LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಸಾಹಿತಿ ವೀರಣ್ಣಗೌಡರಿಗೆ ಡಾ.ಹೆಚ್.ಎನ್.ನರಸಿಂಹಯ್ಯ ರಾಜ್ಯ ಪ್ರಶಸ್ತಿ ಪ್ರಧಾನ

Advertisement
ತುರುವೇಕೆರೆ : ತಾಲ್ಲೂಕಿನ ಸಾಹಿತಿ ಹಡವನಹಳ್ಳಿ ವೀರಣ್ಣಗೌಡರು ಬರೆದಿರುವ ’ಉರಿವ ದೀಪದ ಕೆಳಗೆ’ ಕೃತಿಗೆ ವಿಚಾರವಾದಿ ಡಾ.ಹೆಚ್.ಎನ್.ನರಸಿಂಹಯ್ಯ ಹೆಸರಿನ ರಾಜ್ಯ ಮಟ್ಟದ ಪುಸ್ತಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಭಾನುವಾರ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಜನಮನ ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಈ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಎಲೆರಾಂಪುರ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ಹನುಮಂತನಾಥ ಸ್ವಾಮೀಜಿ, ವಚನ ಜ್ಯೋತಿ ಬಳಗದ ಅಧ್ಯಕ್ಷರಾದ ಎಸ್.ಪಿನಾಕಪಾಣಿ, ಟ್ರಸ್ಟ್ನ ಅಧ್ಯಕ್ಷರಾದ ಡಿ.ಟಿ.ಗೋವಿಂದರಾಜು, ಲೇಖಕ ಮಂಜುನಾಥ್ ದಂಡಿನಶಿವರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ವೀರಣ್ಣಗೌಡರಿಗೆ ಶುಭ ಕೋರಿದರು.

"ಉರಿವ ದೀಪದ ಕೆಳಗೆ" ಕಥಾ ಸಂಕಲನವು ವೀರಣ್ಣಗೌಡರ ಹತ್ತನೇ ಕೃತಿಯಾಗಿದ್ದು, ಈ ವರ್ಷ ತುಮಕೂರಿನಲ್ಲಿ ಬಿಡುಗಡೆಯಾಗಿತ್ತು. ಈ ಕೃತಿಯಲ್ಲಿ ಹತ್ತು ವಿಭಿನ್ನವಾದ ಕಥೆಗಳನ್ನು ಲೇಖಕರು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಗ್ರಾಮೀಣ ಸೊಗಡಿನ ಭಾಷೆಯಲ್ಲಿ ಮೂಡಿ ಬಂದಿರುವ ಈ ಕಥೆಗಳನ್ನು ಪ್ರಸಿದ್ದ ಲೇಖಕರುಗಳೂ ಸಹ ಓದಿ ಮೆಚ್ಚಿದ್ದನ್ನು ಇಲ್ಲಿ ಸ್ಮರಿಸಬಹುದು.

ವರದಿ : ಗಿರೀಶ್ ಕೆ ಭಟ್
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಐರ್ಯಲೆಂಡ್‌ಗೆ ೩೦೦ ರನ್‌ಗಳ ಗೆಲುವಿನ ಗುರಿಶ್ರೀಲಂಕಾ ಇಲೆವೆನ್ ಉತ್ತಮ ಮೊತ್ತಕಳಸಕೊಪ್ಪ ಸೇರಿದಂತೆ 8 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮ: ಜೆ ಟಿ ಪಾಟೀಲಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಕೋಟಿ ಕೋಟಿ ಹಣ ವಂಚನೆ ಕೇಸ್ : ಶಿವಾನಂದ ನೀಲಣ್ಣವರ ಇಡಿ ರೇಡ್ಹಾಡ ಹಾಗಲೇ ಗುಂಡಿಕ್ಕಿ ಕಾಂಗ್ರೆಸ್ ಮುಖಂಡ ಬರ್ಬರ ಹತ್ಯೆ ಆಗಸ್ಟ್ 15ವರೆಗೆ ಖಾತೆ ಹಂಚಿಕೆಗೆ ಕಾಲಾವಕಾಶ ಇದೆ : ಡಿ.ಕೆ.ಶಿವಕುಮಾರ್ಆಗಸ್ಟ್ 13 ರಂದು ಅಧಿವೇಶನ,14 ರಂದು ನೂತನ ಉಪಸಭಾಪತಿಗಳ ಆಯ್ಕೆ : ಡಿ.ಕೆ.ಶಿವಕುಮಾರ್ಹುತಾತ್ಮ ಯೋಧ ಅಂಗಡಿ ಮಂಜುನಾಥ ನಾಯಕ ಸಾದಾಪುರ ಪುಣ್ಯ ಸ್ಮರಣೆ​ಶ್ರೀ ಕ್ಷೇತ್ರ ಪರಕನಹಟ್ಟಿಯಿಂದ ಹುಬ್ಬಳ್ಳಿಗೆ ಪ್ರಥಮ ವರ್ಷದ ಸಿದ್ಧಾರೂಢ ಪಾದಯಾತ್ರೆ: ಭಕ್ತಿಪರವಶತೆಯಿಂದ ಚಾಲನೆಶ್ರೀ ಮಹರ್ಷಿ ವಾಲ್ಮೀಕಿ ವೃತ್ತ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿದ  : ಶಾಸಕ ಜಿ.ಹಂಪಯ್ಯ ನಾಯಕ ಸಾಹುಕಾರ