LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರ ಅಮಾನತು ಖಂಡನೀಯ

Advertisement
ಕಲಬುರಗಿ: ಇದು ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕಲು ಕೈಗೊಂಡಿರುವ ತುರ್ತು ನಿರ್ಧಾರವಾಗಿದೆ. ಇವರು ಎಡಿಜಿಪಿ ಹುದ್ದೆಯ ಶ್ರೇಣಿಯ ಅಧಿಕಾರಿಯಾಗಿರುವುದರಿಂದ, ಯಾವುದೇ ಕ್ರಮ ಕೈಗೊಳ್ಳುವ ಮೊದಲು ಘಟನೆಯ ಕುರಿತು ಪ್ರಾಥಮಿಕ ತನಿಖೆ ನಡೆಸಬೇಕಿತ್ತು. ಆದರೆ ಸರ್ಕಾರ, ಯಾವುದೇ ತನಿಖೆ ಇಲ್ಲದೆ, ಶಿಸ್ತಿನ ಸೂಚನೆ ಇಲ್ಲದೆ, ರಾಜಕೀಯ ಹಿತರಕ್ಷಣೆಗೆ ಮಾತ್ರ ತಲೆಕೊಟ್ಟು, ತಕ್ಷಣ ಅವರನ್ನು ಅಮಾನತುಗೊಳಿಸಿರುವುದು ಗಂಭೀರ ವಿಷಾದಕರ ಸಂಗತಿ.

ಬಿ. ದಯಾನಂದ ಅವರು ನಿಷ್ಠಾವಂತತೆ, ಶಿಸ್ತಿನ ಸೇವೆ, ಮತ್ತು ಜನತೆಯ ವಿಶ್ವಾಸಕ್ಕೆ ಪಾತ್ರರಾದ ಅಧಿಕಾರಿ. ಅವರನ್ನು ನಿಷ್ಕ್ರಿಯಗೊಳಿಸಿ ಸರ್ಕಾರ ತನ್ನ "ಹರಕೆ" ನೆರವೇರಿಸಿಕೊಂಡಂತಾಗಿದೆ. ಇಂತಹ ನಾಚಿಕೆಗೆಡುಕಟ್ಟದ ವರ್ತನೆ ಅಧಿಕಾರಿಗಳ ವಿರುದ್ಧ ದರ್ಪ ತೋರುವ ಉದಾಹರಣೆಯಾಗಿದ್ದು, ಈ ದೇಶದಲ್ಲಿ ನ್ಯಾಯ ಮತ್ತು ಪ್ರಜಾಪ್ರಭುತ್ವದ ಮೂಲಮೂಲ್ಯಗಳ ವಿರುದ್ಧ ನಡೆಯುವ ಹಿಂಸೆಗಳಂತಿದೆ.

ಇದಕ್ಕಿಂತಲೂ ವಿಷಾದಕರ ಸಂಗತಿ ಏನೆಂದರೆ, ಪದೇಪದೇ ವಾಲ್ಮೀಕಿ ಸಮುದಾಯದ ಅಧಿಕಾರಿಗಳ ವಿರುದ್ಧ ತೋರಲಾಗುತ್ತಿರುವ ದಬ್ಬಾಳಿಕೆ. ಇಂತಹ ಜಾತಿ ಆಧಾರಿತ ವಿಭಜನೆ ಮತ್ತು ಅನ್ಯಾಯ ಮುಂದುವರಿದರೆ, ಮುಂದಿನ ಚುನಾವಣೆಯಲ್ಲಿ ಸರ್ಕಾರವನ್ನು ಜನತೆ ತೀವ್ರವಾಗಿ ಪ್ರಶ್ನಿಸುವ ಕಾಲ ಹತ್ತಿರದಲ್ಲಿದೆ.

ತಕ್ಷಣ ಈ ಅಮಾನತು ರದ್ದುಗೊಳಿಸಬೇಕು. ಇಲ್ಲದಿದ್ದರೆ, ಗೃಹ ಸಚಿವರು ಮತ್ತು ಮುಖ್ಯಮಂತ್ರಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದು ಜವಾಬ್ದಾರಿ ಮತ್ತು ನೈತಿಕತೆಗನುಗುಣವಾಗಿರುತ್ತದೆ ಎಂದು ಯಲ್ಲಾಲಿಂಗ ದೊರೆ ಬಿರಾಳ
ನ್ಯಾಯವಾದಿಗಳು ಹಾಗೂ ಅಧ್ಯಕ್ಷರು, ಜಿಲ್ಲಾ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕ, ಕಲಬುರ್ಗಿ ರವರು ಆಕ್ರೋಶ ವ್ಯಕ್ತಪಡಿಸಿದರು

ವರದಿ: ವೆಂಕಟಪ್ಪ ಕೆ ಸುಗ್ಗಾಲ್
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು: ವ್ಯಕ್ತಿಯ ಮೇಲೆ ಎರಡು ಸುತ್ತು ಫೈರಿಂಗ್ಮದುವೆ ಆಗಲು ಹೆಣ್ಣು ಸಿಗದಿದ್ದಕ್ಕೆ ಯುವಕ ಆತ್ಮಹತ್ಯೆ ಗದಗ ತಾಲೂಕು ಬರ ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್.ಕೆ. ಪಾಟೀಲ್ಮಾಜಿ ಸಚಿವ ಬಿ. ರಮಾನಾಥ ರೈ ಕಾರು ಅಪಘಾತ : ಕೂದಲೆಳೆ ಅಂತರದಲ್ಲಿ ಪಾರುಎಶಿಯನ್ ಗೇಮ್ಸ್ ನಲ್ಲಿ ಮಹಿಳಾ ಕ್ರಿಕೆಟ್: ಪೈನಲ್ ಗೆ ಜಿಗಿದ ಭಾರತ ವನಿತೆಯರು ವಾಷಿಂಗ್ ಮಷಿನ್, ಫ್ರಿಡ್ಜ್‌ಗೆ ಬೆಂಕಿ : ಇಡೀ ಮನೆ ಆವರಿಸಿದ ಬೆಂಕಿ, ಓರ್ವ ಸಜೀವ ದಹನಬೆಳಗಾವಿ ಭೀಕರ ಅಗ್ನಿ ಅವಘಡ ಪ್ರಕರಣಕ್ಕೆ ಸ್ಪೋಟಕ ತಿರುವು: ಸಿಸಿಟಿವಿಯಲ್ಲಿ ಅಪರಿಚಿತ ಓಡಾಟ ಸೆರೆಕ್ರೇನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ಬಾಂಗ್ಲಾದೇಶ ತಂಡಕ್ಕೆ 196 ರನ್ ಗೆಲುವಿನ ಗುರಿ ನೀಡಿದ ಭಾರತ ಬಾಗಲಕೋಟೆ ನಡುರಸ್ತೆಯಲ್ಲೇ ಯುವಕನಿಂದ ಅಸಭ್ಯ ವರ್ತನೆ: ಯುವತಿ ರಕ್ಷಣೆಗೆ ಬಂದವರನ್ನೇ ಜೈಲಿಗಟ್ಟಿದ ಪೊಲೀಸ್ರು