Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದೇಶಾದ್ಯಂತ 98 ಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಖಾತೆಗಳ ನಿಷೇಧ

Advertisement

ನವದೆಹಲಿ : ದೇಶಾದ್ಯಂತ 98 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿರುವುದಾಗಿ ವಾಟ್ಸಾಪ್‌ ಹೇಳಿದೆ. ಸುಳ್ಳು ಸುದ್ದಿಯನ್ನು ಹರಡುತ್ತಿದ್ದ ಆರೋಪ ಮತ್ತು ವಾಟ್ಸಪ್‌ ಖಾತೆಯ ದುರ್ಬಳಕೆಯ ಮೇಲೆ ಈ ಕ್ರಮ ಕೈಗೊಳ್ಳಲಾಗಿದ್ದು 2025 ರ ಜೂನ್‌ ವರೆಗೆ ಸುಮಾರು 98 ಲಕ್ಷ ನಂಬರ್ ಗಳನ್ನು ನಿಷೇಧಿಸಲಾಗಿದೆ ಎಂದು ವಾಟ್ಸಪ್‌ ಮಾಹಿತಿ ನೀಡಿದೆ.


ಮೀಡಿಯಾ ಎಥಿಕ್ಸ್‌ ಕೋಡ್‌ 2021 ರ ಕಾಯಿದೆಯ ಅನುಸಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಮೆಟಾ ಒಡೆತನದ ವಾಟ್ಸಪ್‌ ಸಂಸ್ಥೆಯು ತುರ್ತು ಸಂದೇಶ ಸೇವೆಗೆ ಇಡೀ ವಿಶ್ವದಲ್ಲೇ ಪ್ರಸಿದ್ದವಾಗದ ವೇದಿಕೆಯಾಗಿದ್ದು, ಭಾರತದಲ್ಲಿ ನೂರಾರು ಕೋಟಿ ಮಂದಿ ವಾಟ್ಸಪ್‌ ಬಳಕೆದಾರರಿದ್ದಾರೆ.

ಜೂನ್‌ ನಲ್ಲಿ 160069 ವಿನಂತಿಗಳು ಬಂದಿದ್ದವು. ಎಲ್ಲಾ ವಿನಂತಿಗಳೂ ಸಹ ಖಾತೆಗಳನ್ನು ನಿಷೇಧಿಸುವ ಬಗ್ಗೆಯಾಗಿತ್ತು.

ಎಲ್ಲಾ ವಿನಂತಿಗಳನ್ನೂ ಸ್ವೀಕರಿಸಿ, ಪರಿಶೀಲಿಸಿ 19.79 ಲಕ್ಷ ಬಳಕೆದಾರರನ್ನು ನಕಲಿ ಬಳಕೆದಾರರು, ಸುಳ್ಳು ಸುದ್ದಿ ಹರಡುವವರು ಹಾಗೂ ವಾಟ್ಸಪ್‌ ಸೇವೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವವರು ಎಂದು ಗುರುತಿಸಲಾಗಿದೆ. ಈ ಎಲ್ಲಾ ನಂಬರ್‌ ಗಳನ್ನು ವಾಟ್ಸಪ್‌ ಸೇವೆಯಿಂದ ನಿಷ್ಕ್ರಿಯಗೊಳಿಸಲಾಗಿದೆ ಎಂದು ಮೆಟಾ ಹೇಳಿದೆ.

ವಾಟ್ಸಪ್‌ ಸಂಸ್ಥೆಯು ಬಳಕೆದಾರರ ಖಾಸಗಿತನವನ್ನು ರಕ್ಷಿಸಲು ಮೂರು ಹಂತದ ದುರುಪಯೋಗ ಪತ್ತೆ ವ್ಯವಸ್ಥೆಯನ್ನು ಜಾರಿಗೊಳಿಸಿದೆ.

ಖಾತೆ ಸೆಟಪ್‌ ಸಮಯದಲ್ಲಿ ಬಳಕೆದಾರರ ವಿಚಾರಣೆ, ಬಳಕೆದಾರರ ಮೌಲ್ಯಮಾಪನ ಇದರಲ್ಲಿ ಸೇರಿವೆ. ಅಲ್ಲದೇ, ಸ್ಪಾಮ್‌ ಹರಿಬಿಡುವುದು, ತಪ್ಪು ಮಾಹಿತಿ ನೀಡುವುದು, ಹಾನಿಕಾರಕ ಅಥವಾ ಸಮಾಜ ಬಾಹಿರ ಸಂದೇಶಗಳನ್ನು ಹಂಚುವ ಮೂಲಕ ಅಶಾಂತಿಯೆಬ್ಬಿಸಲು ಯತ್ನಿಸುವ ಯತ್ನಗಳನ್ನು ಆರಂಭದಲ್ಲಿಯೇ ಪತ್ತೆಹಚ್ಚುವಂತೆ ತಂತ್ರಜ್ಞಾನವನ್ನು ವಿನ್ಯಾಸಗೊಳಿಸಲಾಗಿದೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ