ಮೊಳಕಾಲ್ಮುರು : ಮೂರು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ ಮಾಡಿದರು.
ಇಲ್ಲಿನ ಬಸ್ ನಿಲ್ದಾಣದಲ್ಲಿ ಸೋಮವಾರ ನಡೆದ ಸಂಭ್ರಮಾಚರಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಹರ್ಷ ವ್ಯಕ್ತ ಪಡಿಸಿ ಪ್ರಧಾನಿ ಮೋದಿ,ಗೃಹ ಸಚಿವ ಅಮಿತ್ ಶಾ,ನಿತಿನ್ ನಬಿ ಅವರಿಗೆ ಜೈ ಘೋಷಣೆಗಳು ಕೂಗಿದರು.
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಪಿ.ಎಂ. ಮಂಜುನಾಥ್ ಮಾತನಾಡಿ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ ಸೇರಿ ಮೂರು ರಾಜ್ಯಗಳಲ್ಲಿ ಬಿಜೆಪಿ ಅಭೂತ ಪೂರಾ ಗೆಲುವು ಸಾಧಿಸಿ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ನರೇಂದ್ರ ಮೋದಿಯವರ ಅಭಿವೃದ್ಧಿಯನ್ನು ಮೆಚ್ಚಿ ದೇಶದ ಜನತೆ ಬಿಜೆಪಿಯನ್ನು ಕೈ ಹಿಡಿದಿದ್ದಾರೆ.ಈ ಗೆಲುವಿಂದಾಗಿ ಪಕ್ಷ ಗಟ್ಟಿಯಾಗಿದೆ ಎನ್ನುವುದನ್ನು ಸಾಬೀತು ಪಡಿಸಿದೆ.ಇದು ಮೋದಿಯವರ ಕೈ ಬಲಪಡಿಸಿದಂತಾಗಿದೆ ದೇಶ ಇನ್ನಷ್ಟು ಅಭಿವೃದ್ಧಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರಾದ ಶ್ರೀರಾಮರೆಡ್ಡಿ,ಪಕ್ಷದ ಹಿರಿಯ ಮುಖಂಡರಾದ ಡಿ.ಎಂ..ಈಶ್ವರಪ್ಪ,ಟಿ.ಟಿ.ರವಿ. ಸಿದ್ದಣ್ಣ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮಣ,ಉಪಾಧ್ಯಕ್ಷ ತಿಪ್ಪೇಸ್ವಾಮಿ, ಭೀಮಣ್ಣ, ಮಂಜಣ್ಣ,ಡಿಶ್ ರಾಜು, , ಪ್ರಧಾನ ಕಾರ್ಯದರ್ಶಿಗಳಾದ ನೇರ್ಲಹಳ್ಳಿ ಪ್ರಭಾಕರ ಹರೀಶ್ ಕಡೆತೋಟ,ರಮೇಶ್ ದಳವಾಯಿ, ಮಂಜು, ನಾಗರಾಜ್,ಜಿ.ಎಲ್.ತಿಪ್ಪೆಸ್ವಾಮಿ,ಮರಿಸ್ವಾಮಿ, ಕುಮಾರ್ ಸ್ವಾಮಿ, ರಾಮಾಂಜನೇಯ, ಹರೀಶ್ ಪಾಳೇಗಾರ, ಸಾಗರ್,ಬಸವರಾಜ್, ಚಿತ್ತಯ್ಯ ಇದ್ದರು.
ವರದಿ : ಪಿಎಂ ಗಂಗಾಧರ

