರಾಷ್ಟ್ರದಿಂದ ಬಂದು ದೇವರುಗಳ ಪಲ್ಲಕ್ಕಿ ಭಾಗವಹಿಸಿದ್ದು ಜಾತ್ರೆಯಲ್ಲಿ ಮೂರು ದಿನಗಳ ಕಾಲ ಸತತ ಬಂದಂತ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಯಿತು ಜಾತ್ರೆಯು ವಿಜೃಂಭಣೆಯಿಂದ ಜರುಗಿದ್ದು ಜಾತ್ರೆಯಲ್ಲಿ ಎಲ್ಲಾ ರೀತಿಯ ಅನುಕೂಲ ಮಾಡಿದ ಜಾತ್ರಾ ಕಮಿಟಿಗೆ ಶ್ರೇಯಸ್ಸು ಸಲ್ಲಿಸಬೇಕಾಗಿದೆ. ನಮ್ಮ ಗ್ರಾಮದ ಪರವಾಗಿ ಅಭಿನಂದನೆ  ಸಲ್ಲಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಜಾತ್ರಾ ಕಮಿಟಿ ಹಿರಿಯರಾದ ಶಿವಾಜಿ ಯಮಗಾರ್ ಕಾಕಾಸಾಬ. ಚೌಗಲಾ. ಕಾಕಾಸಾಬ  ಪಾಟೀಲ್. ಸದಾಶಿವ ವಾಘಮಾರೆ. ರುದ್ರಗೌಡ ಪಾಟೀಲ. ಅಪಸಾಬ ಬೋಸಲೆ. ಹನುಮಂತ ಪೂಜಾರಿ. ಶಂಕರ್ ಗ್ಯಾಂಡ್ ಸಚಿನ್ ಪವಾರ್ ಅಪ್ಪಾಸಾಬ್ ನಾಯಕ್ ಹಾಗೂ ಜಾತ್ರಾ ಕಮಿಟಿಯ ಸದಸ್ಯರು ಹಾಗೂ ಊರಿನ ಮುಖಂಡರು ಸುತ್ತಮುತ್ತಲಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. 

ವರದಿ : ರಾಜು ವಾಘಮಾರೆ

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿಯಲ್ಲಿ ಯುವಕರ ಮೇಲೆ ತಲ್ವಾರ್ ದಾಳಿ ಕೇಸ್ : ಒಂದೇ ತಾಸಿನಲ್ಲಿ ಆರೋಪಿಗಳು ಅರೆಸ್ಟ್ ನಾಳೆ ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ ವಚನ ಸ್ವೀಕಾರ ಬೇವನೂರು ಗ್ರಾಮದ ಅಮೋಘಸಿದ್ದೇಶ್ವರ ಜಾತ್ರಾ ಮಹೋತ್ಸವ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯಿಂದ ಉಚಿತ ಆರೋಗ್ಯ ಶಿಬಿರ. ಚೇಳೂರು ಸರ್ಕಾರಿ ಆಸ್ಪತ್ರೆಗೆ ಬೇಕಿದೆ ಕಾಯಕಲ್ಪ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೋಗಿಗಳ ಪರದಾಟ.ಕಸ್ಕೋಟ ಸಸ್ಯರೋಗದಿಂದ ಬೆಳೆಹಾನಿ ಸಂಕಷ್ಟಕ್ಕೆ ಒಳಗಾದ ರೈತರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು:ಗೋಪಾಲ ಎಂ ಪಿಎರಡು ಬಲಿಷ್ಠ ಬ್ಯಾಟಿಂಗ್ ತಂಡಗಳ ಕಾದಾಟ ಇಂದುಚೆನ್ನೆöÊ ಸೂಪರ್ ಕಿಂಗ್ಸ್ ತಂಡಕ್ಕೆ ಮಹತ್ವದ ಗೆಲುವುಜಾತಿ ನಿಂದನೆ : ಬಿಜೆಪಿ ಶಾಸಕ ಬಿ.ಪಿ. ಹರೀಶ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಜಾತಿ ನಿಂದನೆ : ಬಿಜೆಪಿ ಶಾಸಕ ಬಿ.ಪಿ. ಹರೀಶ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ