LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕಳಸಕೊಪ್ಪ ಸೇರಿದಂತೆ 8 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮ: ಜೆ ಟಿ ಪಾಟೀಲ

Advertisement

ಕಲಾದಗಿ: ಸುತ್ತಲಿನ ಹತ್ತಾರು ಹಳ್ಳಿಗಳ ರೈತರ ಜೀವನಾಡಿಯಾಗಿರುವ ಐತಿಹಾಸಿಕ ಕಳಸಕೊಪ್ಪ ಕೆರೆಯನ್ನು ತುಂಬಿಸುವ ಕನಸು ನನಸಾಗಿದೆ ಇದರಿಂದ ಈ ಭಾಗದ ರೈತರ ಸಂಭ್ರಮ ಇಮ್ಮಡಿಯಾಗಿದೆ.

 ಅಗಸ್ಟ್ 7ರಂದು ಬೀಳಗಿ ಶಾಸಕ ಜೆ ಟಿ ಪಾಟೀಲ  ಚಾಲನೆ ನೀಡಿದರು ಕಳಸಕೊಪ್ಪ ಸೇರಿದಂತೆ  ಬಾದಾಮಿ ತಾಲ್ಲೂಕಿನ ಎಂಟು ಕೆರೆಗಳನ್ನು ತುಂಬುವ ಕಾರ್ಯಕ್ಕೆ ಮರು ಚಾಲನೆ ನೀಡಿದ್ದರು ಅದರ ಪರಿಣಾಮ ಐತಿಹಾಸಿಕ ಕಳಸಕೊಪ್ಪ ಕೆರೆ ತುಂಬಿ ಹರಿಯಲು ಆರಂಭಿಸಿದೆ ಕೆರೆ ಕೋಡಿ ಬಿದ್ದು ಹರಿದು ಬರುತ್ತಿರುವ ನೀರು ಹಳ್ಳಕ್ಕೆ ಬರುತ್ತಿದೆ ಕೆರೆ ತುಂಬಿರುವುದರಿಂದ ಅಂತರ್ಜಲಮಟ್ಟ ಹೆಚ್ಚಳಗೊಂಡು ರೈತರ ಪಂಪ್‌ಸೆಟ್‌ಗಳಿಗೆ ನೀರು ಬರಲಿದೆ ಎಂದು ಸ್ಥಳೀಯರು ಹರ್ಷ ವ್ಯಕ್ತಪಡಿಸುತ್ತಾರ

ಕಳಸಕೊಪ್ಪ ಕೆರೆಗೆ ನೀರು ತುಂಬಿಸುವ ದಶಕಗಳ ಕನಸಿನ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ ಈ ಯೋಜನೆಯು ಅಂದಾಜು 4.5 ಕೋಟಿ ರೂ. ವೆಚ್ಚದಲ್ಲಿ ರೂಪುಗೊಂಡಿದ್ದು ಸ್ಥಳೀಯ ಕೃಷಿ ಮತ್ತು ಕುಡಿಯ ನೀರಿನ ಅವಶ್ಯಕತೆಗಳನ್ನು ಪೂರೈಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ.
     
ಕಳೆದ 20 ವರ್ಷಗಳಲ್ಲಿ ಒಮ್ಮೆ ಮಾತ್ರ ಭಾರಿ ಮಳೆಗೆ ಕೆರೆ ತುಂಬಿ ಹರಿದಿದೆ. ಈಗ ಕಾಲುವೆ ಮೂಲಕ ಘಟಪ್ರಭಾ ನೀರು ತುಂಬಿಸಿ ಕೆರೆ ತುಂಬಿಸಲಾಗಿದೆ ಇಲ್ಲಿಯವರೆಗೆ ಮಳೆ ಬಂದರೆ ಮಾತ್ರ ಕೆರೆಗೆ ನೀರು ಎಂಬ ಪರಿಸ್ಥಿತಿ ಇತ್ತು  ಈಗ ಕಾಲುವೆಯಲ್ಲಿ ನೀರು ಹರಿದರೆ ಕೆರೆಗೆ ನೀರು ತುಂಬುತ್ತದೆ ಎಂದು ಸ್ಥಳೀಯ ರೈತರು ಹರ್ಷ ವ್ಯಕ್ತಪಡಿಸುತ್ತಾರೆ.

ಕೆರೆಗೆ ನೀರು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸುವುದು ರೈತರ ನೀರಾವರಿ ಮತ್ತು ಸ್ಥಳೀಯ ಜನರ ನೀರಿನ ಸಮಸ್ಯೆ ನಿವಾರಣೆ. ಈ ಭಾಗದಲ್ಲಿ ಮೂರು ಸಾವಿರ ಎಕರೆ ಬರಡು ಭೂಮಿಯನ್ನು ನೀರಾವರಿ ಮಾಡುವ ಉದ್ದೇಶದಿಂದಲೇ  ಕೆರೆಗೆ ನೀರು ತುಂಬಿಸಲಾಗಿದೆ.

ಜಿಲ್ಲಾ ಕಾಂಗ್ರೆಸ ಘಟಕದ  ಎಂ ಬಿ ಸೌದಾಗರ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಸಲಿಂ ಶೇಖ್, ವೆಂಕಣ್ಣ ಬಿರಾದಾರ ಪಾಟೀಲ, ಡಿ.ಡಿ.ದುರ್ವೆ, ಪಾಂಡು ಪೊಲೀಸ್, ಮಲ್ಲಪ್ಪ ಜಮಖಂಡಿ. ಫಕೀರಪ್ಪ ಮಾದರ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಸಂಶಿ ಹಾಗೂ ಸ್ಥಳೀಯ ರೈತ ಮುಖಂಡರು ಹಾಜರಿದ್ದರು. 

ವರದಿ : ಬಸವರಾಜ ಪೂಜಾರಿ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
​ಕಾಯಕವೇ ಕೈಲಾಸವೆಂದ ನಿಸ್ಸ್ವಾರ್ಥ ಸೇವಕ: ಶ್ರೀ ಶಿವಪ್ಪ ತಳವಾರ ಅವರಿಗೆ ಭಾವಪೂರ್ಣ ಶುಭಕೋರಿಕೆಪಕ್ಷ ಶಿಸ್ತಿಗೆ ಸವಾಲು: ಶಿವಾಜಿ ಮೇತ್ರೆ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷ ಉಚ್ಚಾಟನೆಇರಾನ್‌ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಗಂಭೀರ ಸ್ಥಿತಿ : ಅವರ ಹುತಾತ್ಮತೆಯ ಸುದ್ದಿ ಶೀಘ್ರಕರ್ನಾಟಕ ಹೈಕೋರ್ಟ್ ಗೆ 6 ನ್ಯಾಯಮೂರ್ತಿಗಳ ನೇಮಕಮುಂದಿನ 7 ವರ್ಷದವರೆಗೂ ಡಿ.ಕೆ ಶಿವಕುಮಾರ್ ಸಿಎಂ : ಲಕ್ಷ್ಮಣ್ ಸವದಿ ಐರ್ಯಲೆಂಡ್‌ಗೆ ೩೦೦ ರನ್‌ಗಳ ಗೆಲುವಿನ ಗುರಿಶ್ರೀಲಂಕಾ ಇಲೆವೆನ್ ಉತ್ತಮ ಮೊತ್ತಕಳಸಕೊಪ್ಪ ಸೇರಿದಂತೆ 8 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮ: ಜೆ ಟಿ ಪಾಟೀಲಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಕೋಟಿ ಕೋಟಿ ಹಣ ವಂಚನೆ ಕೇಸ್ : ಶಿವಾನಂದ ನೀಲಣ್ಣವರ ಇಡಿ ರೇಡ್ಹಾಡ ಹಾಗಲೇ ಗುಂಡಿಕ್ಕಿ ಕಾಂಗ್ರೆಸ್ ಮುಖಂಡ ಬರ್ಬರ ಹತ್ಯೆ