LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ತಾಲ್ಲೂಕು ಆಡಳಿತದಿಂದ ಬ್ರಹ್ಮಶ್ರೀ ನಾರಾಯಣಗುರು, ಶರಣ ನುಲಿಯ ಚಂದಯ್ಯನವರ ಜಯಂತಿ ಆಚರಣೆ

Advertisement

ತುರುವೇಕೆರೆ: ತಾಲ್ಲೂಕು ಆಡಳಿತ, ತಾಲ್ಲೂಕು ಈಡಿಗ ಸಮಾಜ, ತಾಲ್ಲೂಕು ಕುಳುವ ಸಮಾಜದ ಸಂಯುಕ್ತಾಶ್ರಯದಲ್ಲಿ ಇಂದು ತಾಲ್ಲೂಕು ಕಛೇರಿ ಆವರಣದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅವರ 172ನೇ ಹಾಗೂ ಶರಣ ನುಲಿಯ ಚಂದಯ್ಯನವರ 919ನೇ ಜಯಂತ್ಯೋತ್ಸವವನ್ನು ಆಚರಿಸಲಾಯಿತು. ಗುರುದ್ವಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ದೀಪ ಬೆಳಗಿಸುವ ಮೂಲಕ ತಹಸೀಲ್ದಾರ್ ಕುಂಇ ಅಹಮದ್ ಜಯಂತಿಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ತಹಸೀಲ್ದಾರ್ ಕುಂಇ ಅಹಮದ್, ಒಂದೇ ದಿನ ಇಬ್ಬರು ಮಹಾನ್ ಸಂತರ ಜನ್ಮದಿನವನ್ನು ಆಚರಿಸುತ್ತಿರುವುದು ಸಂತೋಷವಾಗುತ್ತಿದೆ. ಬ್ರಹ್ಮಶ್ರೀ ನಾರಾಯಣಗುರು ಅವರು ಹಾಗೂ ಶರಣ ನುಲಿಯ ಚಂದಯ್ಯನವರು ಶೋಷಿತ ಸಮುದಾಯದ ಏಳಿಗೆಗೆ ಶ್ರಮಿಸಿದವರು, ಜಾತಿ ವ್ಯವಸ್ಥೆಯ ವಿರುದ್ದ ಹೋರಾಟ ನಡೆಸಿದವರು, ಬಸವಣ್ಣನವರ ತತ್ವಗಳಡಿಯಲ್ಲಿ ತಮ್ಮದೇ ಆದ ತತ್ವ ಆದರ್ಶಗಳನ್ನು ಸಮಾಜಕ್ಕೆ ನೀಡಿದ ಮಹಾನ್ ದಾರ್ಶನಿಕರು ಎಂದು ಬಣ್ಣಿಸಿದರು.

news_1787910375_1_277.webp

 

ಬ್ರಹ್ಮಶ್ರೀ ನಾರಾಯಣಗುರುಗಳು ಕೇರಳದಲ್ಲಿ ಜನಿಸಿ, ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿ ಎಲ್ಲಾ ಸಮುದಾಯದ ಸಮಾನತೆಗೆ ದುಡಿದವರು. ದೇವಾಲಯಕ್ಕೆ ಪ್ರವೇಶ ಎಲ್ಲರಿಗೂ ಮುಕ್ತವಾಗಬೇಕು, ಎಲ್ಲರೂ ದೇವಾಲಯಕ್ಕೆ ಹೋಗಿ ಭಗವಂತನ ದರ್ಶನ ಮಾಡಬೇಕೆಂಬ ಸಂಕಲ್ಪದಿಂದ ಬಹುದೊಡ್ಡ ಹೋರಾಟ ನಡೆಸಿ ಸಮಾನತೆಯ ಸಂದೇಶ ಸಾರಿದ ಮಹನೀಯರು. ಶರಣ ನುಲಿಯ ಚಂದಯ್ಯನವರು ಸರಳ ಜೀವನ ಸಾಗಿಸುತ್ತಾ ವಚನಗಳ ಮೂಲಕ ಸಹಬಾಳ್ವೆ, ಸಮಾನತೆ, ಶ್ರಮದ ಬದುಕಿಗೆ ಮೇಲ್ಪಂಕ್ತಿ ಹಾಕಿದ ಮಹಾನ್ ಶರಣರು ಎಂದರು. 

news_1787910375_2_141.webp

 

ತಾಲ್ಲೂಕು ಈಡಿಗ ಸಮಾಜದ ಅಧ್ಯಕ್ಷ ಎಸ್.ಎಲ್.ಎನ್. ರಾಜಣ್ಣ, ಉಪಾಧ್ಯಕ್ಷ ಉಮೇಶ್, ಕಾರ್ಯದರ್ಶಿ ಗೋಪಾಲ್, ಆರ್ಯ ಈಡಿಗರ ಸಂಘದ ಜಿಲ್ಲಾ ನಿರ್ದೇಶಕ ಮುಗಳೂರು ಮಂಜುನಾಥ್, ಗ್ರಾಪಂ ಮಾಜಿ ಅಧ್ಯಕ್ಷ ದೇವರಾಜ್, ಕಾಂಗ್ರೆಸ್ ಒಬಿಸಿ ಅಧ್ಯಕ್ಷ ಚೇತನ್ ಕುಮಾರ್, ಶೋಭಕುಮಾರ್, ಅನಿಲ್ ಕುಮಾರ್, ವೆಂಕಟೇಶ್, ತಾಲ್ಲೂಕು ಕುಳುವ ಸಮುದಾಯದ ಅಧ್ಯಕ್ಷ ಶ್ರೀನಿವಾಸ್, ಗೌರವಾಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷರಾದ ವಿಠಲ್ ಕುಮಾರ್, ಶಿವರಾಜ್, ರೇಣುಕಪ್ಪ, ಖಜಾಂಚಿ ಕರಿಯಪ್ಪ, ಸಹಕಾರ್ಯದರ್ಶಿ ಕುಮಾರ್, ಮಾಜಿ ಗೌರವಾಧ್ಯಕ್ಷ ರಾಮಾಂಜನಪ್ಪ, ಸಂಚಾಲಕರಾದ ಅಶೋಕ್, ಮಧು, ಮುನಿಸಿದ್ದಪ್ಪ, ಗೋವಿಂದಪ್ಪ, ಕಿರಣ್, ಪರಮೇಶ್, ಗಿರೀಶ್, ನವೀನ್ ಕುಮಾರ್ ಹಾಗೂ ದಬ್ಬೇಘಟ್ಟ ನಾಡಕಛೇರಿಯ ಉಪತಹಸೀಲ್ದಾರ್ ಶಿವಕುಮಾರ್, ಕಂದಾಯ ಇಲಾಖೆಯ ವತ್ಸಲ ಮುಂತಾದವರಿದ್ದರು.

ವರದಿ: ಗಿರೀಶ್ ಕೆ ಭಟ್

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಾರಿಗೆ ನಿಗಮಗಳ ಮೇಲೆ 'ಶಕ್ತಿ'ಯ ಆರ್ಥಿಕ ಹೊರೆ: 5,650 ಕೋಟಿ ರೂ. ಬಾಕಿ ಪಾವತಿಗೆ ಸವಾಲು ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ-ಧಾರವಾಡ ಸೇರಿ 5 ಕಡೆ ಜಾಗತಿಕ ತಂತ್ರಜ್ಞಾನ ಕೇಂದ್ರ ಸ್ಥಾಪನೆ ಸಿಎನ್‌ಜಿ ಬೆಲೆ ಮತ್ತೆ ಹೆಚ್ಚಳ : ಕೆಜಿಗೆ 3.89 ರೂ. ಏರಿಕೆ ಪ್ರತಿ ತಿಂಗಳ ಎಲ್ಲಾ ಶನಿವಾರಗಳಂದು 'ಪ್ರಜಾಸೇವಾ ಅಭಿಯಾನ : ಮಾರ್ಗಸೂಚಿ ಬಿಡುಗಡೆ ಲಾಡ್ಸ್ ಟೆಸ್ಟ್ : ಪಾಕಿಸ್ತಾನ 5 ವಿಕೆಟ್ ಗೆ 91ಶ್ರೀ ವೆಂಕಟೇಶ್ವರ ಪ್ರೌಢಶಾಲೆ ಪರಿಸರದ ಮಾಹಿತಿ ಕಾರ್ಯಗಾರ ಕೊಪ್ಪಳ ನಗರಾಭಿವೃದ್ದಿ ಪ್ರಾಧಿಕಾರದಲ್ಲಿ 8.89 ಕೋಟಿ ರೂ. ಹಗರಣ: ದಂಪತಿ ಸೇರಿ ಮೂವರು ಅರೆಸ್ಟ್ ಫೋನ್ ಪೇ ಮೂಲಕ ಲಂಚ : ಮೂವರು ಹೆಡ್ ಕಾನ್ಸ್ ಟೇಬಲ್ ಹಾಗೂ ಓರ್ವ ಹೋಂ ಗಾರ್ಡ್ಹುಬ್ಬಳ್ಳಿಯಲ್ಲಿ ಹಾಡಹಗಲೇ ಯುವಕನ ಬರ್ಬರ ಹತ್ಯೆ :ನಡುರಸ್ತೆಯಲ್ಲೇ ಕೊಚ್ಚಿ ಕೊಂದ ದುಷ್ಕರ್ಮಿಗಳುಹೆಂಡತಿಯ ಮೇಲಿನ ಸಿಟ್ಟಿಗೆ ಪುಟ್ಟ ಮಗುವನ್ನು ಮುಳುಗಿಸಿ ಕೊಲೆಗೈದ ತಂದೆ