LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಬಾಗಲಕೋಟೆ: ಜಿಲ್ಲಾ ಆಸ್ಪತ್ರೆಯಲ್ಲಿ ಹಿಂದೂ ಯುವತಿ ಮೇಲೆ ದೌರ್ಜನ್ಯ - ಆಕ್ರೋಶ

Advertisement

ಕಲಾದಗಿ : ಬಾಗಲಕೋಟೆ ನಗರದ ನವನಗರದಲ್ಲಿರುವ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಹಿಂದೂ ಯುವತಿಯೊಬ್ಬಳನ್ನು ಕೊಠಡಿಯಲ್ಲಿ ಕೂಡಿ ಹಾಕಿ ದೌರ್ಜನ್ಯ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹಿಂದೂ ಮುಖಂಡ ಕುಮಾರಸ್ವಾಮಿ ಹಿರೇಮಠ ತಿಳಿಸಿದರು. ತಡ  ರಾತ್ರಿ ಸುಮಾರು 12 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಯುವತಿಯನ್ನು ಆಸ್ಪತ್ರೆಯ ಶೌಚಾಲಯದ ಕೊಠಡಿಯೊಂದರಲ್ಲಿ ಕೂಡಿ ಹಾಕಿ ಹಿಂಸೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಕೃತ್ಯದಲ್ಲಿ ಫರೀದ ಸಾಬ ಡಾಂಗಿ  ಎಂಬ ಯುವಕ ಭಾಗಿಯಾಗಿದ್ದಾನೆ ಎಂದು ದೂರಲಾಗಿದೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ಸುರಕ್ಷತೆಯ ಕೊರತೆ: ಸಾರ್ವಜನಿಕರು ನಂಬಿಕೆಯಿಂದ ಬರುವ ಸರ್ಕಾರಿ ಆಸ್ಪತ್ರೆಯಲ್ಲಿ ಇಂತಹ ಘಟನೆ ನಡೆದಿರುವುದು ಮಹಿಳೆಯರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ. ಆರೋಪಿ ದಂಗಿ ನದಾಫ ಈ ಹಿಂದೆಯೂ ಸಹ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿ ಅಮಾನತುಗೊಂಡಿದ್ದ ಎನ್ನಲಾಗಿದೆ. ಮಹಿಳಾ ಆಯೋಗಕ್ಕೆ ಒತ್ತಾಯ: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ವಿಜಯಲಕ್ಷ್ಮಿ ಅವರು ತಕ್ಷಣ ಬಾಗಲಕೋಟೆಗೆ ಭೇಟಿ ನೀಡಿ, ನೊಂದ ಯುವತಿಗೆ ನ್ಯಾಯ ಒದಗಿಸಬೇಕು ಹಾಗೂ ಘಟನೆಯ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಕಠಿಣ ಶಿಕ್ಷೆಗೆ ಆಗ್ರಹ: ಇಂತಹ ಘಟನೆಗಳು ಮರುಕಳಿಸದಂತೆ ಉತ್ತರ ಪ್ರದೇಶದ ಮಾದರಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ತಪ್ಪಿತಸ್ಥರಿಗೆ ಸಾರ್ವಜನಿಕವಾಗಿ ಶಿಕ್ಷೆ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸದ್ಯ ಪೊಲೀಸ್ ಇಲಾಖೆಯು ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿಕೊಂಡಿದ್ದು, ತನಿಖೆಯನ್ನು ಚುರುಕುಗೊಳಿಸಿದೆ.   ವರದಿ : ಬಸವರಾಜ ಪೂಜಾರಿ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೃಶಬ್ ಪಂತ್ ಇನ್ನೊಂದು ವಿಕ್ರಮ CPI ನೇತೃತ್ವದಲ್ಲಿ ಈದ್ ಮಿಲಾದ್ ಶಾಂತಿ ಸಭೆಕೊಲಂಬೊ ಟೆಸ್ಟ್ :ಬ್ರಹತ್ ಮೊತ್ತದತ್ ಭಾರತಬಸ್‌ಗಳಲ್ಲಿ ಉಚಿತ ಪ್ರಯಾಣ, ವರ್ಷಕ್ಕೆ 3 ಉಚಿತ ಸಿಲಿಂಡರ್‌: CM ವಿಜಯ್‌ 'ಸೂಪರ್‌ ಸಿಕ್ಸ್‌' ಘೋಷಣೆಸೆಲ್ಫಿ' ಕ್ಲಿಕ್ಕಿಸಿಕೊಳ್ಳಲು ಬಂದು ರಾಹುಲ್ ಗಾಂಧಿ ಕೆನ್ನೆಗೆ ಮುತ್ತಿಟ್ಟ ಯುವತಿ : ವಿಡಿಯೋ ವೈರಲ್ ನಿಡಗುಂದಿ ಕೇನಾಲ್‌ಗೆ ಜಾರಿ ಬಿದ್ದು ವ್ಯಕ್ತಿ ನಾಪತ್ತೆ: ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯಚಿಕ್ಕಮಗಳೂರಿನಲ್ಲಿ ಟಿಪ್ಪು ಕಟೌಟ್ ವಿವಾದ:ಈದ್ ಮಿಲಾದ್ ವೇಳೆ ಪಾಕಿಸ್ತಾನಿ ಹಾಡು ವೈರಲ್ವಿದ್ಯಾರ್ಥಿನಿಯರ ಜೊತೆ ಸ್ನಾನ ಮಾಡಿದ ಪ್ರಾಂಶುಪಾಲ ಅಮಾನತು : ವಿಡಿಯೋ ವೈರಲ್ಈಸ್ಟ್ ಬೆಂಗಾಲ್ ಗೆ ಡುರಾಂಡ್ ಕಪ್ ಕಿರೀಟ ಕರ್ನಾಟಕ ಯುವಸೇನೆ ಸಮಿತಿವತಿಯಿಂದ  ಪುನೀತ್ ರಾಜಕುಮಾರ್ ಪುತ್ಥಳಿ ನಿರ್ಮಾಣಕ್ಕೆ ಗುದ್ದಲಿ ಪೂಜೆ: ಮಹೇಶ್ ರೆಡ್ಡಿ