ಡರ್ಬಾನ್: ದ. ಆಪ್ರಿಕಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ವಿರುದ್ಧ ಇಲ್ಲಿ ನಡೆದಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದ ಅಂತ್ಯಕ್ಕೆ ಎದುರಾಳಿ ತಂಡವನ್ನು 6 ವಿಕೆಟ್ ಗೆ 187 ಮೊತ್ತಕ್ಕೆ ಕಟ್ಟಿ ಹಾಕಿದೆ.
ಇಲ್ಲಿನ ಕಿಂಗ್ಸ್ ಮಿಡ್ ಮೈದಾನದಲ್ಲಿ ಮೊದಲ ದಿನದ ಆಟದಲ್ಲಿ 65.2 ಓವರ್ ಗಳು ಮಾತ್ರ ಸಾಧ್ಯವಾದವು. ದ. ಆಪ್ರಿಕಾ ಬೌಲರುಗಳು ಆಸ್ಟ್ರೇಲಿಯಾ ತಂಡದ ಯಾ ಬ್ಯಾಟ್ಸಮನ್ ರನ್ನು ದೊಡ್ಡ ಮೊತ್ತ ಗಳಿಸಲು ಬಿಡಲಿಲ್ಲ. ಎಮ್ ರೇನ್ ಶೇವ್ ಮಾತ್ರ 46 ರನ್ ಮಾಡಿ ದ. ಆಪ್ರಿಕಾ ಬೌಲರುಗಳಿಗೆ ಪ್ರತಿರೋಧ ತೋರಿದರು.


