ಮಾನ್ವಿ: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹೆಚ್.ಶಿವರಾಮೇಗೌಡ ಬಣ ಹಾಗೂ ಕನ್ನಡ ಸೇನೆ ವತಿಯಿಂದ ಮುಖ್ಯಮಂತ್ರಿಗಳಿಗೆ ಗ್ರೇಡ್-2 ತಹಶೀಲ್ದಾರ್ ಅಬ್ದುಲ್ ವಾಹಿದ್ ರವರ ಮೂಲಕ ಮನವಿ ಸಲ್ಲಿಸಿ ಕರ್ನಾಟಕ ರಕ್ಷಣಾ ವೇದಿಕೆ ಹೆಚ್.ಶಿವರಾಮೇಗೌಡ ಬಣ ತಾಲೂಕು ಅಧ್ಯಕ್ಷರಾದ ನರಸಿಂಹ ಮಾತನಾಡಿ ಆ.19ರಂದು ಸಿರವಾರ ತಾಲ್ಲೂಕಿನ ಹೊಕ್ರಾಣಿ ಗ್ರಾಮದ ಚಲವಾದಿ ಸಮುದಾಯಕ್ಕೆ ಸೇರಿದ ಅಶ್ವಿನಿ ಬಯಲು ಶೌಚಕ್ಕೆ ತೆರಳಿದ್ದ ಸಮಯದಲ್ಲಿ ಕೇಲವು ದುಷ್ಕರ್ಮಿಗಳು ಯುವತಿಯ ಮೇಲೆ ಅತ್ಯಾಚಾರ ಎಸಗಿ, ನಂತರ ಕೊಲೆ ಮಾಡಿ ಬಾವಿಗೆ ಎಸೆದಿರುವ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಈ ಪ್ರಕರಣವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು. ಹಾಗೂ ಸಂತ್ರಸ್ತೆಯ ಕುಟುಂಬಕ್ಕೆ ಸರಕಾರದ ನಿಯಮದಂತೆ ಸೂಕ್ತ ಪರಿಹಾರ, ಭದ್ರತೆ ಮತ್ತು ಉಚಿತ ಕಾನೂನು ನೆರವು ಒದಗಿಸಬೇಕು. ಜಿಲ್ಲೇಯಲ್ಲಿ ದಲಿತ ಮಹಿಳೆಯರ ಮೇಲೆ ಇಂತಹ ಅಮಾನವಿಯ ಘಟನೆಗಳು ಹೆಚ್ಚಾಗಿ ನಡೆಯುತ್ತಿರುವುದು ವರದಿಯಾಗುತ್ತಿರುವುದರಿಂದ ರಾಯಚೂರು ಜಿಲ್ಲೇಯನ್ನು ಅತಿ ಸೂಕ್ಷ್ಮ ಜಿಲ್ಲೆಯಾಗಿ ಪರಿಗಣಿಸಿ ಗ್ರಾಮೀಣ ಭಾಗದಲ್ಲಿ ಸಿ.ಸಿ. ಟೀವಿ.ಅಳವಡಿಸಬೇಕು. ಬೀದಿ ದೀಪ ಹಾಕಬೇಕು, ಶೌಚಾಲಯಗಳ ವ್ಯವಸ್ಥೆ ಮಾಡುವ ಮೂಲಕ ಮಹಿಳೆಯರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಮಹಿಳೆಯರು ಹಾಗೂ ಬಾಲಕಿಯರ ಸುರಕ್ಷತೆಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪೊಲೀಸ್ ಗಸ್ತು, ಜಾಗೃತಿ ಕಾರ್ಯಕ್ರಮಗಳು ಹಾಗೂ ತುರ್ತು ಸಹಾಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಒತ್ತಾಯಿಸಿದರು.
ದಿಲಿಪ್ ಕುಮಾರ. ತಾ.ಉಪದ್ಯಕ್ಷ ರವಿಕುಮಾರ್ ಮದ್ಲಾಪುರ್,ದೀಪಕ ಯಾದವ ,ಸನತ್ ಕುಮಾರ್,ಶಾಂತಕುಮಾರ್,ವಿನಯ ಕುಮಾರ.ನಂದ ನಾಯಕ .ಅಮರೇ ಗೌಡ ಮುನ್ನೂರು, ಅಂಜಿ ಯಾದವ ,ವಿನಯಕುಮಾರ, ಸಿದ್ದಪ್ಪ, ಶಿವನಂದನಾಯಕ, ಅಮರೇಗೌಡ, ಶ್ರೀನಿವಾಸ, ಭೀಮೇಶನಾಯಕ, ಮಂಜುನಾಥ ಬಂಡಿ, ಶೇಕ್ ಮುಸ್ತಾಫ್, ಸುದರ್ಶನಪೂಜಾರಿ, ಸಂಜೀವನಾಯಕ, ಮಹಿಬೂಬ್ ,ಸಬ್ಜಲಿ, ಮಹಮ್ಮದ್‌ರಫಿ, ಮುಸ್ತಾಫ್ ಇದ್ದರು.
ವರದಿ : ಆಂಜನೇಯ ನಸಲಾಪುರ


