ಬೆಂಗಳೂರು : ಖಾತೆ ಹಂಚಿಕೆ ವಿಳಂಬದಿಂದಾಗಿ ಸದನದಲ್ಲಿ ಹೊಸ ಸಚಿವರ ತಯಾರಿಗೆ ಅಡ್ಡಿಯಾಗಲಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಳ್ಳಿಹಾಕಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಖಾತೆ ಹಂಚಿಕೆಗೆ ಇನ್ನೂ ಸಮಯವಿದ್ದು, ಆಗಸ್ಟ್ 15ರವರೆಗೆ ಕಾಲಾವಕಾಶವಿದೆ ಎಂದು ಸ್ಪಷ್ಟಪಡಿಸಿದರು.
ಆಗಸ್ಟ್ 13ರಂದು ಸಂತಾಪ ಸೂಚನೆ ಹಾಗೂ 14ರಂದು ನೂತನ ಸಚಿವರ ಪರಿಚಯ ಕಾರ್ಯಕ್ರಮ ನಡೆಯಲಿದೆ ಎಂದ ಅವರು, "ಯಡಿಯೂರಪ್ಪನವರು ಎಷ್ಟು ದಿನ ಒಬ್ಬರೇ ಸಿಎಂ ಆಗಿರಲಿಲ್ಲ? ಎಷ್ಟು ದಿನ ದೆಹಲಿಯಲ್ಲೇ ಉಳಿದುಕೊಂಡಿರಲಿಲ್ಲ?" ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
ಖಾತೆ ಹಂಚಿಕೆ ಶೀಘ್ರದಲ್ಲೇ ಆಗಲಿದ್ದು, ನಾಗೇಂದ್ರ ವಿಚಾರದಲ್ಲಿ ಬಿಜೆಪಿ ಹೋರಾಟ ಮಾಡಲು ಸ್ವತಂತ್ರವಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು. ಇದೇ ವೇಳೆ ತಮ್ಮಲ್ಲಿ ಬೇಸರವಿದೆ ಎಂಬ ವರದಿಗಳನ್ನು ಅಲ್ಲಗಳೆದ ಅವರು, "ನನಗೇನೂ ಬೇಸರವಾಗಿಲ್ಲ, ನಿಮಗೇನಾದರೂ ಬೇಸರವಾಗಿದೆಯೇ?" ಎಂದು ಮಾಧ್ಯಮದವರನ್ನೇ ಪ್ರಶ್ನಿ ಸಿದರು.


