
ಮಾಜಿ ಕೇಂದ್ರ ಸಚಿವ, ದಿವಂಗತ ಬಿ. ಶಂಕರಾನಂದ ಅವರು ಏಳು ಬಾರಿ ಸಂಸದರಾಗಿ ಪ್ರತಿನಿಧಿಸಿದ ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಚಿಕ್ಕ ವಯಸ್ಸಿನಲ್ಲಿಯೇ ನಾನು ಸಂಸದೆಯಾಗಿ ಆಯ್ಕೆಯಾಗಿದ್ದು ನನ್ನ ಸೌಭಾಗ್ಯ. ಅವರ ವ್ಯಕ್ತಿತ್ವ ಅವರ ಪರಿಚಯ ಇಂದಿಗೂ ಬೆಳಗಾವಿಯ ಜಿಲ್ಲೆಯ ಹಳ್ಳಿಗಳಿಂದ ದೆಹಲಿಯವರೆಗೂ ಹಚ್ಚಹಸಿರಾಗಿದೆ. ಚಿಕ್ಕೋಡಿ ಲೋಕಸಭೆ ಕ್ಷೇತ್ರವನ್ನು ಇಂದಿಗೂ ಅವರ ಹೆಸರಿನಲ್ಲಿ ದೆಹಲಿಯಲ್ಲಿ ಗುರುತಿಸಲಾಗುತ್ತದೆ
ಈ ಸಂದರ್ಭದಲ್ಲಿ ಬಿ.ಶಂಕರಾನಂದ ಅವರ ಸುಪುತ್ರ ಪ್ರದೀಪ್ ಕಣಗಲಿ, ಪುತ್ರಿ ಚಂದ್ರಮ್ಮ ಕಣಗಲಿ ಹಾಗೂ ಅವರ ಕುಟುಂಬ ಸದಸ್ಯರು, ಮಾಜಿ ರಾಜ್ಯಸಭಾ ಸದಸ್ಯ, ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಮಾಜಿ ಸಂಸದರಾದ ರಮೇಶ ಕತ್ತಿ, ಶಾಸಕರಾದ ಆಸೀಫ್ ಸೇಠ್, ಅಭಯ ಪಾಟೀಲ, ಮಾಜಿ ಶಾಸಕ ಫಿರೋಜ್ ಸೇಠ್ ಅವರು ಸೇರಿ ಅನೇಕರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ ಬೆಳಗಾವಿ

