LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಡಿ.ಕೆ. ಶಿವಕುಮಾರ್‌ ಕಚೇರಿಗೆ ಬಾಂಬ್‌ ಬೆದರಿಕೆ 

Advertisement
ಬೆಂಗಳೂರು : ಡಿಸಿಎಂ ಡಿ.ಕೆ. ಶಿವಕುಮಾರ್‌ ಕಚೇರಿ ಹಾಗೂ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದುಷ್ಕರ್ಮಿಗಳು ಬಾಂಬ್‌ ಬೆದರಿಕೆ ಒಡ್ಡಿರುವ ಘಟನೆ ಶನಿವಾರ ನಡೆದಿದೆ.ಇ-ಮೇಲ್‌ ಮೂಲಕ ಬೆದರಿಕೆ ಪತ್ರ ಬಂದು ತಲುಪಿದ್ದು ವಿಮಾನ ನಿಲ್ಧಾಣದಲ್ಲಿ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ.

ಇ ಮೇಲ್‌ ಪ್ರತಿ ತಲುಪಿದೊಡನೇ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ತಪಾಸಣೆ ಕೈಗೊಂಡಿದ್ದಾರೆ. ಶ್ವಾನ ಪಡೆ, ಬಾಂಬ್‌ ಪತ್ತೆ ಮತ್ತು ನಿಷ್ಕ್ರಿಯ ದಳಗಳು ಪರಿಶೀಲನೆ ನಡೆಸಿದೆ. ಮೇಲ್ನೋಟಕ್ಕೆ ಇದೊಂದು ಹುಸಿ ಬಾಂಬ್‌ ಬೆದರಿಕೆ ಪತ್ರ ಎಂದು ತಿಳಿದುಬಂದಿದ್ದು, ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ.

ಟರ್ಮಿನಲ್‌ ಮ್ಯಾನೇಜರ್‌ ಅವರ ಇಮೇಲ್‌ ವಿಳಾಸಕ್ಕೆ ನಿನ್ನೆ ರಾತ್ರಿ ಇ ಮೇಲ್‌ ಕಳುಹಿಸಲಾಗಿತ್ತು. ಇ ಮೇಲ್‌ ನಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡು ಟರ್ಮಿನಲ್‌ ಗಳಲ್ಲಿ 4 ಸುಧಾರಿತ ಸ್ಪೋಟಕಗಳನ್ನು ಇಡಲಾಗಿದೆ.

ಇವುಗಳು ಸುಮಾರು 11.00 ಗಂಟೆಗೆ ಸ್ಪೋಟಗೊಳ್ಳಲಿವೆ ಎಂದು ಉಲ್ಲೇಖಿಸಲಾಗಿತ್ತು. ಅಷ್ಟೇ ಅಲ್ಲದೇ, ಇವುಗಳು ಸ್ಪೋಟಗೊಂಡ ಕೆಲವೇ ಹೊತ್ತಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಕಚೇರಿಯಲ್ಲೂ ಸ್ಪೋಟ ನಡೆಯಲಿದೆ ಎಂದು ಹೇಳಲಾಗಿತ್ತು.

ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ಕಚೇರಿಯಲ್ಲಿಯೂ ಸಹ ಪೊಲೀಸರು ತಪಾಸಣೆ ನಡೆಸಿದ್ದಾರೆ. ಅಲ್ಲಿಯೂ ಸಹ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡು ಬರದ ಕಾರಣ ಇದೊಂದು ಹುಸಿಬಾಂಬ್‌ ಬೆದರಿಕೆ ಎಂಬುದು ಮನದಟ್ಟಾಗಿದೆ.

ಇತ್ತೀಚಿಗೆ ಇಡೀ ದೇಶದಲ್ಲಿ ಹುಸಿ ಬಾಂಬ್‌ ಬೆದರಿಕೆ ಪ್ರಕರಣಗಳು ಹೆಚ್ಚುತ್ತಿರುವುದು ಪೊಲೀಸರಿಗೂ ಸಹ ತಲೆನೋವಾಗಿ ಪರಿಣಮಿಸಿದೆ.

 

 
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕ್ರಿಕೆಟರ್ ಜತೆ ಡೇಟಿಂಗ್ ವದಂತಿ ತಳ್ಳಿ ಹಾಕಿದ ನಟಿ ಮೃನಾಲ್ ಥಾಕೂರ್ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಸಚಿವರಿಗೆ ಮನವಿದೇವದತ್ತ ಪಡಿಕಲ್ ಸುಂದರ ಶತಕಕರಡಿ ದಾಳಿಗೆ ರೈತ ಬಲಿ ಯುಪಿಐ ಸೇವೆ ಸಂಪೂರ್ಣ ಉಚಿತ : ಯಾವುದೇ ರೀತಿಯ ವಹಿವಾಟು ಶುಲ್ಕ ಇರುವುದಿಲ್ಲಟಾಕ್ಸಿಕ್ ಟ್ರೈಲರ್ ಔಟ್ : ದ್ವಿ ಪಾತ್ರದಲ್ಲಿ ಮಿಂಚಿದ ಯಶ್, ಇಲ್ಲದೆ ಲಿಂಕ್ ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಪೋಕ್ಸೋ, ಬಾಲ್ಯವಿವಾಹ ನಿಷೇದ ಕಾಯಿದೆಗಳ ಜಾಗೃತಿ ಕಾರ್ಯಕ್ರಮಸಿಟ್ಟು ತ್ಯಾಗ ಮಾಡಿದ್ರೆ ಮುಂದೆ ಸಿಎಂ ಆಗ್ತೀಯಾ : ಸಚಿವ ವಿಜಯಾನಂದ ಕಾಶಪ್ಪನವರ್‌ಗೆ ಸಿದ್ದನಕೊಳ್ಳ ಶ್ರೀಗಳ ಸ್ಫೋಟಕ ಭವಿಷ್ಯಶೀಘ್ರದಲ್ಲೇ ಸಮಾನ ಮನಸ್ಕರ ಪಕ್ಷ ಸ್ಥಾಪನೆ : ಚೇತನ್ ಅಹಿಂಸಾ ಸಿಟ್ಟನ್ನು ಬಿಟ್ಟರೆ ಮುಂದೆ ಸಿಎಂ ಆಗ್ತಿಯಾ : ಕಾಶಪ್ಪನವರ್ ಗೆ ಸಿದ್ದನಕೊಳ್ಳ ಶ್ರೀಗಳ ಸಲಹೆ