Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ : ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

Advertisement

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದ್ದು, ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ನಡೆದಿರುವ ಘಟನೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಮೇ 12ರಂದು ನಡೆದಿದ್ದ ಈ ಘಟನೆಯು ತಡವಾಗಿ ಬೆಳಕಿಗೆ ಬಂದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ನೊಂದ ವಿದ್ಯಾರ್ಥಿನಿಯು ತನ್ನ ಕಾಲೇಜು ಸಮಯದ ಬಳಿಕ ಬಿಡುವಿನ ವೇಳೆಯಲ್ಲಿ ಮೊಮೋಸ್ ಅಂಗಡಿಯೊಂದನ್ನು ನಡೆಸುತ್ತಿದ್ದಳು ಎನ್ನಲಾಗಿದೆ.

ಆದರೆ ಇತ್ತೀಚೆಗೆ ಅಂಗಡಿಯು ನಷ್ಟದಲ್ಲಿದ್ದ ಕಾರಣ, ಅದನ್ನು ಮಾರಾಟ ಮಾಡಲು ಆಕೆ ನಿರ್ಧರಿಸಿದ್ದಳು. ಈ ವೇಳೆ ಅಂಗಡಿ ಮಾರಾಟದ ವ್ಯವಹಾರಕ್ಕಾಗಿ ಮಧ್ಯವರ್ತಿಯಾಗಿ (ಬ್ರೋಕರ್) ಹೈನಾಸ್ ಎಂಬಾತ ವಿದ್ಯಾರ್ಥಿನಿಯ ಸಂಪರ್ಕಕ್ಕೆ ಬಂದಿದ್ದನು.

ಅಂಗಡಿಯನ್ನು ಖರೀದಿಸಲು ಘೋಷ್ ಮತ್ತು ಅತುಲ್ ಎಂಬುವವರು ಮುಂದೆ ಬಂದಿದ್ದು, ವ್ಯವಹಾರಕ್ಕೆ ಸಂಬಂಧಿಸಿದಂತೆ ಎಲ್ಲಾ ಸಿದ್ಧತೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಘೋಷ್, ಅತುಲ್, ಬ್ರೋಕರ್ ಹೈನಾಸ್ ಮತ್ತು ವಿದ್ಯಾರ್ಥಿನಿ ನಾಲ್ವರೂ ಸೇರಿ ಪಾರ್ಟಿ ಆಯೋಜಿಸಿದ್ದರು. 

ಪಾರ್ಟಿ ನಡೆಯುತ್ತಿದ್ದಾಗ ಊಟ ತರುವುದಕ್ಕಾಗಿ ಅತುಲ್ ಮತ್ತು ಘೋಷ್ ಇಬ್ಬರೂ ಹೊರಗಡೆ ಹೋಗಿದ್ದಾರೆ. ಈ ಒಂಟಿ ಸಮಯವನ್ನು ಬಳಸಿಕೊಂಡ ಹೈನಾಸ್, ವಿದ್ಯಾರ್ಥಿನಿಯ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಘೋರ ಕೃತ್ಯದ ಬಳಿಕ ಸಂತ್ರಸ್ತೆ ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ, ಪೊಲೀಸರು ಆರಂಭದಲ್ಲಿ ಪ್ರಕರಣವನ್ನು ಅತ್ಯಂತ ಬೇಜವಾಬ್ದಾರಿತನದಿಂದ ನಿರ್ಲಕ್ಷಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ, ನ್ಯಾಯ ಕೇಳಲು ಹೋದ ಯುವತಿಯನ್ನೇ ಪೊಲೀಸರು ಹೀಯಾಳಿಸಿ ಕಳುಹಿಸಿದ್ದರು ಎನ್ನಲಾಗಿದೆ.

ಸ್ಥಳೀಯ ಪೊಲೀಸರಿಂದ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ, ಧೃತಿಗೆಡದ ಸಂತ್ರಸ್ತೆಯು ಹಿರಿಯ ಪೊಲೀಸ್ ಅಧಿಕಾರಿಗಳ ಮೊರೆ ಹೋಗಿ ತನಗಾದ ಅನ್ಯಾಯವನ್ನು ವಿವರಿಸಿದ್ದಾಳೆ.

ಹಿರಿಯ ಅಧಿಕಾರಿಗಳ ಹಸ್ತಕ್ಷೇಪದ ಬಳಿಕ ಎಚ್ಚೆತ್ತುಕೊಂಡ ಮಡಿವಾಳ ಠಾಣಾ ಪೊಲೀಸರು, ಇದೀಗ ಆರೋಪಿ ಹೈನಾಸ್ ವಿರುದ್ಧ ಅಧಿಕೃತವಾಗಿ ಎಫ್‌ಐಆರ್ (FIR) ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೇ ೨೩ರಂದು  ಅಯ್ಯಣ್ಣ ಮಾಸ್ಟರ್ ಗೆ ಬಸವಶ್ರೀ ಕಾಯಕ' ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ  : ಡಾ. ಬಿರಾದಾರ್ಕೆಕೆಆರ್ ಪ್ಲೇ ಆಪ್ ಆಸೆ ಜೀವಂತಅನಿಯಂತ್ರಿತ ಆನ್ಲೈನ್ ಔಷಧಿಗಳು ಮಾರಾಟ ವಿರೋಧಿಸಿ ಔಷಧಿ ಅಂಗಡಿಗಳು ರಾಜ್ಯದ್ಯಂತ ಬಂದ್ ಯಶಸ್ವಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ವತಿಯಿಂದ ಕಾರ್ಯಕ್ರಮ ವೈ.ಕೆ. ಮೋಳೆ ಅಂಬೇಡ್ಕರ್ ಭವನ ಜಾಗದ ಸಮಸ್ಯೆ ಬಗೆಹರಿಸದಿದ್ದರೆ ಹೋರಾಟ: ಡಾ.ಕೆ.ಎಂ. ಸಂದೇಶ್‌ ಎಚ್ಚರಿಕೆಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ : ವಿದ್ಯಾರ್ಥಿನಿ ಮೇಲೆ ಅತ್ಯಾಚಾರಸಿಂಧನೂರು ಔಷಧ ವ್ಯಾಪಾರಿಗಳ ಮುಷ್ಕರ ಯಶಸ್ವಿಪಶ್ಚಿಮ ಬಂಗಾಳ ಸರ್ಕಾರದ ಐತಿಹಾಸಿಕ ತೀರ್ಮಾನ : ಇನ್ಮುಂದೆ ಮದ್ರಸಾಗಳಲ್ಲಿ 'ವಂದೇ ಮಾತರಂ'ಕಡ್ಡಾಯಕಾಂಗ್ರೆಸ್ ಮುಖಂಡ ಭಾಸ್ಕರ್ ಆಚಾರಿ ಮನೆಯಲ್ಲಿ ಮಾರಮ್ಮ ದೇವಿ ಜಾತ್ರೆಯ ಭರ್ಜರಿ ಊಟಾ15 ಸಾವಿರ ಶಿಕ್ಷಕರ ನೇಮಕಕ್ಕೆ ಸಿದ್ದರಾಮಯ್ಯ ಸೂಚನೆ