LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಪಾವಗಡ ತುಮೂಲ್ ನಿರ್ದೇಶಕ ಸ್ಥಾನಕ್ಕೆ ಮರು ಮತ ಏಣಿಕೆಯಲ್ಲಿ ವಿಜೇತರಾದ ಚನ್ನಮಲ್ಲಯ್ಯ 

Advertisement
ಪಾವಗಡ : ತಾಲ್ಲೂಕಿನಲ್ಲಿ ಭಾನವಾರ ಹುಟ್ಟುಹಬ್ಬದ ದಿನದಂದು ನಿರ್ದೇಶಕರಾಗಿ ಪಾವಗಡ ತುಮುಲ್ ಕಚೇರಿಯಲ್ಲಿ ಅಧಿಕಾರ ಸ್ವಿಕಾರ ಮಾಡಿದರು.

ಪಾವಗಡ ಕ್ಷೇತ್ರದ ತುಮುಲ್ ನಿರ್ದೇಶಕ ಸ್ಥಾನದ ಹಲವು ಗೊಂದಲಗಳ ನಡುವೆ ಭಾನುವಾರ ನೂರಾರು ಕಾರ್ಯಕರ್ತರು ಹಿತೈಷಿಗಳು ಹಾಗೂ ಜೆಡಿಎಸ್ ಮುಖಂಡರ ನೇತೃತ್ವದಲ್ಲಿ ಅಧಿಕಾರ ಸ್ವಿಕರಿಸಿದ ಚನ್ನಮಲ್ಲಯ್ಯ ಅವರಿಗೆ ಗಣ್ಯರು ಅವರ ಅಭಿಮಾನಿಗಳು. ಜೆಡಿಎಸ್ ಪಕ್ಷದ ಕಾರ್ಯಕರ್ತರು ನೂರಾರು ಜನ ಬಂದು ಸನ್ಮಾನಗಳು ಮತ್ತು ಅಭಿನಂದನೆಗಳು ಸಲ್ಲಿಸಿದರು.

ತುಮುಲ್ ಚುನಾವಣೆ ನಡೆದು ಒಂದುವರೆ ವರ್ಷ ಕಳೆದರೂ ಮಧುಗಿರಿ ಹಾಗೂ ಪಾವಗಡ ನಿರ್ದೇಶಕ ಸ್ಥಾನದ ಆಕಾಂಕ್ಷಿಗಳು ಚುನಾವಣೆಯಲ್ಲಿ ಸೋತ ನಂತರ ಚುನಾವಣೆ ಫಲಿತಾಂಶದಲ್ಲಿ ಹಲವು ವ್ಯತ್ಯಾಸಗಳು ಇರುವುದರಿಂದ ಹೈಕೋರ್ಟ್ ಮೇಟ್ಟಿಲೆರಿ ಮರು ಮತ ಏಣಿಕೆ ಮಾಡಬೇಕು ಎಂದು ಕೇಸ್ ದಾಖಲು ಮಾಡಿದ್ದರು ಹೈಕೋರ್ಟ್ ನಿರ್ದೇಶನಂತೆ ಮರುಮತ ಎಣಿಕೆ ನಡೆದ ಕಾರಣ ಚನ್ನಮಲ್ಲಯ್ಯ ನವರು ನಾಲ್ಕು ಮತಗಳ ಹಂತರದಿಂದ ಜಯಗಳಿಸಿದ್ದರು.

ಇದ್ದನ್ನು ಪ್ರಶ್ನಿಸಿ ಈ ಹಿಂದೆ ಪಾವಗಡ ತುಮುಲ್ ನಿರ್ದೇಶಕರಾದ ಚಂದ್ರಶೇಖರ ರೆಡ್ಡಿ ರವರು ಸುಪ್ರೀಂ ಮೇಟ್ಟಿಲೇರಿದ್ದರು ಆದರೆ ಸುಪ್ರೀಂ ಕೋರ್ಟ್ ನಲ್ಲಿಯೂ ಸಹ ಚಂದ್ರಶೇಖರ ರೆಡ್ಡಿರವರಿಗೆ ಮುಖಭಂಗವಾಗುವಂತೆ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದ ಕಾರಣ ಚನ್ನಮಲ್ಲಯ್ಯ ನವರಿಗೆ ನಿರ್ದೇಶನ ಸ್ಥಾನ ಜಯ ದಕ್ಕಿದೆ.


ಚನ್ನಮಲ್ಲಪ್ಪ ರವರ ಗೆಲುವು ಖಾತ್ರಿಯಾಗುತ್ತಿದ್ದಂತೆ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರಲ್ಲಿ ಸಂತಸ ಮೂಡಿತ್ತು ಭಾನುವಾರ ಚನ್ನಮಲ್ಲಯ್ಯ ನವರ ಹುಟ್ಟುಹಬ್ಬದ ಅಪಾರ ಬೆಂಬಲಿಗರೊಂದಿಗೆ ಭಾನುವಾರ ದಿನ ಕೇಕ್ ಅನ್ನು ಕತ್ತರಿಸಿ ಮತ್ತು ಪಾವಗಡ ಉಪ ಕೇಂದ್ರಕ್ಕೆ ಬೇಟಿ ನೀಡಿ ಅಧಿಕಾರ ಸ್ವಿಕಾರ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆಎಂ ತಿಮ್ಮ ರಾಯಪ್ಪ ಮಾತನಾಡಿ ನಮ್ಮ ಚನ್ನಮಲ್ಲಯ್ಯ. ಅವರಿಗೆ ಈ ಸಂದರ್ಭದಲ್ಲಿ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸುತ್ತಾ. ಈ ಹಿಂದೆ ಸಕ್ರೀಯವಾಗಿ ಎಲ್ಲಾ ಸಹಕಾರ ಕ್ಷೇತ್ರಗಳಲ್ಲು ಕೆಲಸ ಮಾಡಿದ್ದು ಹೆಚ್ಚಿನದ್ದಾಗಿ ಸಹಕಾರ ಕ್ಷೇತ್ರದಲ್ಲಿ ಯಾವುದೆ ರಾಜಕೀಯ ಮಾಡದೆ ಎಲ್ಲಾ ಪಕ್ಷದ ಕಾರ್ಯಕರ್ಯರಿಗೂ ಸಹಾಯ ಮಾಡಿದ್ದಾರೆ.
ನ್ಯಾಯಾಲಯದ ಮೋರೆ ಹೋಗಿ ನಾಲ್ಕು ಮತಗಳ ಹಂತರದಿಂದ ಗೆದ್ದು ಇಂದು ಅಧಿಕಾರ ಸ್ವಿಕಾರ ಮಾಡಿದ್ದಾರೆ. ಪಾವಗಡ ತಾಲೂಕಿನ ಪಕ್ಷಾತೀತವಾಗಿ ಎಲ್ಲಾ ರೈತರಿಗೆ ಸಹಾಯ ಮಾಡಿಕೊಂಡು. ಮತ್ತು ಈ ದಿನ ತುಮಲ್ ನಿರ್ದೇಶಕರಾಗಿ ನ್ಯಾಯಾಲಯದಿಂದ ಆಯ್ಕೆಯಾಗಿದ್ದೀರಾ ಸತ್ಯಕ್ಕೆ ಜಯಸಿಕ್ಕಿದೆ. ಅದಕ್ಕೆ ನೀವು ಎಲ್ಲಾ ರೈತರಿಗೂ ಕೆಲಸ ನಿರ್ವಹಿಸಬೇಕೆಂದು ಹೇಳಿ ಮುಂದಿನ ದಿನಗಳಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಬೇಕೆಂದು ತಿಳಿಸುತ್ತೇನೆ.


ಈ ವೇಳೆ ನೂತನ ಪಾವಗಡ ತಾಲೂಕಿನ ಹಾಲು ಉತ್ಪಾದಕರ ಸಂಘದ ನಿರ್ದೇಶಕ. ಮತ್ತು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಮಾತನಾಡಿ. ನಾನು ಸಾಕಷ್ಟು ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದೆನೆ ಆದರೆ ಈ ರೀತಿಯ ರಾಜಕೀಯ ಹಸ್ತಕ್ಷೇಪ ನೋಡಿಲ್ಲ ಹಾಗೂ ನಾವು ಯಾವತ್ತು ಸಹಕಾರ ಕ್ಷೇತ್ರದಲ್ಲಿ ರಾಜಕಾರಣ ಮಾಡದೆ ಜನರಿಗೆ ಸೇವೆ ಸಲ್ಲಿಸುತಿದ್ದೆವೆ ಎಂದು ತಿಳೀಸಿ. ಹಾಗೂ ಸಹಕಾರ ಕ್ಷೇತ್ರದಲ್ಲಿ ಮಹಿಳೆಯ ಸಂಘಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆಂದು ಹೇಳಿ. ಸಹಕಾರ ಕ್ಷೇತ್ರದಲ್ಲಿ ಪಕ್ಷಾತೀತವಾಗಿ ಕೆಲಸ ಮಾಡಿ ರೈತರಿಗೆ ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದು ಭರವಸೆ ತಿಳಿಸುತ್ತೇನೆ.

ಈ ಸಂಧರ್ಭದಲ್ಲಿ ಜೆಡಿಎಸ್ ಹಿರಿಯ ಮುಖಂಡರುಗಳರಾದ. ತಿಮ್ಮಾರೆಡ್ಡಿ. ಆರ್ ಸಿ ಅಂಜನಪ್ಪ. ಎಸ್ ಕೆ ರೆಡ್ಡಿ. ಬಲರಾಮ್ ರೆಡ್ಡಿ. ಎನ್ ಎ ಈರಣ್ಣ.
ತುಮುಲ್ ನಿರ್ದೇಶಕರಗಳರಾದ ಭಾರತಿ ಶ್ರೀನಿವಾಸ್, ಕೊಡವಾಡಿ ಚಂದ್ರಶೇಖರ್, ಎಸ್.ಆರ್.ಗೌಡ . ಜೆಡಿಎಸ್ ಪಕ್ಷದ ನಾಯಕರುಗಳಾದ. ಅಕ್ಕಲಪ್ಪ ನಾಯ್ಡು, ರವೀಂದ್ರ ರೆಡ್ಡಿ ಬಿಕೆಹಳ್ಳಿ. ಮಂಜುನಾಥ್ ಚೌಧರಿ. ತಿರುಮಣಿ ಸುರೇಂದ್ರ. ಗುಟ್ಟಹಳ್ಳಿ ಮಣಿ. ಕಾವಲಗೆರೆ ರಾಮಾಂಜಿ . ಗಂಗಾಧರ ನಾಯ್ಡು. ಮನು ಮಹೇಶ್. ಬಿಕೆ ಹಳ್ಳಿ ಬೋರ್ವೆಲ್ ಮಂಜುನಾಥ್ ರೆಡ್ಡಿ. ಆ ಬಂಡೆ ಗೋಪಾಲ. ತಿರುಮಣಿ ಬಾಲು. ಇನ್ನೂ ಮುಂತಾದ ಕಾರ್ಯಕರ್ತರು ಹಾಲು ಒಕ್ಕೂಟದ ಕಾರ್ಯದರ್ಶಿಗಳು. ಮತ್ತು ಅಧ್ಯಕ್ಷರು ಹಾಗೂ ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.

ವರದಿ: ಶಿವಾನಂದ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ