LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ನಾನು ಡಿ.ಕೆ. ಶಿವಕುಮಾರ್ ಅವರ ಮನೆಮಗ ಇದ್ದಂತೆ ನಾನೇ ಸಿಎಂ ಇದ್ದ ಹಾಗೆ : ಶಿವಗಂಗಾ ಬಸವರಾಜ್

Advertisement

ದಾವಣಗೆರೆ: "ನಾನು ಸಿಎಂ ಡಿ.ಕೆ. ಶಿವಕುಮಾರ್ (Dk shivakumar ) ಅವರ ಮನೆಮಗ ಇದ್ದಂತೆ. ಶಿವನ ಮುಂದಿರುವ ಬಸವ ನಾನು, ನಾನೇ ಮುಖ್ಯಮಂತ್ರಿ ಇದ್ದ ಹಾಗೆ. ಮನೆಮಗನಿಗೆ ಅವರ ಆಶೀರ್ವಾದ ಸದಾ ಇದ್ದೇ ಇರುತ್ತದೆ" ಎಂದು ಚನ್ನಗಿರಿ ಕ್ಷೇತ್ರದ ಶಾಸಕ ಶಿವಗಂಗಾ ಬಸವರಾಜ್ (Shivaganga basavraj ) ಮಾರ್ಮಿಕವಾಗಿ ಹೇಳಿಕೆ ನೀಡಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಹಾಗೂ ಸಚಿವ ಸ್ಥಾನದ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡರು.

 ಪಕ್ಷದಲ್ಲಿ ಹಲವು ಹಿರಿಯ ಶಾಸಕರಿದ್ದು, ತಮಗೂ ಸಚಿವ ಸ್ಥಾನದ ನಿರೀಕ್ಷೆಯಿತ್ತು ಆದರೆ ಅವಕಾಶ ಲಭಿಸಿಲ್ಲ ಎಂದು ತಮ್ಮ ಮನದಾಳದ ಇಂಗಿತ ವ್ಯಕ್ತಪಡಿಸಿದರು.

ಸದ್ಯಕ್ಕೆ ಸಚಿವ ಸ್ಥಾನಕ್ಕಿಂತಲೂ ತಮ್ಮ ಚನ್ನಗಿರಿ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ತಿಳಿಸಿದ ಶಾಸಕರು, ತಾವು ಮೊದಲ ಬಾರಿಗೆ ಗೆದ್ದಿರುವುದರಿಂದ ಮುಂದೆ ಸಾಕಷ್ಟು ಅವಕಾಶಗಳಿವೆ ಎಂದರು. ರೈತರ ಕೋಟಾದಡಿ ಸಚಿವ ಸ್ಥಾನ ಕೇಳಿದ್ದು, ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ನೀಡಿದರೂ ಜವಾಬ್ದಾರಿಯಿಂದ ನಿಭಾಯಿಸುವುದಾಗಿ ಹೇಳಿದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೆ. ೫ ರಂದು ಭಾರತ- ಪಾಕಿಸ್ತಾನ ಪಂದ್ಯಮುಂಬೈಯಲ್ಲಿ ನಿರ್ಮಾಣವಾಗಿದೆ ನಟಿ ನಗ್ಮಾ ಮಿರಜಕರ ಕನಸಿನ ಮನೆಶ್ರೀ ವೆಂಕಟೇಶ್ವರ ಪ್ರೌಢ ಶಾಲೆಯಲ್ಲಿ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭಸ್ನ್ಯಾಪ್‌ಚಾಟ್‌'ಗೆ ಕಾಲಿಟ್ಟ ವಿದೇಶಾಂಗ ವ್ಯವಹಾರಗಳ ಸಚಿವಾಲಯಕಾಕ್ರೋಚ್ ಜನತಾ ಪಾರ್ಟಿಯಿಂದ ದೇಶಾದ್ಯಂತ ಕ್ಯಾ ಬೋಲ್ತಿ ಪಬ್ಲಿಕ್ ಅಭಿಯಾನ ಘೋಷಣೆತೆರಿಗೆ ಮತ್ತು ಇತರ ಕಾನೂನು ಮಸೂದೆ ಲೋಕಸಭೆಯಲ್ಲಿ ಅಂಗೀಕಾರ8 ಕಾಲು, ಮೂರು ಕಿವಿ, ಎರಡು ಬಾಲ ಮತ್ತು ಎರಡು ನಾಲಿಗೆ ಉಳ್ಳ ಆಡು ಮರಿ ಜನನನಾನು ಡಿ.ಕೆ. ಶಿವಕುಮಾರ್ ಅವರ ಮನೆಮಗ ಇದ್ದಂತೆ ನಾನೇ ಸಿಎಂ ಇದ್ದ ಹಾಗೆ : ಶಿವಗಂಗಾ ಬಸವರಾಜ್ಯಮಕನಮರಡಿಯಲ್ಲಿ ನಿಂತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ : ಚಾಲಕ ಪಾರು ಪಾಕ್ ವಿರುದ್ಧದ ಟೆಸ್ಟ್ ಸರಣಿಗೆ ಇಂಗ್ಲೆAಡ್ ತಂಡ ಪ್ರಕಟ