ಮೈಸೂರು : ಮುಖ್ಯಮಂತ್ರಿ ಆಗುವ ವಿಚಾರಕ್ಕೆ ಸಂಬಂಧಪಟ್ಟಂತೆ ಈ ಹಿಂದೆ ಅನೇಕ ಬಾರಿ ಸಚಿವ ಸತೀಶ್ ಜಾರಕಿಹೊಳಿ, 2028ಕ್ಕೆ ನಾನೇ ಮುಖ್ಯಮಂತ್ರಿ ಎಂದು ಹೇಳಿಕೆ ನೀಡಿದ್ದರು ಆದರೆ ಇದೀಗ, 2028ಕ್ಕೂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎಂದು ಮೈಸೂರಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅಚ್ಚರಿ ಹೇಳಿಕೆ ನೀಡಿದರು.
ಮೈಸೂರಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ ನನಗೆ ಇನ್ನೂ ವಯಸ್ಸಿದೆ ನಾನು ಇನ್ನೂ ಕಾಯುತ್ತೇನೆ. ಅವಕಾಶ ಸಿಕ್ಕರೆ 2028ಕ್ಕೆ ಮುಖ್ಯಮಂತ್ರಿಯಾಗುತ್ತೇನೆ ಅಂತ ಈ ಹಿಂದೆ ಹೇಳಿಕೆ ಕೊಟ್ಟಿದ್ದೆ.
ಡಿಕೆ ಶಿವಕುಮಾರ್ ಅವರು ಮುಂದೆಯೂ ನಾನೇ ಸಿಎಂ ಅಂತಿದ್ದಾರೆ ಸಂತೋಷ. ನನಗೆ ಅವರೇ ಸಿಎಂ ಆಗಲಿ ನಾವು ಕಾಯುತ್ತೇವೆ ಎಂದು ಮೈಸೂರಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದರು.
ಇನ್ನೂ ಆರ್ಥಿಕ ಇಲಾಖೆ ಸರ್ಕಾರಕ್ಕೆ ಸಲಹೆ ನೀಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ, ಆರ್ಥಿಕ ಇಲಾಖೆ ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂದಿಲ್ಲ ಬಜೆಟ್ ನಲ್ಲಿ ನಾವು ಏನು ಘೋಷಣೆ ಮಾಡಿದ್ದೆವೋ ಅಷ್ಟಕ್ಕೆ ಮಾತ್ರ ನಮ್ಮ ಬಳಿ ಹಣ ಇದೆ ಎಂದು ಇಲಾಖೆ ಹೇಳಿದೆ ಹೊಸ ಘೋಷಣೆಗೆ ಹಣ ಹೊಂದಿಸುವುದು ಕಷ್ಟ ಎಂದು ಹೇಳಿದೆ.
ಇದನ್ನು ಎಲ್ಲಾ ಸರ್ಕಾರಕ್ಕೂ ಆರ್ಥಿಕ ಇಲಾಖೆ ಹೇಳುತ್ತದೆ ಯೋಚನೆ ಮಾಡಿ ಹೊಸ ಘೋಷಣೆ ಮಾಡಿ ಎಂದು ಸಲಹೆ ನೀಡಿದೆ ಅದನ್ನು ನಾವು ಗಮನಿಸುತ್ತೇವೆ.
ಕೆಲವೊಂದು ಇಲಾಖೆಗಳಲ್ಲಿ ಹಣ ವೆಚ್ಚ ಆಗುವುದಿಲ್ಲ ಆ ಹಣವನ್ನು ಹೊಸ ಘೋಷಣೆ ಗಳಿಗೆ ಬಳಸುತ್ತೇವೆ ಆರ್ಥಿಕ ಇಲಾಖೆ ಪತ್ರದ ಅರ್ಥ ಸರ್ಕಾರ ದಿವಾಳಿ ಅಂತ ಅಲ್ಲ ಎಂದು ತಿಳಿಸಿದರು.


