ಶಿವಮೊಗ್ಗ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್(Congress) ಸೋಲು ಕಂಡಿದ್ದ 84 ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಕೆಪಿಸಿಸಿ ಆಯೋಜಿಸಿರುವ 'ಭಾರತ್ ಜೋಡೋ 2.0'(Bharat Jodo 2.0) ಪಾದಯಾತ್ರೆಗೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಿಂದ ಇಂದು ಅಧಿಕೃತ ಚಾಲನೆ ನೀಡಲಾಯಿತು.
2022ರಲ್ಲಿ ರಾಹುಲ್ ಗಾಂಧಿ ನೇತೃತ್ವದ ಐತಿಹಾಸಿಕ 'ಭಾರತ್ ಜೋಡೋ ಯಾತ್ರೆ' ಕರ್ನಾಟಕವನ್ನು ಪ್ರವೇಶಿಸಿ ನಾಲ್ಕು ವರ್ಷ ಪೂರ್ಣಗೊಂಡ ನೆನಪಿಗಾಗಿ ಈ ಪಾದಯಾತ್ರೆಯನ್ನು ಆಯೋಜಿಸಲಾಗಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್(Hariprasad) ಅವರ ನೇತೃತ್ವದಲ್ಲಿ ಆರಂಭವಾಗಿರುವ ಈ ಪಾದಯಾತ್ರೆಯು ಒಟ್ಟು 29 ಜಿಲ್ಲೆಗಳಲ್ಲಿ 84 ದಿನಗಳ ಕಾಲ ಸಾಗಲಿದೆ.
ಶಿಕಾರಿಪುರದಲ್ಲಿ 10 ಕಿ.ಮೀ. ಹಾದಿ ತುಳಿದ ನಾಯಕರು
ಶಿಕಾರಿಪುರ ತಾಲೂಕಿನ ಕಿಟ್ಟದಹಳ್ಳಿಯಿಂದ ಚಾಲನೆ ಪಡೆದ ಪಾದಯಾತ್ರೆಯು ಮತ್ತಿಕೋಟೆ, ಹೊಸನಗರ ಕ್ರಾಸ್ ಹಾಗೂ ನೆಲವಾಗಿಲು ಮಾರ್ಗವಾಗಿ ಶಿಕಾರಿಪುರ ಪಟ್ಟಣದತ್ತ ಸಾಗಿತು.
ಸುಮಾರು 10 ಕಿಲೋಮೀಟರ್‌ಗಳಷ್ಟು ಸಾಗಿದ ಈ ಪಾದಯಾತ್ರೆಯ ಬಳಿಕ ಶಿಕಾರಿಪುರದಲ್ಲಿ ಬೃಹತ್ ಬಹಿರಂಗ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.


