ಬ್ಯಾಂಕ್ ಖಾತೆಯಲ್ಲಿ ದಿಢೀರನೆ ₹3,500 ಕೋಟಿಗೂ ಅಧಿಕ ಹಣ ಕಾಣಿಸಿಕೊಂಡರೆ ಹೇಗಿರಬಹುದು? ಹೌದು ಕೇರಳದ ಸೂಪರ್ ಮಾರ್ಕೆಟ್ ಮಾಲೀಕರೊಬ್ಬರ ಖಾತೆಗೆ ಅನಿರೀಕ್ಷಿತವಾಗಿ 3,500 ಕೋಟಿ ರೂ.ಜಿಮೆಯಾಗಿದೆ. ಇದನ್ನು ಕಂಡು ವ್ಯಕ್ತಿ ದಂಗಾಗಿದ್ದಾರೆ.
ಕೊಚ್ಚಿಯ 'ದರ್ಶನಾ ಸೂಪರ್‌ಮಾರ್ಕೆಟ್' ಮಾಲೀಕರಾದ ಸುಮೇಶ್ ಕುಮಾರ್ ಎಂಬುವವರಿಗೆ ಅಕ್ಟೋಬರ್ 9 ರಂದು ಬೆಳಿಗ್ಗೆ ಈ ಅಚ್ಚರಿ ಕಾದಿತ್ತು.
ತಮ್ಮ ಮೊಬೈಲ್ ನಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿದ್ದಾರೆ ಈ ವೇಳೆ ಖಾತೆಯಲ್ಲಿ ಕೋಟ್ಯಂತರ ಮೊತ್ತ ಜಮೆಯಾಗಿರುವುದು ಕಂಡು ಬೆಚ್ಚಿಬಿದ್ದಿದ್ದಾರೆ. ಹಣ ಬಂದ ಸಂತೋಷಕ್ಕಿಂತ, ಈ ಇಷ್ಟು ದೊಡ್ಡ ಮೊತ್ತ ಎಲ್ಲಿಂದ ಬಂತು ಎಂಬ ಆತಂಕ ಅವರನ್ನು ಕಾಡಿತು. ತಕ್ಷಣವೇ ವಿಷಯವನ್ನು ಬ್ಯಾಂಕ್ ಅಧಿಕಾರಿಗಳಿಗೆ ಸಂಪರ್ಕಿಸಿ ಮಾಹಿತಿ ನೀಡಿದರು.
ಇದರ ನಡುವೆ, ಅವರ ಸೂಪರ್ ಮಾರ್ಕೆಟ್‌ನಲ್ಲಿ ಕಾರ್ಡ್ ಸ್ವೈಪಿಂಗ್ ವಹಿವಾಟುಗಳ ಮೂಲಕ ತಲಾ ₹3.5 ಕೋಟಿ ಮೊತ್ತ ಎರಡು ಬಾರಿ ಜಮೆಯಾಗಿರುವುದಾಗಿ ಸಂದೇಶಗಳು ಬಂದಿವೆ. ಈ ಎರಡು ವಹಿವಾಟುಗಳ ಒಟ್ಟು ಮೊತ್ತ ₹7 ಕೋಟಿ ಆಗಿತ್ತು. ಆದರೆ ಅಕೌಂಟ್ ಬ್ಯಾಲೆನ್ಸ್ ಮಾತ್ರ 3,500 ಕೋಟಿ ರೂ. ಗಡಿ ದಾಟಿತ್ತು.
ವಿಷಯದ ಗಂಭೀರತೆ ಅರಿತ ಬ್ಯಾಂಕ್ ಅಧಿಕಾರಿಗಳು ಪರಿಶೀಲನೆ ನಡೆಸಿ ಸಂಜೆಯ ವೇಳೆಗೆ ಬ್ಯಾಂಕ್ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಿದ್ದು ಖಾತೆಯಲ್ಲಿನ ಮೊತ್ತ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳಿದೆ.


