ನವದೆಹಲಿ : SIR ಗೆ ಸಂಬಂಧಪಟ್ಟಂತೆ ದೆಹಲಿಯ ಜಂತರ್ ಮಂತರ್ ನಲ್ಲಿ ಇಂದು ಸಿಜೆಪಿ ಬೃಹತ್ ಪ್ರತಿಭಟನೆ ನಡೆಸುತ್ತಿದೆ.
ಇದೀಗ ಸಿಜೆಪಿ ಪ್ರತಿಭಟನೆಯನ್ನು ನಿಷೇಧಿಸಿ ಎಂದು ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದ್ದು ಸಿಜೆಪಿ ಪ್ರತಿಭಟನೆ ನಿಷೇಧಿಸುವಂತೆ ಎಲ್ಲಾ ರಾಜ್ಯಗಳಿಗೂ ಕೇಂದ್ರ ಗೃಹ ಸಚಿವ ಸೂಚನೆ ನೀಡಿದೆ ಎಲ್ಲಾ ರಾಜ್ಯಗಳಿಗೂ ಗೃಹ ಸಚಿವಾಲಯ ಕಾರ್ಯದರ್ಶಿ ಸೂಚನೆ ಕೊಟ್ಟಿದ್ದಾರೆ.
ಜಂತರ್ ಮದರ್ ನಲ್ಲಿ ಸಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿಯಲ್ಲಿ 45 ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ. ಜನಪತ್, ಪಟೇಲ್ ಚೌಕ್, ಕೇಂದ್ರ ಸಚಿವಾಲಯ ಮೆಟ್ರೋ ನಿಲ್ದಾಣ, ಲೋಕಕಲ್ಯಾಣ ಮಾರ್ಗ, ರಾಜೀವ್ ಚೌಕ್, ನವ ದೆಹಲಿ ನಿಲ್ದಾಣ, ಬಾರಾಕಂಬಾ ರಸ್ತೆ, ಐಟಿಓ, ದೆಹಲಿ ಗೇಟ್, ಖಾನ್ ಮಾರ್ಕೆಟ್, ರಾಮಕೃಷ್ಣ ಆಶ್ರಮ ಮಾರ್ಗ ಸೇರಿದಂತೆ ಒಟ್ಟು 45 ಮೆಟ್ರೋ ನಿಲ್ದಾಣಗಳನ್ನು ಭದ್ರತಾ ದೃಷ್ಟಿಯಿಂದ ಸಂಜೆ 6ರವರೆಗೂ ಬಂದ್ ಮಾಡಲಾಗಿದೆ.
ಇದೇ ಸಂದರ್ಭದಲ್ಲಿ ಕರಣಿ ಹಿನ್ನೆಲೆಯಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಕ್ಕೆ ಆದೇಶ ನಾಲ್ಕು ಕಿಲೋಮೀಟರ್ ವ್ಯಾಪ್ತಿಯಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಕೇಂದ್ರ ಗೃಹ ಸಚಿವಾಲಯ ತಾತ್ಕಾಲಿಕ ಅನುಮತಿ ನೀಡಿದ್ದು ನಿನ್ನೆ ರಾತ್ರಿ 10 ಗಂಟೆಯಿಂದ ಇಂದು ರಾತ್ರಿ 10 ಗಂಟೆವರೆಗೆ ಇಂಟರ್ನೆಟ್ ಬಂದ್ ಇರಲಿದೆ. ಮೊಬೈಲ್ ಇಂಟರ್ನೆಟ್ ಎಲ್ಲ ತಂತ್ರಜ್ಞಾನಗಳು ಬಂದ್ ಆಗಲಿವೆ.


