ಮಾನ್ವಿ : ಪಟ್ಟಣದ ಶ್ರೀ ವೆಂಕಟೇಶ್ವರ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ)ಮಾನ್ವಿ ಇವರ ಸಂಯುಕ್ತಾಶ್ರಯದಲ್ಲಿ ಪರಿಸರದ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಯೋಜನಾಧಿಕಾರಿಯಾದ ಕಲ್ಮೇಶ ಮಾತನಾಡಿ ಪರಿಸರವನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಕಾಪಾಡಿಕೊಂಡು ಹೋಗಬೇಕು. ಪರಿಸರವನ್ನು ಉಳಿಸಿ ಬೆಳಸುವ ಕೆಲಸ ಮಾಡಬೇಕು ಎಂದು ಹೇಳಿದರು. ಇನ್ನೊರ್ವ ಮುಖ್ಯ ಅಥಿತಿಯಾದ ಬಸವರಾಜ್ ಕಠಾರಿ ಕೃಷಿ ಮೇಲ್ವಿಚಾರಕ ಮತ್ತು ರವಿಚಂದ್ರ ಮೇಲ್ವಿಚಾರಕರು ಮಾತನಾಡಿ ಮಾನವನಿಂದ ಇಂದು ಪರಿಸರ ಹಾಳಾಗುತ್ತಿದೆ. ಪರಿಸರ ಮಾಲಿನ್ಯದಲ್ಲಿ ವಾಯುಮಾಲಿನ್ಯ, ಜಲಮಾಲಿನ್ಯ, ಶಬ್ದಮಾಲಿನ್ಯ ಉಂಟಾಗುತ್ತದೆ. ಹಾಗಾಗಿ ಪರಿಸರದ ಬಗ್ಗೆ ಕಾಳಜಿವಹಿಸಿಕೊಂಡು ಜವಾಬ್ದಾರಿಯುತವಾಗಿ ಬದುಕಬೇಕು ಎಂದು ಹೇಳಿದರು. ಕಾರ್ಯಕ್ರಮದ ವೇದಿಕೆಯ ಅಧ್ಯಕ್ಷತೆಯನ್ನು ಚಂದ್ರಶೇಖರ ಪಾಟೀಲ್ ವಹಿಸಿ ಮಾತನಾಡಿ ಪರಿಸರವನ್ನು ನಾವು ಉಳಿಸಿದರೆ ನಮ್ಮನ್ನು ಪರಿಸರ ಉಳಿಸುತ್ತದೆ. ನಾಡನ್ನು ಬೆಳಸಿ ಕಾಡನ್ನು ಉಳಿಸಿ ಹಾಗೂ ಮರವಿದ್ದರೆ ಮಳೆ ಮಳೆ ಇದ್ದಡೆ ಬೆಳೆ ಪ್ರತಿಯೊಬ್ಬರು ಒಂದೊಂದು ಗಿಡವನ್ನು ಬೆಳಸಿ ಎಂದು ಹೇಳಿದರು. ಕಾರ್ಯಕ್ರಮದ ಯೋಜನಾಧಿಕಾರಿಗಳಾದ ಕಲ್ಮೇಶ ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಕಿವಿ ಮಾತು ಹೇಳಿದರು.ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಪ್ರಬಂಧವನ್ನು ಏರ್ಪಡಿಸಲಾಯಿತು. ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಬಹುಮಾನ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆ ಕಾರ್ಯದರ್ಶಿ ಡಾ. ವೆಂಕಟೇಶ ಓಲೇಕಾರ ಶಿಕ್ಷಕಿಯಾರದ ರೂಬಿಯ ಅಮರಮ್ಮ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ಆಂಜನೇಯ ನಸಲಾಪುರ


