ಚಾಮರಾಜನಗರ : ನಗರ ಪಟ್ಟಣ ಪೊಲೀಸ್ ಠಾಣಾ ಸಮೀಪ ಮಂಗಳವಾರ ಹೆಂಡತಿಯನ್ನು ಕುಡುಗೋಲಿನಿಂದ ಕೊಚ್ಚಿ ಮರಣಾಂತಿಕಾವಾಗಿ ಗಂಡನೇ ಕೊಲೆಮಾಡಿರುವ ಹಿನ್ನಲೆಯಲ್ಲಿ ಚಾಮರಾಜನಗರ ಪಟ್ಟಣದ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ರನ್ನು ಅಮಾನತ್ತು ಮಾಡುವ ವದಂತಿಗಳು ಕೇಳುಬರುತ್ತಿದ್ದು ಇಂತಹ ವದಂತಿಗಳಿಗೆ ಕಿವಿಗೊಟ್ಟು ಪೊಲೀಸ್ ವರಿಷ್ಟಧಿಕಾರಿಗಳು ಕೊಲೆಯದ ಘಟನೆಗೆ ಸಂಬಂಧ ಇಲ್ಲದ ಪಟ್ಟಣದ ಪೊಲೀಸ್ ಇನ್ಸ್ಪೆಕ್ಟರ್ ಅನ್ನು ಅಮಾನತ್ತು ಮಾಡುವ ನಿರ್ಧಾರ ತೆಗೆದುಕೊಂಡರೇ ದಲಿತ ಪ್ರಗತಿಪರ ಸಂಘಟನೆಗಳು ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾದ ವೆಂಕಟರಮಣ (ಪಾಪು)ಹಾಗೂ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರು ಅದ ರಾಜಣ್ಣ ಯಾರಿಯೂರು. ಹಾಗೂ ಜನಶಕ್ತಿ ಸುರೇಶ್ ರಾಮಸಮುದ್ರ. Dss ಶಿವಣ್ಣ. ರಂಗಸ್ವಾಮಿ ಮುಂತಾದವರು ಪತ್ರಿಕಾಘೋಷ್ಟಿಯಲ್ಲಿ ತಿಳಿಸಿದರು
ವರದಿ : ಸ್ವಾಮಿ ಬಳೇಪೇಟೆ

