LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ಶೀಘ್ರವೇ ಸಂಪುಟ ವಿಸ್ತರಣೆ ಅಸಮಾಧಾನ ಶಮನ : ಲಕ್ಷ್ಮಣ್ ಸವದಿ

Advertisement

 ಶಿರಸಿ: ರಾಜ್ಯ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದ ಸಮತೋಲನ ಕಾಯ್ದುಕೊಳ್ಳುವಾಗ ಕೆಲವರಿಗೆ ಸಚಿವ ಸ್ಥಾನ ಕೈತಪ್ಪುವುದು ಸ್ವಾಭಾವಿಕ. ಇದರಿಂದ ಸಣ್ಣಮಟ್ಟದ ಅಸಮಾಧಾನ ಸೃಷ್ಟಿಯಾಗಿದ್ದರೂ, ಮುಂಬರುವ ನಾಲ್ಕೈದು ದಿನಗಳಲ್ಲಿ ಎಲ್ಲವೂ ತಿಳಿಯಾಗಲಿದೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ್ ಸವದಿ ಹೇಳಿದ್ದಾರೆ. 

ಶಿರಸಿಯಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಸಂಪುಟದಲ್ಲಿ ಸೇರ್ಪಡೆಗೊಳಿಸಲು ಕೇವಲ 34 ಸಚಿವ ಸ್ಥಾನಗಳ ಲಭ್ಯತೆಯಷ್ಟೇ ಇರುತ್ತದೆ. 

ಹೀಗಾಗಿ ಎಲ್ಲರಿಗೂ ಪ್ರಾತಿನಿಧ್ಯ ನೀಡುವಾಗ ಕೆಲವರಿಗೆ ಅವಕಾಶ ಸಿಗುವುದಿಲ್ಲ. ಈ ಬಗ್ಗೆ ಹಿರಿಯ ಶಾಸಕ ಎಚ್.ಕೆ. ಪಾಟೀಲ್ ಅವರಾಗಲಿ ಅಥವಾ ಇತರರಾಗಲಿ ಯಾವುದೇ ಬಹಿರಂಗ ಅಸಮಾಧಾನ ಹೊರಹಾಕಿಲ್ಲ" ಎಂದರು.

ಖಾತೆ ಹಂಚಿಕೆ ಹಾಗೂ ಬಿಡದಿ ಟೌನ್‌ಶಿಪ್ ಕುರಿತು ಸ್ಪಷ್ಟನೆ:

ಹೊಸದಾಗಿ ಸೇರ್ಪಡೆಯಾದ ಸಚಿವರಿಗೆ ಖಾತೆ ಹಂಚಿಕೆ ವಿಳಂಬವಾಗುತ್ತಿರುವ ಕುರಿತು ಉತ್ತರಿಸಿದ ಅವರು, "ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಎರಡೂವರೆ ತಿಂಗಳುಗಳ ಕಾಲ ಖಾತೆ ಹಂಚಿಕೆಯಾಗಿರಲಿಲ್ಲ, ಆದರೂ ನಾವು ಸಚಿವರೆಂದೇ ಕಾರ್ಯನಿರ್ವಹಿಸುತ್ತಿದ್ದೆವು. ಈ ಬಾರಿ ಶೀಘ್ರದಲ್ಲೇ ಸೂಕ್ತ ಖಾತೆಗಳ ಹಂಚಿಕೆಯಾಗಲಿದೆ" ಎಂಬ ಭರವಸೆ ವ್ಯಕ್ತಪಡಿಸಿದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
​ಕಾಯಕವೇ ಕೈಲಾಸವೆಂದ ನಿಸ್ಸ್ವಾರ್ಥ ಸೇವಕ: ಶ್ರೀ ಶಿವಪ್ಪ ತಳವಾರ ಅವರಿಗೆ ಭಾವಪೂರ್ಣ ಶುಭಕೋರಿಕೆಪಕ್ಷ ಶಿಸ್ತಿಗೆ ಸವಾಲು: ಶಿವಾಜಿ ಮೇತ್ರೆ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷ ಉಚ್ಚಾಟನೆಇರಾನ್‌ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಗಂಭೀರ ಸ್ಥಿತಿ : ಅವರ ಹುತಾತ್ಮತೆಯ ಸುದ್ದಿ ಶೀಘ್ರಕರ್ನಾಟಕ ಹೈಕೋರ್ಟ್ ಗೆ 6 ನ್ಯಾಯಮೂರ್ತಿಗಳ ನೇಮಕಮುಂದಿನ 7 ವರ್ಷದವರೆಗೂ ಡಿ.ಕೆ ಶಿವಕುಮಾರ್ ಸಿಎಂ : ಲಕ್ಷ್ಮಣ್ ಸವದಿ ಐರ್ಯಲೆಂಡ್‌ಗೆ ೩೦೦ ರನ್‌ಗಳ ಗೆಲುವಿನ ಗುರಿಶ್ರೀಲಂಕಾ ಇಲೆವೆನ್ ಉತ್ತಮ ಮೊತ್ತಕಳಸಕೊಪ್ಪ ಸೇರಿದಂತೆ 8 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮ: ಜೆ ಟಿ ಪಾಟೀಲಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಕೋಟಿ ಕೋಟಿ ಹಣ ವಂಚನೆ ಕೇಸ್ : ಶಿವಾನಂದ ನೀಲಣ್ಣವರ ಇಡಿ ರೇಡ್ಹಾಡ ಹಾಗಲೇ ಗುಂಡಿಕ್ಕಿ ಕಾಂಗ್ರೆಸ್ ಮುಖಂಡ ಬರ್ಬರ ಹತ್ಯೆ