LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಫೋನ್ ಪೇ ಮೂಲಕ ಲಂಚ : ಮೂವರು ಹೆಡ್ ಕಾನ್ಸ್ ಟೇಬಲ್ ಹಾಗೂ ಓರ್ವ ಹೋಂ ಗಾರ್ಡ್

Advertisement

ಧಾರವಾಡ: ಮರಳು ಸಾಗಣೆ ಲಾರಿ ಬಿಡಲು ಚಾಲಕನಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮೂವರು ಹೆಡ್ ಕಾನ್ಸ್ ಟೇಬಲ್ ಹಾಅಗೂ ಓರ್ವ ಹೋಂ ಗಾರ್ಡ್ ಸೇರಿ ನಾಲ್ವರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಫೋನ್ ಪೇ ಮೂಲಕ 30,000 ರೂ. ಲಂಚ ಪಡೆದ ಆರೋಪದಡಿಯಲ್ಲಿ ಮೂವರು ಪೊಲೀಸ್ ಹೆಡ್ ಕಾನ್‌ಸ್ಟೇಬಲ್‌ಗಳು ಹಾಗೂ ಓರ್ವ ಗೃಹರಕ್ಷಕ ಸಿಬ್ಬಂದಿಯನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.

ಕೊಪ್ಪಳ ಮೂಲದ ಲಾರಿ ಚಾಲಕ ಹನುಮಂತ ಎಂಬುವವರು ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಮರಳು ಲಾರಿ ಬಿಡಲು ತಮ್ಮಿಂದ ಲಂಚ ಪಡೆಯಲಾಗಿದೆ ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಆರೋಪಿಗಳು ಯಾವುದೇ ಭಯವಿಲ್ಲದೆ ಡಿಜಿಟಲ್ ರೂಪದಲ್ಲಿ 30,000 ರೂ. ಲಂಚದ ಹಣವನ್ನು ಪಡೆದುಕೊಂಡಿದ್ದರು.

ಖಚಿತ ಮಾಹಿತಿ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ಆನ್‌ಲೈನ್ ಡಿಜಿಟಲ್ ದಾಖಲೆಗಳು ಹಾಗೂ ನಾಲ್ವರ ಮೊಬೈಲ್‌ಗಳನ್ನು ಪರಿಶೀಲಿಸಿದ್ದರು. ಪ್ರಕರಣದಲ್ಲಿ ಧಾರವಾಡ ನಗರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಹಸನ್‌ಸಾಬ ನದಾಫ್, ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಇಮಾಮ್ ಅತ್ತಾರ್, ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಗಿರೀಶ ಮನ್ಸೂರು, ಹೋಮ್‌ಗಾರ್ಡ್ ಸಿಬ್ಬಂದಿ ಇಕ್ಬಾಲ್ ನದಾಫ್ ನನ್ನು ಬಂಧಿಸಿದ್ದಾರೆ. ಧಾರವಾಡ ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಾರಿಗೆ ನಿಗಮಗಳ ಮೇಲೆ 'ಶಕ್ತಿ'ಯ ಆರ್ಥಿಕ ಹೊರೆ: 5,650 ಕೋಟಿ ರೂ. ಬಾಕಿ ಪಾವತಿಗೆ ಸವಾಲು ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ-ಧಾರವಾಡ ಸೇರಿ 5 ಕಡೆ ಜಾಗತಿಕ ತಂತ್ರಜ್ಞಾನ ಕೇಂದ್ರ ಸ್ಥಾಪನೆ ಸಿಎನ್‌ಜಿ ಬೆಲೆ ಮತ್ತೆ ಹೆಚ್ಚಳ : ಕೆಜಿಗೆ 3.89 ರೂ. ಏರಿಕೆ ಪ್ರತಿ ತಿಂಗಳ ಎಲ್ಲಾ ಶನಿವಾರಗಳಂದು 'ಪ್ರಜಾಸೇವಾ ಅಭಿಯಾನ : ಮಾರ್ಗಸೂಚಿ ಬಿಡುಗಡೆ ಲಾಡ್ಸ್ ಟೆಸ್ಟ್ : ಪಾಕಿಸ್ತಾನ 5 ವಿಕೆಟ್ ಗೆ 91ಶ್ರೀ ವೆಂಕಟೇಶ್ವರ ಪ್ರೌಢಶಾಲೆ ಪರಿಸರದ ಮಾಹಿತಿ ಕಾರ್ಯಗಾರ ಕೊಪ್ಪಳ ನಗರಾಭಿವೃದ್ದಿ ಪ್ರಾಧಿಕಾರದಲ್ಲಿ 8.89 ಕೋಟಿ ರೂ. ಹಗರಣ: ದಂಪತಿ ಸೇರಿ ಮೂವರು ಅರೆಸ್ಟ್ ಫೋನ್ ಪೇ ಮೂಲಕ ಲಂಚ : ಮೂವರು ಹೆಡ್ ಕಾನ್ಸ್ ಟೇಬಲ್ ಹಾಗೂ ಓರ್ವ ಹೋಂ ಗಾರ್ಡ್ಹುಬ್ಬಳ್ಳಿಯಲ್ಲಿ ಹಾಡಹಗಲೇ ಯುವಕನ ಬರ್ಬರ ಹತ್ಯೆ :ನಡುರಸ್ತೆಯಲ್ಲೇ ಕೊಚ್ಚಿ ಕೊಂದ ದುಷ್ಕರ್ಮಿಗಳುಹೆಂಡತಿಯ ಮೇಲಿನ ಸಿಟ್ಟಿಗೆ ಪುಟ್ಟ ಮಗುವನ್ನು ಮುಳುಗಿಸಿ ಕೊಲೆಗೈದ ತಂದೆ