LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕನಸಿನಲ್ಲಿ ಬಂದಿದ್ದ ಆಂಜನೇಯ : ಮತಾಂತರವಾಗಿದ್ದವರು ಹಿಂದೂ ಧರ್ಮಕ್ಕೆ ವಾಪಸ್ 

Advertisement
ಯಾದಗಿರಿ: ನಮ್ಮ ಜೀವನದಲ್ಲಿ  ನಾವು ಮಾಡಿದ ಪ್ಲ್ಯಾನ್‌ ಕೆಲವೊಮ್ಮೆ ವರ್ಕ್‌ ಆಗುವುದಿಲ್ಲ. ಅದಕ್ಕೆ ಉತ್ತಮವಾದ ಉದಾಹರಣೆ, ಯಾದಗಿರಿಯ ಈ ಕುಟುಂಬ. ಸುಮಾರು ವರ್ಷಗಳ ಹಿಂದೆ ಹಿಂದ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದ ಕುಟುಂಬವೊಂದು ಹಿಂದೂ ಧರ್ಮಕ್ಕೆ ಘರ್ ವಾಪ್ಸಿ ಆಗಿದ್ದು, ಅದಕ್ಕೆ ಕಾರಣವಾಗಿದ್ದು ಆ ಒಂದು ಘಟನೆ.

ಯಾದಗಿರಿ ನಗರದ ಗಿರಿನಗರ ಕಾಲೋನಿಯಲ್ಲಿರುವ ಬುಡ್ಡ ಜಂಗಮ ಸಮಾಜದ ವೆಂಕಟೇಶ್ ಹಾಗೂ ಅವರ ಕುಟುಂಬ ಕಾರಣಾಂತರಗಳಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿತ್ತು. ಆದರೆ ಈಗ ಮರಳಿ ಹಿಂದೂ ಧರ್ಮಕ್ಕೆ ಬಂದಿದ್ದು, ಅದಕ್ಕೆ ಕಾರಣ ಆಂಜನೇಯ.

ಕನಸಿನಲ್ಲಿ ಆಂಜನೇಯ ಬಂದು ಹಿಂದೂ ಧರ್ಮಕ್ಕೆ ಮರಳಿ ಬರುವಂತೆ ಹೇಳಿದ್ದಕ್ಕೆ ಮರಳಿ ಬಂದಿದ್ದೇವೆ ಎಂದು ವೆಂಕಟೇಶ್‌ ಹೇಳಿದ್ದು, ಅದೇ ಊರಿನ ಸ್ವಾಮೀಜಿ ಒಬ್ಬರು ದಂಪತಿ ಹಾಗೂ ಮಕ್ಕಳ‌ ಹಣೆಗೆ ವಿಭೂತಿ ಹಚ್ಚಿ ಕೊರಳಿಗೆ ರುದ್ರಾಕ್ಷಿ ಧಾರಣೆ ಮಾಡಿ ಧರ್ಮಕ್ಕೆ ಕರೆಸಿಕೊಂಡಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಈ ವೆಂಕಟೇಶ್‌ಗೆ ಬಹಳ ಆರೋಗ್ಯ ಸಮಸ್ಯೆ ಉಂಟಾಗಿತ್ತು. ಇದೆ ಕಾರಣಕ್ಕೆ ಪರಿಚಯಸ್ಥರ ಮೂಲಕ ಆಂಧ್ರದ ಅನಂತಪುರದ ಗುತ್ತಿ ಚರ್ಚಿಗೆ ಹೋಗಿದ್ದರಂತೆ. ಅದರ ನಂತರ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ.

ಹಾಗಾಗಿ ಯೇಸು ಸ್ವಾಮಿಯಿಂದ ಆರೋಗ್ಯ ಸುಧಾರಿಸಿದೆ ಎಂದು ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದರು. ಕಳೆದ ಒಂದು ವರ್ಷದಿಂದ ಯಾಕೋ ಮನಸ್ಸಿನಲ್ಲಿ ತಳಮಳವಾಗುತ್ತಿತ್ತಂತೆ.

ಅದಕ್ಕೆ ಸರಿಯಾಗಿ ನಿತ್ಯ ಆಂಜನೇಯ ಕನಸಿನಲ್ಲಿ ಬರುತತಿದ್ದನಂತೆ. ಅಲ್ಲದೇ, ಆರ್ಥಿಕ ಸಮಸ್ಯೆಗಳು ಜಾಸ್ತಿ ಆಗಿದ್ದವು. ಇದನ್ನಲ್ಲಾ ನೋಡಿ ಮತ್ತೆ ಹಿಂದೂ ಧರ್ಮಕ್ಕೆ ಮರಳಿ ಬಂದಿದ್ಧಾರೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ